Omicron BF.7 : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು
Omicron BF.7 : ವಿದೇಶಗಳಲ್ಲಿ ಕೊರೊನ ಆರ್ಭಟ ರಾಜ್ಯದಲ್ಲೂ ಹೆಚ್ಚಾಯ್ತು ಆತಂಕ ಹೆಚ್ಚಾಗಿದೆ. ಕರುನಾಡಲ್ಲಿ ಒಮಿಕ್ರಾನ್ ಉಪತಳಿ BF.7 ಭೀತಿ ಸೃಷ್ಟಿಸಿದೆ. ಹೀಗಾಗಿ, ತಜ್ಞರು ಮುಂದಿನ 40 ದಿನಗಳು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು : ವಿದೇಶಗಳಲ್ಲಿ ಕೊರೊನ ಆರ್ಭಟ ರಾಜ್ಯದಲ್ಲೂ ಹೆಚ್ಚಾಯ್ತು ಆತಂಕ ಹೆಚ್ಚಾಗಿದೆ. ಕರುನಾಡಲ್ಲಿ ಒಮಿಕ್ರಾನ್ ಉಪತಳಿ BF.7 ಭೀತಿ ಸೃಷ್ಟಿಸಿದೆ. ಹೀಗಾಗಿ, ತಜ್ಞರು ಮುಂದಿನ 40 ದಿನಗಳು ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.
ಜನವರಿ - ಫೆಬ್ರವರಿ ತಿಂಗಳಲ್ಲಿ ಸೋಂಕು ಹೆಚ್ಚಳ ಸಾಧ್ಯತೆ ಇದೆ. ಅಲ್ಲದೆ, ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗಲಿದೆ. ಬಳಿಕ ಸೋಂಕು ಹೆಚ್ಚಳದ ಪ್ರಮಾಣ ಅಂದಾಜಿಸಲು ತೀರ್ಮಾನ ಮಾಡಲಾಗುತ್ತದೆ. ಮುಂದಿನ ಎರಡು ತಿಂಗಳಲ್ಲಿ ಸೋಂಕಿನ ಪ್ರಕರಣ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : KC Narayana Gowda : ಕೆಆರ್ ಪೇಟೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದ ಸಚಿವ ಕೆಸಿ ನಾರಾಯಣ್ ಗೌಡ!
ಹೀಗಾಗಿ, ಕೊರೊನಾ ಪರಿಸ್ಥಿತಿ ಎದುರಿಸಲು ತಾಂತ್ರಿಕ ಸಲಹಾ ಸಮಿತಿ ಸಿದ್ಧತೆ ನಡೆಸುತ್ತಿದೆ. ಸೋಂಕು ಹೆಚ್ಚಳದ ಅಂದಾಜು ವರದಿ ರೂಪಿಸಲು ಸಜ್ಜಾಗಿವೆ. ಹೀಗಾಗಿ, ರಾಜ್ಯ ಸರ್ಕಾರವು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸಂಸ್ಥೆ ಮೊರೆ ಹೋಗಿದೆ. ಸದ್ಯದ ಪ್ರಕರಣ ಆಧರಿಸಿ ಸೋಂಕು ಹೆಚ್ಚಳದ ಮಾದರಿ ವರದಿ ಅಲ್ಲಿಗೆ ಕಳುಹಿಸಲಾಗಿದೆ.
ಮುಂದಿನ 2 ತಿಂಗಳಲ್ಲಿ ಅಂದಾಜು ಎಷ್ಟು ಕೇಸ್ ದಾಖಲು ಸಾಧ್ಯತೆ ಇದೆ. ಸೋಂಕು ಹೆಚ್ಚಳದ ವರದಿ ಆಧರಿಸಿ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಸೋಂಕು ಹೆಚ್ಚಾದಾಗ ಬೇಕಾಗುವ ಬೆಡ್, ಔಷಧಗಳ ಬಗ್ಗೆ ಲೆಕ್ಕಾಚಾರ, ಎಷ್ಟು ಕೇಸ್ ದಾಖಲಾಗಬಹುದೆಂದು ನೋಡಿಕೊಂಡು ಚಿಕಿತ್ಸೆಗೆ ಸಿದ್ಧತೆ ನಾಡಲಾಗುತ್ತಿದೆ.
ತಜ್ಞರು ನೀಡುವ ವರದಿ ಆಧರಿಸಿ ತಾಂತ್ರಿಕ ಸಲಹಾ ಸಮಿತಿಯಿಂದ ಕ್ರಮ ಕೈಗೊಳ್ಳಲಿದೆ. ಅಂದಾಜು ವರದಿ ಸಿದ್ಧಪಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಚೀನಾದಿಂದ ಸೋಂಕಿನ ಬಗ್ಗೆ ಸರಿಯಾದ ಅಂಕಿ- ಸಂಖ್ಯೆ ಸಿಗುತ್ತಿಲ್ಲ. ಹೀಗಾಗಿ ಸೋಂಕು ಹೆಚ್ಚಳದ ಅಂದಾಜು ವರದಿ ತಯಾರಿಸುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ: ಸಿಎಂ ಬೊಮ್ಮಾಯಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.