ಬೆಂಗಳೂರು : 2019 ನೇ ವರ್ಷದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಿಂದಿನ 4 ವರ್ಷಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವ ಅರ್ಹತೆಯುಳ್ಳ ಪುರುಷ / ಮಹಿಳಾ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುವುದು.


COMMERCIAL BREAK
SCROLL TO CONTINUE READING

ಅರ್ಜಿ ನಮೂನೆಯು ಆನ್‍ಲೈನ್‍ನ ಅಧಿಕೃತ ಜಾಲತಾಣ www.karnataka.gov.in/dye ರ ಮೂಲಕ ಲಭ್ಯವಿರುತ್ತದೆ. ದಿ:10-7-2020 ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.


ಕ್ರೀಡಾ ಕ್ಷೇತ್ರದಲ್ಲಿ ತರಬೇತುದಾರರಾಗಿ ನಿರಂತರ ಸೇವೆ ಸಲ್ಲಿಸಿ ಸಾಧನೆ ಮಾಡಿದಂತಹ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿÀಸಲಾಗುವುದು. ಈ ಸಂಭಂಧ ಅರ್ಹ ಪುರುಷ ಹಾಗೂ ಮಹಿಳಾ ತರಬೇತುದಾರರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.


ಅರ್ಜಿ ನಮೂನೆಯು ಆನ್‍ಲೈನ್‍ನ ಅಧಿಕೃತ ಜಾಲತಾಣ http://serviceonline.gov.in/karnataka ರ ಮೂಲಕ ಲಭ್ಯವಿರುತ್ತದೆ. ದಿ:10-7-2020 ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣಗಳ ಮೂಲಕ ಸಂಪರ್ಕಿಸಬಹುದಾಗಿದೆ.