ಆರ್ ಎಸ್ ಎಸ್ ಹಿನ್ನಲೆಯವರಿಗೆ ಮಾತ್ರ ಟಿಕೆಟ್ ಎಂದ ಬಿಜೆಪಿ!
ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಆರ್ ಎಸ್ ಎಸ್ ಹಿನ್ನಲೆಯ ಸೈದ್ದಾಂತಿಕ ನಿಲುವನ್ನು ಹೊಂದಿರುವವರಿಗೆ ಮಾತ್ರ ಟಿಕೆಟ್ ನಿಡುವ ವಿಚಾರಕ್ಕೆ ಬಂದಿದೆ ಎನ್ನಲಾಗಿದೆ. ಎರಡನೇ ಹಂತದ ಪಟ್ಟಿ ಬಿಡುಗಡೆ ಮುನ್ನ ಬಿಜೆಪಿ ಈ ನಿಲುವಿಗೆ ಬಂದಿದ್ದು, ಇದಕ್ಕೆ ಪೂರಕವಾಗಿ ಆರ್ ಎಸ್ ಎಸ್ ಕೂಡಾ ಒತ್ತಡಹಾಕುತ್ತಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ರಾಜ್ಯ ಆರ್ ಎಸ್ ಎಸ್ ನಾಯಕರ ಮಾಹಿತಿ ಸಂಗ್ರಹಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಆರ್ ಎಸ್ ಎಸ್ ಮುಖಂಡ ರಾಮ್ ಮಾಧವ್ ರವರಿಗೆ ಸಂಘ ಪರಿವಾರದ ಹಿನ್ನೆಲೆ ಹಾಗೂ ಸೈದ್ಧಾಂತಿಕ ನೆಲೆಗಟ್ಟನ್ನು ಒಪ್ಪದ ಹಾಲಿ ಶಾಸಕರನ್ನು ಒಳಗೊಂಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡದಂತೆ ಆರ್ ಎಸ್ ಎಸ್ ಸೂಚನೆ ನೀಡಿದೆ ಎನ್ನಲಾಗಿದೆ. ಒಂದುವೇಳೆ ಇದು ಕಾರ್ಯಗತಕ್ಕೆ ಬಂದದ್ದೆ ಆದಲ್ಲಿ ಬಿಜೆಪಿಯ ಹತ್ತು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದೆ.
ಈಗಾಗಲೇ ಬಿಜೆಪಿ ಒಳಗಡೆ ಯಡಿಯೂರಪ್ಪ ಬಣ ಮತ್ತು ಆರ್ ಎಸ್ ಎಸ್ ನಾಯಕರ ನಡುವೆ ಒಳ ಜಗಳ ಸುರುವಾಗಿದೆ. ಸೀಟು ಹಂಚಿಕೆ ವಿಚಾರದಲ್ಲಿನ ಕಗ್ಗಂಟು ಈಗ ಅಮಿತ್ ಷಾ ವರೆಗೂ ತಲುಪಿದ್ದು ಅವರು ಸಿಇಸಿ ಸಭೆಗೂ ಮುನ್ನ ಸಂಧಾನವೆರ್ಪಡಿಸುವ ಸಲುವಾಗಿ ಪೂರ್ವಭಾವಿ ಸಭೆಯನ್ನು ಕರೆದಿದ್ದಾರೆ.