ಬೆಂಗಳೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದು, ಇನ್ಫೋಸಿಸ್ ಸಂಸ್ಥಾಪಕರಾದ ಡಾ. ಸುಧಾಮೂರ್ತಿ ಅವರಿಂದ ಈ ಭಾರಿಯ ದಸರಾ ಉದ್ಘಾಟನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸರ್ಕಾರದ ಪರ್ತವಾಗಿ ಮೈಸೂರು ಉಸ್ತುವಾರಿ ಹಾಗೂ ಉನ್ನತ‌ ಶಿಕ್ಷಣ ಸಚಿವ‌ ಜಿ ಟಿ‌ ದೇವೇಗೌಡ ಸುಧಾಮೂರ್ತಿಯವರಿಗೆ ಅಧಿಕೃತ ಆಹ್ವಾನಿಸಿದ್ದಾರೆ.


COMMERCIAL BREAK
SCROLL TO CONTINUE READING


ಮೈಸೂರು ಉಸ್ತುವಾರಿ ಸಚಿವ‌ ಜಿ.ಟಿ‌. ದೇವೇಗೌಡ ಹಾಗೂ ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಬೆಂಗಳೂರಿನ ಜಯನಗರದ ಇನ್ಫೋಸಿಸ್‌ ಫೌಂಡೇಶನ್‌ ಕಚೇರಿಗೆ ಆಗಮಿಸಿ ಸುಧಾಮೂರ್ತಿಯವರಿಗೆ ಮೈಸೂರು ಪೇಟ, ರೇಷ್ಮೆ ಶಾಲು ಹಾಗೂ ಹೂವಿನ ಹಾರ ಹಾಕಿ ಗೌರವಿಸಿ, ದಸರಾ ಹಬ್ಬ ಉದ್ಘಾಟಕರಾಗಿ ಅಧಿಕೃತ ಆಮಂತ್ರಣ ನೀಡಿದ್ದಾರೆ. 


ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಆರ್. ವಿಶ್ವನಾಥ್​ ಹಾಗೂ ಶಾಸಕ ರಾಮದಾಸ್ ಕೂಡಾ ಉಪಸ್ಥಿತರಿದ್ದರು.