ಬೆಂಗಳೂರು: ಹೌದು,ಕರ್ನಾಟಕದ ಪಾಲಿಗೆ ನವಂಬರ್ ತಿಂಗಳು ಶಾಪವೆಂದೇ ಹೇಳಬಹುದು.ಇದಕ್ಕೆ ಕಾರಣವಿಷ್ಟೇ ಕೇವಲ ಈ ತಿಂಗಳೊಂದರಲ್ಲಿಯೇ ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಮೂವರು ಕನ್ನಡಿಗರು ಕೊನೆಯುಸಿರೆಳೆದಿದ್ದಾರೆ.  


COMMERCIAL BREAK
SCROLL TO CONTINUE READING

 ಇದೇ ನವಂಬರ್ 12 ರಂದು ಕೇಂದ್ರ ಸಚಿವ ಅನಂತಕುಮಾರ್ ಅವರು ನಿಧನರಾಗಿದ್ದರು, ಆಮೂಲಕ  ಕರ್ನಾಟಕವು ಕನ್ನಡದ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿತು.ಇದಾದ ಬೆನ್ನಲೇ ರೆಬೆಲ್ ಸ್ಟಾರ್ ಅಂಬರೀಶ್ ನವಂಬರ್ 24ರಂದು ಮೃತಪಟ್ಟಿದ್ದರು,ಇದರ ಮರು ದಿನವೇ ಹಿರಿಯ ರಾಜಕಾರಣಿ  ಮತ್ತು  ಮಾಜಿ ರೈಲ್ವೆ ಸಚಿವ ಜಾಫರ್ ಶರೀಫ್ ಅವರು ನಿಧನವಾಗುವುದರ ಮೂಲಕ ಒಂದು ತಿಂಗಳ ಅವಧಿಯಲ್ಲಿ ಈ ಮೂವರು ನಾಯಕರನ್ನು ಕರ್ನಾಟಕ ಕಳೆದುಕೊಂಡಿದೆ.


ಅಂಬರೀಶ್ ಅವರು ಸಿನಿಮಾ ರಂಗ ಮತ್ತು ರಾಜಕೀಯ ಎರಡರಲ್ಲಿಯೂ ತಮ್ಮನ್ನು  ಪರೀಕ್ಷೆಗೆ ಒಳಪಡಿಸಿಕೊಂಡಿದ್ದರು.ಇನ್ನೊಂದೆಡೆಗೆ ಅನಂತಕುಮಾರ್ ದೆಹಲಿ ರಾಜಕಾರಣದಲ್ಲಿ ಅತ್ಯಂತ ಉತ್ತುಂಗಕ್ಕೆರಿದ್ದರು.ಇದರ ಜೊತೆಗೆ ಜಾಫರ್ ಶರೀಫ್ ನಿಜಲಿಂಗಪ್ಪನವರ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿ ನಂತರ ಇಂದಿರಾಗಾಂಧಿಯವರ ಕಾಲದಲ್ಲಿ ರೈಲ್ವೆ ಸಚಿವರಾಗಿದ್ದರು.ಹೀಗೆ ರಾಜಕಾರಣದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮದೇ ಕೊಡುಗೆಗಳ ಮೂಲಕ ಗಮನ ಸೆಳೆದಿದ್ದ ಈ ಮೂವರು ಈಗ ನಿಧನರಾಗಿರುವುದು ಈಗ  ಕರ್ನಾಟಕಕ್ಕೇ ತುಂಬಲಾರದ ನಷ್ಟವಾದಂತಾಗಿದೆ.