Omicron In India: ಓಮಿಕ್ರಾನ್ ಅನ್ನು ಸೋಲಿಸಿದ ಬೆಂಗಳೂರಿನ ವೈದ್ಯನಿಗೆ ಮತ್ತೆ ಕೊರೊನಾ ಸೊಂಕು
Omicron Symptoms: ಭಾರತದಲ್ಲಿ `ಓಮಿಕ್ರಾನ್` ಸೋಂಕಿಗೆ ಒಳಗಾದ ಮೊದಲ ಇಬ್ಬರು ಸೊಂಕಿತರಲ್ಲಿ (Coronavirus) ಈ ವೈದ್ಯರು ಕೂಡ ಒಬ್ಬರು. ಇನ್ನೊಂದೆಡೆ ಮಾಹಿತಿ ನೀಡದೆ ದೇಶದಿಂದ ಹೊರ ಹೋಗಿರುವ ದಕ್ಷಿಣ ಆಫ್ರಿಕಾ ಪ್ರಜೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Omicron Variant Updates - ಕರ್ನಾಟಕದ (Omicron Karnataka Updates) ಬೆಂಗಳೂರಿನಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರಿಯಾದ 'ಓಮಿಕ್ರಾನ್' ಅನ್ನು ಸೋಲಿಸಿದ ವೈದ್ಯರು ಇದೀಗ ಮತ್ತೆ ಕೋವಿಡ್ -19 (Covid-19) ನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 'ಓಮಿಕ್ರಾನ್' (Omicron) ಸೋಂಕಿಗೆ ಒಳಗಾದ ಮೊದಲ ಇಬ್ಬರು ಸೊಂಕಿಟರಲ್ಲಿ ಈ ವೈದ್ಯರು ಕೂಡ ಒಬ್ಬರು. ಏತನ್ಮಧ್ಯೆ, ಅಧಿಕಾರಿಗಳಿಗೆ ತಿಳಿಸದೆ ದೇಶವನ್ನು ತೊರೆದ ದಕ್ಷಿಣ ಆಫ್ರಿಕಾದ ಪ್ರಜೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗುಜರಾತಿ ಮೂಲದ ದಕ್ಷಿಣ ಆಫ್ರಿಕಾದ ವ್ಯಕ್ತಿ ಐಸೋಲೆಶನ್ ನಲ್ಲಿದ್ದ ಹಾಗೂ ಸೂಚನೆಯನ್ನು ನೀಡದೆಯೇ ದುಬೈಗೆ ತೆರಳಿದ್ದಾನೆ. ಭಾರತದಲ್ಲಿ ಇದುವರೆಗೆ 23 ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ ಎಂಬುದು ಇಲ್ಲಿ ಗಮನಾರ್ಹ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು, 'ಒಮಿಕ್ರಾನ್ ವೇರಿಯಂಟ್ ಸೋಂಕಿಗೆ ಒಳಗಾದ ವೈದ್ಯರಿಗೆ ಮತ್ತೆ ಕೊರೊನಾ ಸೋಂಕು ತಗುಲಿರುವುದು ನಿಜ' ಎಂದು ದೃಢಪಡಿಸಿದ್ದಾರೆ. ಸಂಬಂಧಪಟ್ಟ ವೈದ್ಯರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಎಂದು ಹೆಸರನ್ನು ಬಹಿರಂಗಪಡಿಸದಿರುವ ಷರತ್ತಿನ ಮೇಲೆ ಅಧಿಕಾರಿ ತಿಳಿಸಿದ್ದಾರೆ. ಏತನ್ಮಧ್ಯೆ, ಪ್ರತ್ಯೇಕತೆಯ ನಿಯಮಗಳನ್ನು ಉಲ್ಲಂಘಿಸಿ ಮತ್ತು ಅಧಿಕಾರಿಗಳಿಗೆ ತಿಳಿಸದೆ ದೇಶದಿಂದ ಹೊರಗೆ ಹೋದ ದಕ್ಷಿಣ ಆಫ್ರಿಕಾದ ಪ್ರಜೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಸೋಂಕಿತ ವ್ಯಕ್ತಿಯನ್ನು ಹೋಗಲು ಬಿಟ್ಟಿದ್ದಕ್ಕಾಗಿ ಅಲ್ಲಿನ ಪಂಚತಾರಾ ಹೋಟೆಲ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ-Omicronನ ಪ್ರತಿಯೊಂದು ಕೊರೊನಾ ರೂಪಾಂತರಿಗೂ ರಾಮಬಾಣ ಈ ಔಷಧಿ ಎಂದ ವಿಜ್ಞಾನಿ
ಮತ್ತೊಂದೆಡೆ, ಸೋಮವಾರ ಮುಂಬೈನಲ್ಲಿ ಇಬ್ಬರಲ್ಲಿ ಓಮಿಕ್ರಾನ್ ರೂಪಾಂತರವನ್ನು ದೃಢಪಡಿಸಲಾಗಿದೆ. ಇಬ್ಬರೂ ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದರು ಮತ್ತು ಅವರ ಕರೋನಾ (Coronavirus) ವರದಿ ಧನಾತ್ಮಕವಾಗಿ ಹೊರಬಂದಿತ್ತು. ಇದರ ನಂತರ, ಅವರ ಮಾದರಿಯನ್ನು ಪುಣೆಯ ಎನ್‌ಐವಿಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದ್ದು ಅದು ಓಮಿಕ್ರಾನ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗಿ, ಅವರ ವರದಿ ಪಾಸಿಟಿವ್ ಬಂದಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ-Omicron in India: ಬಂದೇ ಬರುತ್ತಾ ಕೊರೊನಾ 3ನೇ ಅಲೆ? ವಿದೇಶದಿಂದ ಮುಂಬೈಗೆ ಬಂದ 100 ಯಾತ್ರಿಗಳು ನಾಪತ್ತೆ
ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ (Omicron In India)
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6 ಸಾವಿರದ 822 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 220 ಜನರು ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ದೇಶದಲ್ಲಿ ಇದುವರೆಗೆ 23 ಒಮಿಕ್ರಾನ್ ರೂಪಾಂತರದ ಕರೋನಾ ಪ್ರಕರಣಗಳು ವರದಿಯಾಗಿವೆ. ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 95 ಸಾವಿರ 14 ಆಗಿದೆ. ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 4 ಲಕ್ಷ 73 ಸಾವಿರ 757 ಕ್ಕೆ ಏರಿದೆ. ಅಂಕಿಅಂಶಗಳ ಪ್ರಕಾರ, ನಿನ್ನೆ 10 ಸಾವಿರದ 4 ಚೇತರಿಕೆ ಪ್ರಕರಣಗಳು ವರದಿಯಾಗಿವೆ. ಅದರ ನಂತರ ಇದುವರೆಗೆ 3 ಕೋಟಿ 40 ಲಕ್ಷ 79 ಸಾವಿರ 612 ಜನರು ಸೋಂಕು ಮುಕ್ತರಾಗಿದ್ದಾರೆ.
ಇದನ್ನೂ ಓದಿ-Omicron ಕುರಿತು ಟೆನ್ಶನ್ ಹೆಚ್ಚಿಸುವ ವರದಿ ಬಹಿರಂಗ, ಹೊಸ ರಿಪೋರ್ಟ್ ಹೇಳಿದ್ದಾದರೂ ಏನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ