ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ಕರ್ತವ್ಯನಿರತ ಸಂದರ್ಭದಲ್ಲಿ ಮೃತ ಪಟ್ಟ ಹಾಗೂ ಹಲವು ಕಾರಣಗಳಿಂದ ಕೆಲಸ ಬಿಟ್ಟ ನೌಕರರ ಕುಟುಂಬಕ್ಕೆ ಇಂದು ಸಾರಿಗೆ ಇಲಾಖೆ‌ ಗುಡ್ ನ್ಯೂಸ್ ಕೊಟ್ಟಿದೆ. ಅದರಲ್ಲೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ  ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಕಾಯುತ್ತಿದ್ದ 58 ಅಭ್ಯರ್ಥಿಗಳಿಗೆ ತಾಂತ್ರಿಕ ಸಹಾಯಕ ಹುದ್ದೆಗಳಿಗೆ  ನೇಮಕಾತಿ ಆದೇಶ ನೀಡಲಾಗುತ್ತಿದ್ದು, ಅದರಲ್ಲಿ ಇಂದು ಈ ಕೆಳಕಂಡ 5 ಅಭ್ಯರ್ಥಿಗಳಿಗೆ  ನೇಮಕಾತಿ ಆದೇಶವನ್ನು ಸನ್ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ವಿವರ :
1.ಶ್ರೀಮತಿ ರೇಖಾ ಆರ್ ಪರಾಂಡೆ ಕೋಂ(ಪತ್ನಿ) ದಿವಂಗತ ರಾಯಪ್ಪ ಬಿ ಪರಾಂಡೆ ಚಾಲಕ / ನಿರ್ವಾಹಕ ಬಾಗಲಕೋಟೆ ವಿಭಾಗ    


2.ಸುಮಾಬಾಯಿ  ಕೋಂ(ಪತ್ನಿ) ದಿವಂಗತ. ಶೇಖರನಾಯ್ಕ ಕೆ. ಎಂ ಚಾಲಕ ಹಾವೇರಿ ವಿಭಾಗ  


3.ರೂಪ ಡಿ ಮಾಯಣ್ಣವರ ಕೋಂ(ಪತ್ನಿ) ದಿವಂಗತ. ದಾನಪ್ಪ ಮಾಯಣ್ಣವರ ಚಾಲಕ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ 


4 ಮೊಹಮ್ಮದ್ ಫಾರೂಕ್ ಎಂ ಕೆಳಗಡೆ  ಬಿನ್ (ಮಗ) ದಿವಂಗತ ಮೊಹಮ್ಮದ್ ಗೌಸ್ ಹೆಚ್ ಕೆಳಗಡೆ ಚಾಲಕ ಹಾವೇರಿ ವಿಭಾಗ


5. ಶ್ರೀ ಮಂಜುನಾಥ ಎಂ ತಿಗಡಿ ಬಿನ್ (ಮಗ) ದಿವಂಗತ. ಮಾರುತಿ ಎಸ್ ತಿಗಡಿ ಚಾಲಕ ನಿರ್ವಾಹಕ/ ಧಾರವಾಡ ವಿಭಾಗ 


ಈ ಸಂದರ್ಭದಲ್ಲಿ ಶ್ರೀ ಭರತ್ ಎಸ್ ,ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು , ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಸ್ಥಿತರಿದ್ದರು.


https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK