ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸದ್ದು ಮಾಡುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಈಗ ಮತ್ತೊಂದು ವಿವಾದಾತ್ಮಕ ಬಾಂಬ್ ಸಿಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಅದೇನಪ್ಪಾ ಅಂದ್ರೆ, ದಕ್ಷಿಣ ಕನ್ನಡ, ಉತ್ತರ ಕನ್ನಡ,ಮತ್ತು ಶಿವಮೊಗ್ಗದ ಜನರಿಗೆ ಮಾತ್ರ 'ಶುದ್ದ' ಕನ್ನಡ ಮಾತನಾಡಲು ಬರುತ್ತದೆ ಅಂತೆ, ಕರ್ನಾಟಕದ ಉಳಿದ ಜಿಲ್ಲೆಯ ಜನರಿಗೆ ಕನ್ನಡ ಭಾಷಾ 'ಶುದ್ದ'ತೆ ಇಲ್ಲವಂತೆ, ಅದಕ್ಕೆ ಅವರು ಕನ್ನಡ ಭಾಷೆಯನ್ನೇ ಮಾತನಾಡಲು ಯೋಗ್ಯರಲ್ಲ, ಎನ್ನುವ ಮೂಲಕ ಭಾರಿ ವಿವಾದವೊಂದನ್ನು ಸೃಷ್ಟಿಸಿದ್ದಾರೆ. 


ಕೇಂದ್ರ ಸರ್ಕಾರದಲ್ಲಿ ಕೌಶಲ್ಯ ಅಭಿವೃದ್ದಿ ಸಚಿವರಾಗಿರುವ ಅನಂತಕುಮಾರ್ ಹೆಗಡೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ಪ್ರಾರಂಭವಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸುತ್ತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.