Green Flag in JJR City: ಶಿವಾಜಿ ನಗರವಾಯ್ತು, ಈಗ ಜೆಜೆಆರ್ ನಗರದಲ್ಲಿ ಹಸಿರು ಧ್ವಜ ಹಾರಾಟದ ಫೋಟೋ ವೈರಲ್
Viral Flying Green Flag in JJR City: ರಾಜ್ಯದಲ್ಲಿ ಧ್ವಜ ದಂಗಲ್ ಆರಂಭವಾಗಿದೆ. ಕೇರಗೋಡಿನ ಘಟನೆ ಮಾಸುವ ಮೊದಲೆ ರಾಜ್ಯದ ಹಲವು ಕಡೆ ಧ್ವಜಸ್ತಂಭಗಳ ತೆರವು, ಅದಲ್ಲಿ ಹಾರುತ್ತಿದ್ದ ಇತರೆ ಧ್ವಜಗಳ ಪೋಟೊಗಳು ವೈರಲ್ ಆಗುತ್ತಿವೆ. ಶಾಂತಿ ಸೌಹಾರ್ದತೆಯ ಸಂಕೇತವಾಗಿದ್ದ ಧ್ವಜಗಳು ಇದೀಗ ರಾಜ್ಯದಲ್ಲಿ ದಂಗಲ್ ಗೆ ಕಾರಣವಾಗುತ್ತಿರುವ ಸ್ಟೋರಿ ಇಲ್ಲಿದೆ.
Mystery Behind Viral Green Flag Photo: ರಾಜ್ಯದಲ್ಲಿ ಧ್ವಜ ದಂಗಲ್ ಆರಂಭವಾಗಿದೆ. ಕೇರಗೋಡಿನ ಘಟನೆ ಮಾಸುವ ಮೊದಲೆ ರಾಜ್ಯದ ಹಲವು ಕಡೆ ಧ್ವಜಸ್ತಂಭಗಳ ತೆರವು, ಅದಲ್ಲಿ ಹಾರುತ್ತಿದ್ದ ಇತರೆ ಧ್ವಜಗಳ ಪೋಟೊಗಳು ವೈರಲ್ ಆಗುತ್ತಿವೆ. ಶಾಂತಿ ಸೌಹಾರ್ದತೆಯ ಸಂಕೇತವಾಗಿದ್ದ ಧ್ವಜಗಳು ಇದೀಗ ರಾಜ್ಯದಲ್ಲಿ ದಂಗಲ್ ಗೆ ಕಾರಣವಾಗುತ್ತಿರುವ ಸ್ಟೋರಿ ಇಲ್ಲಿದೆ.
ಇದನ್ನೂ ಓದಿ: ಕೆರೆಗೋಡು ಘಟನೆ ಬಿಜೆಪಿಯ ಧ್ರುವೀಕರಣ ತಂತ್ರದ ಭಾಗ: ಸಚಿವ ಎಂ ಬಿ ಪಾಟೀಲ
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಧ್ವಜಗಳನ್ನು ಹಾರಿಸಿರುವ ವಿಚಾರವಾಗಿ ಚರ್ಚೆ ಜೋರಾಗಿ ನಡೆಯುತ್ತಿದೆ.ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕೆರಗೋಡು, ಶಿವಾಜಿನಗರದ ಬಳಿಕ ಚಾಮರಾಜ ಪೇಟೆಯ ಜೆಜೆ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಸಿರು ಮತ್ತು ಹಳದಿ ಬಣ್ಣದ ಧ್ವಜ ಹಾರಿಸಿರುವ ವಿಚಾರವಾಗಿ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ: ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಮನುಷ್ಯರಾಗಿ ಬಾಳಬೇಕು
ಈ ಬಗ್ಗೆ ಶಶಾಂಕ್ ಜೆಎಸ್ ಎಂಬುವರು ಟ್ವೀಟ್ ಮಾಡಿ “ಚಾವರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಜೆ ನಗರ ಪೊಲೀಸ್ ಠಾಣೆ ಎದುರಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಹಸಿರು ಧ್ವಜ ಹಾರಿಸಲಾಗಿದೆ. ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ. ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟ್ಯಾಗ್ ಮಾಡಿದ್ದಾರೆ.ಇತ್ತ ಯಾವಾಗ ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ವೈರಲ್ ಅಯ್ತೊ ಜೆ ಜೆ ನಗರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ತಕ್ಷಣ ಧ್ವಜಸ್ತಂಭದಲ್ಲಿದ್ದ ಹಸಿರು ಬಣ್ಣದ ಧ್ವಜ ಇಳಿಸಿದ್ದಾರೆ. ಮಂಡ್ಯದ ಕೆರೆಗೋಡಿನಿಂದ ಶುರುವಾದ ಧ್ವಜ ವಿಚಾದ ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಿಸ್ತಾ ಇದೆ..ಈಗಾಗಲೇ ರಾಜಕೀಯ ಸ್ವರೂಪ ಪಡೆದಿದ್ದು, ಮುಂದೆ ಯಾವ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದನ್ನಾ ಕಾದು ನೋಡ್ಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.