ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ಆಗಿ ಓರ್ವ ಸಾವು
ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ಆಗಿ ಓರ್ವ ಸಾವನ್ನಪ್ಪಿರುವ ಘಟನೆ ನಗರದ ನಗರತ್ ಪೇಟೆ ಬೀದಿಯಲ್ಲಿ ನಡೆದಿದೆ.
ಬೆಂಗಳೂರು: ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್ ಆಗಿ ಓರ್ವ ಸಾವನ್ನಪ್ಪಿರುವ ಘಟನೆ ನಗರದ ನಗರತ್ ಪೇಟೆ ಬೀದಿಯಲ್ಲಿ ನಡೆದಿದೆ.
ಈ ದುರ್ಘಟನೆ ಆಭರಣದ ಅಂಗಡಿಯೊಂದರಲ್ಲಿ ನಡೆದಿದೆ ಎನ್ನಲಾಗಿದ್ದು,ಮೃತಪಟ್ಟಿರುವ ವ್ಯಕ್ತಿಯನ್ನು ವಿಷ್ಣು ಎಂದು ಗುರುತಿಸಲಾಗಿದೆ.ಜುವೆಲರಿ ಶಾಪ್ ಅಲ್ಲಿ ಕೆಲಸ ಮಾಡಿಕೊಂಡಿದ್ದ ವಿಷ್ಣು ಮತ್ತು ಪತ್ನಿ ಚಿನ್ನವನ್ನು ಮೆಲ್ಟ್ ಮಾಡಲು ಆಕ್ಸಿಜನ್ ಮತ್ತು ಎಲ್‌ಪಿ ಜಿ ಬಳಕೆ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ: ಶಾಲೆ ಪರಿಸರ ಒಳ್ಳೆಯದಾದ್ರೇ ಮಕ್ಕಳಿಗೆ ಖುಷಿ - ಎಂ.ಆರ್.ಪಾಟೀಲ್
ಹಲವು ವರ್ಷಗಳಿಂದ ಚಿನ್ನದ ಅಂಗಡಿ ಮಾಲೀಕರು ಇದನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.ಈ ಘಟನೆ ನಡೆದ ವೇಳೆ ಮಾಲೀಕರು ಹೊರಗೆ ಇದ್ದರು ಎನ್ನಲಾಗಿದೆ.ಈಗ ಮಾಲಿಕನಿಗಾಗಿ ಹುಡುಕಾಟ ನಡೆಸಲಾಗಿದ್ದು, ಆಕ್ಸಿಜನ್ ಮತ್ತು ಎಲ್ ಪಿ ಜಿ ಬಳಕೆಗೆ ಪರವಾನಗೆ ಇದ್ಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ 8 ಕೆಜಿ ಅಕ್ಕಿ ಜೊತೆಗೆ 2 ಕೆಜಿ ರಾಗಿ/ಜೋಳ ವಿತರಣೆ: ಸಚಿವ ಮುನಿಯಪ್ಪ
ನಿನ್ನೆ ಪತ್ನಿ ಮೃತ ವಿಷ್ಣುವಿಗೆ ಊಟ ತೆಗೆದುಕೊಂಡು ಬಂದಿದ್ರು.ಊಟಕ್ಕೆ ಬರುವಾಗ ಆಕ್ಸಿಜನ್ ಆಪ್ ಮಾಡದೆ ವಿಷ್ಣು ಹಾಗೆ ಬಂದಿದ್ದ ಎನ್ನಲಾಗಿದೆ.ಆಕ್ಸಿಜನ್ ಆನ್ ಮಾಡಿ ಊಟಕ್ಕೆ ಹೋದ ಬೆನ್ನಲ್ಲೆ ಪ್ರೆಶರ್ ಹೆಚ್ಚಾಗಿತ್ತು,ಪ್ರೆಶರ್ ಹೆಚ್ಚಾದ ಹಿನ್ನೆಲೆ ಬ್ಲಾಸ್ಟ್ ಆಗಿದ್ದರಿಂದಾಗಿ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿ ಆತನು ಸಾವನ್ನಪ್ಪಿದ್ದಾನೆ.ಈಗ ಈ ಘಟನೆಗೆ ಸಂಬಂಧಿಸಿದ ಪ್ರಕರಣ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ