ಬೆಂಗಳೂರು : ನಗರದ ವೈಟ್ ಫೀಲ್ಡ್ ವಿಭಾಗದಲ್ಲಿ ಪಬ್ ಗಳಿಗೆ ಯಾವುದೇ ರೂಲ್ಸ್ ಇಲ್ವಾ? ಪ್ರತಿನಿತ್ಯ ಪಬ್ ಗಳಿಂದ ಸಮಸ್ಯೆಯಾಗುತ್ತಿದೆ ಎಂದು ಪ್ರತ್ಯೇಕವಾಗಿ ಇಬ್ಬರು ಟ್ವೀಟ್ ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ.


COMMERCIAL BREAK
SCROLL TO CONTINUE READING

"ಮಾರತಹಳ್ಳಿ ಐರನ್ ಹಿಲ್ ಪಬ್ ನಲ್ಲಿ ಮಧ್ಯರಾತ್ರಿ 12 ಗಂಟೆ ನಂತರ ಜೋರಾಗಿ ಡಿಜೆ ಮ್ಯೂಸಿಕ್ ಸೌಂಡ್ ಪ್ಲೇ ಮಾಡುವ ಮೂಲಕ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಮಾಡಲಾಗುತ್ತಿದೆ. ಇದೇ ಹೈದರಾಬಾದ್ ಪೊಲೀಸರಾಗಿದ್ರೆ ರಾತ್ರಿ 10 ಗಂಟೆಗೆ ನಗರದ ಎಲ್ಲಾ ಪಬ್ ಗಳನ್ನ ಮುಚ್ಚಿಸುತ್ತಿದ್ರು" ಎಂದು ವರ್ಷಾ ರೆಡ್ಡಿ ಎಂಬುವವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಹೊರಟ್ಟಿ ಅವರದ್ದು ಪ್ರಮುಖ ಪಾತ್ರ: ಸಿಎಂ ಬೊಮ್ಮಾಯಿ


ಇನ್ನೂ ಕಾಡುಗೋಡಿಯ ರೆಡ್ರಿನ್ಹೋ ಪಬ್ ನಲ್ಲಿಯೂ ಇದೇ ಕಥೆಯಾಗಿದ್ದು "ರಾತ್ರಿ ಒಂದು ಗಂಟೆಯ ನಂತರ ಜೋರಾಗಿ ಡಿ.ಜೆ ಮ್ಯೂಸಿಕ್ ಹಾಕಲಾಗುತ್ತಿದೆ. ಎಷ್ಟು ಬಾರಿ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ" ಎಂದು ಜಯಶ್ರೀ ಶುಕ್ಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.


ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಲೆಫ್ಟ್ ರೈಟ್..!


ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವರು ಇಂದು ರಿವ್ಯೂ ಮೀಟಿಂಗ್ ನಡೆಸಿದ್ದಾರೆ. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಸಚಿವರು ಫುಲ್ ಕ್ಲಾಸ್ ತೆಗದುಕೊಂಡಿದ್ದಾರೆ. ನಗರದಲ್ಲಿ ಪಬ್, ಕ್ಯಾಸಿನೋ, ಲೇಡಿಸ್ ಬಾರ್, ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಎಂದು ಗರಂ ಆಗಿದ್ದಾರೆ.


ಪಬ್, ಕ್ಯಾಸಿನೋ ಮತ್ತು ಲೇಡಿಸ್ ಬಾರ್ ಗಳ ಬಗ್ಗೆ ಮಾಹಿತಿ ಮತ್ತು ದಾಖಲೆ ಸಮೇತ ಸಭೆಗೆ ಬಂದಿದ್ದ ಗೃಹ ಸಚಿವರು, ಕೆಲ ರೌಡಿಶೀಟರ್ ಗಳ ಚಟುವಟಿಕೆ ಕೂಡ ಹೆಚ್ಚಾಗಿದೆ. ಸ್ಪಾಗಳ ಹಾವಳಿ ಕೂಡ ಹೆಚ್ಚಾಗಿದೆ ಅದನ್ನ ಮಟ್ಟ ಹಾಕುವ ಕೆಲಸವಾಗುತ್ತಿಲ್ಲ. ಯಾರು ಕೂಡ ಸರಿಯಾಗಿ ದೂರುಗಳನ್ನ ತೆಗದುಕೊಳ್ಳುತ್ತಿಲ್ಲ. ಡಿಸಿಪಿಗಳು ಠಾಣಾ ಮಟ್ಟಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿಲ್ಲ. ಎಸಿಪಿಗಳು ಪೊಲೀಸ್‌ ಕಾನ್ಸ್ಟೇಬಲ್ ಗಳ ಮಾದರಿಯಲ್ಲಿ ನೀವು ಕೆಲಸ ಮಾಡುತ್ತಿದ್ದಿರಾ, ನೀವು ದೂರು ತೆಗೆದುಕೊಳ್ಳದ ಹಿನ್ನೆಲೆ ನನ್ನ ಬಳಿ ದೂರು ಬರುತ್ತಿವೆ ಎಂದು ಖಡಕ್ ಆಗಿ ಗದರಿದ್ದಾರೆ.


ಇದನ್ನೂ ಓದಿ: ಅಡಿಕೆ ಎಲೆಚುಕ್ಕಿ ರೋಗ ಬಗ್ಗೆ ಸರ್ಕಾರದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ


ಪೊಲೀಸಿಂಗ್ ಮತ್ತು ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಹೆಸರು ಸೂಚಿಸಿ ಗೃಹ ಸಚಿವರು ವಾರ್ನಿಂಗ್ ನೀಡಿದ್ದಾರೆ. ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂದಿ, ದಂಪತಿಯಿಂದ ಲಂಚ ಪಡೆದ ಪ್ರಕರಣ ಪ್ರಸ್ತಾಪಿಸಿದ ಸಚಿವರು ಕೇವಲ ಸಸ್ಪೆಂಡ್ ಮಾಡಿದರೆ ಹೇಗೆ, ಅವರ ಮೇಲೆ ಕೇಸ್ ಬುಕ್ ಮಾಡಿ. 1000 ರೂಪಾಯಿ ವಸೂಲಿ ಮಾಡಿ ಇಲಾಖೆ ಮರ್ಯಾದೆ ಕಳೆದಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶೀಘ್ರವಾಗಿ ನಗರದಲ್ಲಿ ಕ್ಯಾಸಿನೋ, ಲೇಡಿಸ್ ಪಬ್, ಕ್ಲಬ್ ಗಳು ಬಂದ್ ಆಗಬೇಕು ಎಂದು ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಖಡಕ್  ವಾರ್ನಿಂಗ್‌ ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.