ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಮಾಸ್ಕ್ ಇಲ್ಲದೆ ಹೊರಬಂದರೆ ನಿಮ್ಮ ಜೇಬಿಗೆ ಬಾರೀ ವೆಚ್ಚವಾಗಬಹುದು ಎಚ್ಚರ... ಹೌದು ಅನ್‌ಲಾಕ್ -5 (Unlock 5) ನಿಯಮಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರ ಮಾಸ್ಕ್ (Mask) ಧರಿಸದೇ ಓಡಾಡುವವರಿಗೆ ವಿಧಿಸುವ ದಂಡವನ್ನು 5 ಪಟ್ಟು ಹೆಚ್ಚಿಸಿ ಸಾವಿರ ರೂಪಾಯಿಗೆ ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಕೋವಿಡ್ -19 (Covid 19) ತಡೆಗಟ್ಟುವಿಕೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದರೆ ಸರ್ಕಾರ 200 ರೂ.ಗಳ ದಂಡವನ್ನು ವಿಧಿಸುತ್ತಿತ್ತು. ಆದರೆ 200 ರೂ. ತಾನೇ ಅನ್ನೋ ಕೆಲ ಜನರು ಈ ದಂಡವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಹಾಗಾಗಿ ದಂಡದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.


ಸರ್ಕಾರದ ಪ್ರಕಾರ ಕರ್ನಾಟಕದ ಪುರಸಭೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವುದು ಕಂಡು ಬಂದರೆ ಒಂದು ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಇತರ ಸ್ಥಳಗಳಲ್ಲಿ ದಂಡದ ಮೊತ್ತವನ್ನು 500 ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸೂಚನೆಗಳನ್ನು ಸಹ ನೀಡಲಾಗಿದೆ.


VIDEO: ಮಾಸ್ಕ್ ಬದಲಿಗೆ ಹಾವು ಧರಿಸಿ ಬಸ್‌ನಲ್ಲಿ ಹತ್ತಿದ ವ್ಯಕ್ತಿ, ಮುಂದೆ...!


ಏತನ್ಮಧ್ಯೆ ಅಕ್ಟೋಬರ್ 15ರ ನಂತರ ರಾಜ್ಯದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯಬಹುದು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಹೇಳಿದರು. ಇದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಯೋಜನೆ ರೂಪಿಸುವಂತೆ ನಿರ್ದೇಶಿಸಲಾಗಿದೆ.


ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಮನೆಯಿಂದ ಹೊರಬಂದರೆ ಬೀಳುತ್ತೆ ಭಾರೀ ದಂಡ


ಇವೆಲ್ಲದರ ನಡುವೆ 2020 - 21 ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ಮಧ್ಯಂತರ ರಜೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ತೀರ್ಮಾನ ಕೈಗೊಂಡಿದ್ದು ಅಕ್ಟೋಬರ್ 3 ರಿಂದ 26ರವರೆಗೆ ನೀಡಲಾಗುತ್ತಿದ್ದ ಮಧ್ಯಂತರ ರಜೆಯನ್ನು ರದ್ದು ಪಡಿಸಲಾಗಿದೆ. ಅಕ್ಟೋಬರ್ 15ರಿಂದ ಶಾಲೆಗಳನ್ನು (Schools) ಆರಂಭಿಸಬಹುದು ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.