ಚಾಮರಾಜನಗರ: ವೃದ್ಧಾಪ್ಯ ವೇತನ ಹಾಗೂ ಅನ್ನಭಾಗ್ಯದ ಹಣ ಕೈ ಸೇರದ ವೃದ್ಧೆಯೊಬ್ಬರು ಡಿಸಿಗೆ ದೂರು ಕೊಟ್ಟು ತದನಂತರ ತನ್ನ ಹಣವನ್ನು ತಾನು ಪಡೆದ ಪ್ರಸಂಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಚೆನ್ನಬಸಮ್ಮ‌ ಎಂಬವರು ದೂರು ಕೊಟ್ಟು ತಮ್ಮ ಹಣ ಪಡೆದ ವೃದ್ಧೆ. ತೆರಕಣಾಂಬಿ ಗ್ರಾಹಕ ಸೇವಾ ಕೇಂದ್ರದಲ್ಲಿ ತನಗರಿವಿಲ್ಲದೇ ವೃದ್ಧಾಪ್ಯ ವೇತನ ₹1200 ಹಾಗೂ ಅನ್ನಭಾಗ್ಯದ ನಗದು ₹340 ಡ್ರಾ ಆಗಿದೆ. ಆದರೆ ಅದನ್ನು ತಾನು ಪಡೆದಿಲ್ಲ, ತನಗೆ ನ್ಯಾಯ ದೊರಕಿಸಿಕೊಡಿ ಎಂದು ಚಾಮರಾಜನಗರ ಡಿಸಿ ಶಿಲ್ಪಾನಾಗ್ ಅವರಿಗೆ ಕಳೆದ 21 ರಂದು  ದೂರು ಕೊಟ್ಟಿದ್ದರು. 


ಇದನ್ನೂ ಓದಿ- ಬಿಜೆಪಿ-ಜೆಡಿಎಸ್ ಮುಖಂಡರು ಇಂದು ಕಾಂಗ್ರೆಸ್ ಸೇರ್ಪಡೆ


ಡಿಸಿ ಚಾಮರಾಜನಗರ ತಹಶಿಲ್ದಾರ್ ಬಸವರಾಜು ಅವರಿಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರು. ತಹಶಿಲ್ದಾರ್ ಬಸವರಾಜು ಅವರು ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ, ಫಲಾನುಭವಿ ಚೆನ್ನಬಸಮ್ಮ ಇಬ್ಬರನ್ನೂ ವಿಚಾರಣೆ‌ ನಡೆಸಿ ಡ್ರಾ ಆದ ಹಣ ವೃದ್ಧೆ ಕೈ ಸೇರಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯಿಂದ ₹1540 ನ್ನು ವೃದ್ಧೆಗೆ ಕೊಡಿಸಿದ್ದಾರೆ. 


ಇದನ್ನೂ ಓದಿ- ಹತ್ತಿ ಇಳಿಯಲು ಕಾಂಗ್ರೆಸ್ ಪಕ್ಷ ಬಸ್ ಅಲ್ಲ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಮಾತು


ಒಟ್ಟಿನಲ್ಲಿ ಅಜ್ಜಿ ತನ್ನ ಹಣಕ್ಕಾಗಿ ದೂರು ಕೊಟ್ಟಿದ್ದಷ್ಟೇ ಅಲ್ಲದೇ ಹಣವನ್ನು ಪಡೆದು ಜಯ ಸಾಧಿಸಿರುವ ಅಜ್ಜಿ ಮುಖದಲ್ಲಿ ಮಂದಹಾಸ ಮೂಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.