ಬೆಂಗಳೂರು: 2020-21 ನೇ ಸಾಲಿಗೆ ರಾಷ್ಟೀಯ ವಿದ್ಯಾರ್ಥಿವೇತನ ಪೋರ್ಟಲ್ (ಎನ್.ಎಸ್.ಪಿ) ಅನ್ವಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ಖ್, ಭೌದ್ದ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಅರ್ಹ ಅಭ್ಯರ್ಥಿಗಳು ವಿದ್ಯಾರ್ಥಿವೇತನ ಯೋಜನೆಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‍ನ ವೆಬ್‍ಸೈಟ್ www.sochalarships.gov.in ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.


ವೆಬ್‍ಸೈಟ್‍ಗೆ ಲಿಂಕ್  www.gokdom.kar.nic.in ಅಥವಾ www.dom.karnataka.gov.in ನಲ್ಲಿ ದೊರೆಯವುದು. ಆನ್‍ಲೈನ್ ಅರ್ಜಿ ಸಲ್ಲಿಸುವ ಬಗ್ಗೆ ವಿವರವಾದ ಸೂಚನೆಗಳು, ಕ್ರಮಾವಳಿಗಳು ಮತ್ತು ಪದೇ ಪದೇ ಕೇಳುವ ಪ್ರಶ್ನೆಗಳು (ಎಫ್‍ಎಕ್ಯೂಗಳು) www.gokdom.kar.nic.in ಅಥವಾ  www.dom.karnataka.gov.in  ರಲ್ಲಿ ದೊರೆಯುವುದು.


ಹೆಚ್ಚಿನ ವಿವರಗಳಿಗಾಗಿ ಧಾರವಾಡ ಜಿಲ್ಲಾ ಉರ್ದು ಇ.ಸಿ.ಓ, ತಾಲ್ಲೂಕಾ ಉರ್ದು ಸಿ.ಆರ್.ಪಿ ಇವರನ್ನು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕಾಗಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಅಥವಾ ಧಾರವಾಡ ಮಾಹಿತಿ ಕೇಂದ್ರ-9035972618, ಹುಬ್ಬಳ್ಳಿ ಮಾಹಿತಿ ಕೇಂದ್ರ-88677718261, ಕಲಘಟಗಿ ಮಾಹಿತಿ ಕೇಂದ್ರ-9538912399, ಕುಂದಗೋಳ ಮಾಹಿತಿ ಕೇಂದ್ರ-8904661872, ನವಲಗುಂದ ಮಾಹಿತಿ ಕೇಂದ್ರ-8746894524 ಮತ್ತು ಜಿಲ್ಲಾ ಕಚೇರಿ 0836-2971590 ದೂರವಾಣಿಗಳನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಟಣೆಯಲ್ಲಿ ತಿಳಿಸಿದ್ದಾರೆ.