ಬೆಂಗಳೂರು: ಜಲ ಮಂಡಳಿಯಿಂದ ಗ್ರಾಹಕರು ಹೊಸದಾಗಿ ನೀರಿನ ನಳ ಸಂಪರ್ಕ ಪಡೆಯಲು ಜಲನಿಧಿ ತಂತ್ರಾಂಶದ ಮೂಲಕ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ, ಹೊಸ ನಳದ ಸಂಪರ್ಕ ಪಡೆಯಬೇಕೆಂದು ಕರ್ನಾಟಕ ಸರ್ಕಾರ ಆದೇಶಿಸಿದೆ. 


COMMERCIAL BREAK
SCROLL TO CONTINUE READING

ಗ್ರಾಹಕರು ನಳ ಅರ್ಜಿ ಸಲ್ಲಿಸುವಾಗ ಹೆಸರು, ಪೂರ್ಣ ವಿಳಾಸ, ವಾರ್ಡ ಸಂಖ್ಯೆ, ಮೊಬೈಲ್ ಸಂಖ್ಯೆ, ಬಳಕೆಯ ಉದ್ದೇಶ ಅಲ್ಲದೇ ಕಟ್ಟಡದ ಒಟ್ಟು ವಿಸ್ತೀರ್ಣ, ಪ್ರಸ್ತುತ ಸಾಲಿನ ಆಸ್ತಿಕರ ತುಂಬಿದ ರಸೀದಿ ಪತ್ರ, ಅನುಮೋದಿತ ಕಟ್ಟಡದ ನೀಲಿ ನಕ್ಷೆ, ಕಟ್ಟಡದ ಮುಕ್ತಾಯ ಪ್ರಮಾಣ ಪತ್ರ, ಆಸ್ತಿ ಖರೀದಿ ಪತ್ರ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಚಾಲ್ತಿ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಈ www.mrc.gov.in/jalanidhi/index.do ವೆಬ್‍ಸೈಟ್‍ನಲ್ಲಿ ಸಲ್ಲಿಸಿ, ಹೊಸ ನಳದ ಸಂಪರ್ಕ ಪಡೆಯಲು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.


ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಮ್ ಸಂಖ್ಯೆ: 9449846008 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ