ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ  ಮಾಜಿ ಶಾಸಕ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಸಂಬಂದಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಳ್ಳುವ ವಿಚಾರ ಸಾಕಷ್ಟು ದಟ್ಟವಾಗಿದ್ದು, ರಾಜ್ಯ ರಾಜಕಾರಣದ ಬೆಳವಣಿಗೆಗೆ ಪುಷ್ಟಿ ನೀಡಲಿದೆ ಎಂತಲೇ ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹೌದು... ಶೀಘ್ರದಲ್ಲಿಯೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಬಂಧಿ ಎಸ್.ಐ.ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ಚಿಕ್ಕನಗೌಡರ ಕುಂದಗೋಳ ಮಾಜಿ ಶಾಸಕರಾಗಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳದಿದ್ದ ಚಿಕ್ಕನಗೌಡರ ಪರಾಜಿತರಾಗಿದ್ದರು. ಬಿಜೆಪಿ‌ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದ ಚಿಕ್ಕನಗೌಡರ ಈಗ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ- PDO recruitment 2023: PDO & ಕಾರ್ಯದರ್ಶಿ ಹುದ್ದೆಗಳ ನೇಮಕಾತಿ, ಶೀಘ್ರವೇ ಅರ್ಜಿ ಆಹ್ವಾನ


ಇನ್ನು ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ಸೇರಲಿರುವ ಚಿಕ್ಕನಗೌಡರ, ಮಾಜಿ ಸಿ.ಎಂ. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬುವಂತ ಮಾಹಿತಿ ಲಭ್ಯವಾಗಿದ್ದು, ಲೋಕಸಭೆ ಚುನಾವಣೆ ಹಿನ್ನಲೆ ಸದ್ದಿಲ್ಲದೆ ಆಪರೇಶನ್ ಆರಂಭಿಸಿರುವ ಜಗದೀಶ್ ಶೆಟ್ಟರ್, ಬಿಜೆಪಿ ಪ್ರಮುಖ ನಾಯಕರನ್ನು ಕಾಂಗ್ರೆಸ್ ನತ್ತ ಸೆಳೆಯುತ್ತಿದ್ದಾರೆ. ಶೆಟ್ಟರ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿರುವ ಚಿಕ್ಕನಗೌಡರ, ನಿನ್ನೆ ತಮ್ಮ ನಿವಾಸದಲ್ಲಿ ಆಪ್ತರ ಸಭೆ ಕರೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.


ಇದನ್ನೂ ಓದಿ- ಬಜೆಟ್ ಮುಗಿಸಿ ನಾಳೆಯೇ ಉಡುಪಿಗೆ ಭೇಟಿ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್


ನಾನು ಇಲ್ಲೆ ಪಕ್ಷಕ್ಕೆ ಸೇರಿ ಅಂದರೆ ಸೇರತೀನಿ. ಇಲ್ಲ ಬೆಂಗಳೂರು ಗೆ ಬಂದು ಪಕ್ಷಕ್ಕೆ ಸೇರಿ ಅಂದರೆ ನಾನು ನಿಮಗೆಲ್ಲ ತಿಳಿಸುತ್ತೇನೆ ಎಂದು ಚಿಕ್ಕನಗೌಡರ ಹೇಳಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಆಪ್ತರನ್ನು ಕೇಳಿದ ಚಿಕ್ಕನಗೌಡರಿಗೆ ಆಪ್ತರೆಲ್ಲ ಕಾಂಗ್ರೆಸ್ ಸೇರಿ ಎಂದು ಸಲಹೆ ನೀಡಿದ್ದಾರೆ. ಅಧಿವೇಶನ ಮುಗಿಯೋ ಒಳಗಡೆ ಕಾಂಗ್ರೆಸ್ ಸೇರೋಣ ಎಂದು ಆಪ್ತರು ಸಲಹೆ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.