World Test Championship High Score: ಟೆಸ್ಟ್‌ ಕ್ರಿಕೆಟ್‌ ಎನ್ನುವುದು ಓರ್ವ ಕ್ರಿಕೆಟಿಗನ ಸಾಮಾರ್ಥ್ಯ, ಬಲ, ತಾಳ್ಮೆಯನ್ನು ಪರೀಕ್ಷಿಸುವ ಪಂದ್ಯ. ಟಿ20 ಮತ್ತು ಒಡಿಐ ಸ್ವರೂಪಗಳು ಬಂದರೂ ಸಹ ಟೆಸ್ಟ್‌ ತನ್ನ ಆದ್ಯತೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿರುವುದು ಸುಳ್ಳಲ್ಲ. ಅಂದಹಾಗೆ ವಿಶ್ವ ಟೆಸ್ಟ್‌ ಚಾಂಪಿಯನ್ಶಿಪ್‌ʼನಲ್ಲಿ ತ್ರಿಶತಕ ಬಾರಿಸಿದ ಏಕೈಕ ಬ್ಯಾಟರ್‌ ಯಾರೆಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಇದನ್ನೂ ಓದಿ: 610 ಕೆಜಿಯಿಂದ 63 ಕೆಜಿಗೆ... ಬರೋಬ್ಬರಿ 550 ಕೆಜಿ ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ತೂಕದ ವ್ಯಕ್ತಿ


ಈ ವರ್ಷದ ಜನವರಿಯಲ್ಲಿ ಟೆಸ್ಟ್ ಮಾದರಿಯಿಂದ ನಿವೃತ್ತರಾದ ಆಸ್ಟ್ರೇಲಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಕ್ರಿಕೆಟಿಗ. 2019 ರಲ್ಲಿ ಪಾಕಿಸ್ತಾನದ ವಿರುದ್ಧ ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ʼಗಳನ್ನು ಬೆಂಡೆತ್ತಿದ್ದ ಡೇವಿಡ್‌, ತ್ರಿಶತಕದ ಸಾಧನೆ ಮಾಡಿದ್ದರು.


29 ನವೆಂಬರ್ 2019. ಪಾಕಿಸ್ತಾನ ಕ್ರಿಕೆಟ್ ತಂಡ ಈ ದಿನವನ್ನು ಎಂದಿಗೂ ಮರೆಯಲಿ ಸಾಧ್ಯವಿಲ್ಲ. ಡೇವಿಡ್ ವಾರ್ನರ್ ಈ ದಿನ ಪಾಕಿಸ್ತಾನದ ಬೌಲರ್‌ʼಗಳನ್ನು ಬೆಂಡೆತ್ತುವ ಮೂಲಕ ಇತಿಹಾಸ ನಿರ್ಮಿಸಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ʼನ ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.


ಇದನ್ನೂ ಓದಿ: ತುಳಸಿ ಗಿಡವನ್ನು ಈ ದಿಕ್ಕಿಗೆ ಇಟ್ಟರೆ ಮಾತ್ರ ಹಣದ ಸಮಸ್ಯೆ ದೂರವಾಗುತ್ತದೆ..! ಇಲ್ಲದಿದ್ದರೆ...


554 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ವಾರ್ನರ್ 418 ಎಸೆತಗಳನ್ನು ಎದುರಿಸಿ ಅಜೇಯ 335 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ʼನಲ್ಲಿ 39 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿತ್ತು. ವಾರ್ನರ್ ಅವರ ಈ ಸ್ಕೋರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ಬ್ಯಾಟ್ಸ್‌ಮನ್ ಮಾಡದ ಗರಿಷ್ಠ ಸ್ಕೋರ್ ಆಗಿದೆ.


WTCನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಟಾಪ್-5 ಬ್ಯಾಟ್ಸ್‌ಮನ್ಸ್


ಡೇವಿಡ್ ವಾರ್ನರ್ - 335 ರನ್*
ಜ್ಯಾಕ್ ಕ್ರೌಲಿ - 267 ರನ್
ವಿರಾಟ್ ಕೊಹ್ಲಿ - 254 ರನ್*
ಟಾಮ್ ಲ್ಯಾಥಮ್ - 252 ರನ್
ಕೇನ್ ವಿಲಿಯಮ್ಸನ್ - 251 ರನ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.