ಬಿಜೆಪಿಯದ್ದು ಒಂದು ವರ್ಷದ ಸಾಧನೋತ್ಸವ ಅಲ್ಲ, ಭ್ರಷ್ಟೋತ್ಸವ: ಸಿದ್ದರಾಮಯ್ಯ
40% ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್‌ಐ ನೇಮಕಾತಿ ಮತ್ತು ಉಪನ್ಯಾಸಕರ ನೇಮಕಾತಿ ಹಗರಣಗಳು ಬಿಜೆಪಿ ಸರ್ಕಾರದ ವರ್ಷದ ಸಾಧನೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಂಗಳೂರು: ‘ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 1 ವರ್ಷ ಪೂರೈಸಿದ ಹಿನ್ನೆಲೆ ಜುಲೈ 28ರಂದು ಚಿಕ್ಕಬಳ್ಳಾಪುರದಲ್ಲಿ ವರ್ಷಾಚರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಭ್ರಷ್ಟ ಹಣದಿಂದಲೇ ಅಧಿಕಾರಕ್ಕೆ ಬಂದು, ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಈ ಸರ್ಕಾರದ ವರ್ಷದ ಸಂಭ್ರಮವನ್ನು "ಭ್ರಷ್ಟೋತ್ಸವ" ಎಂದು ಕರೆದರೆ ಅರ್ಥಪೂರ್ಣವಾಗುತ್ತದೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
‘40% ಕಮಿಷನ್, ಗುತ್ತಿಗೆದಾರ ಆತ್ಮಹತ್ಯೆ, ಪಿಎಸ್‌ಐ ನೇಮಕಾತಿ ಮತ್ತು ಉಪನ್ಯಾಸಕರ ನೇಮಕಾತಿ ಹಗರಣಗಳು ಬಿಜೆಪಿ ಸರ್ಕಾರದ ವರ್ಷದ ಸಾಧನೆಯಾಗಿದೆ. ಇಷ್ಟೆಲ್ಲಾ ಆರೋಪಗಳಿದ್ದರೂ ಒಮ್ಮೆಯೂ ತಮ್ಮನ್ನು ತಾವು ನ್ಯಾಯಯುತ ತನಿಖೆಗೆ ಒಳಪಡಿಸಿಕೊಳ್ಳದೆ ಸರ್ಕಾರ ಭಂಡತನ ಮೆರೆದಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
Vinay Guruji : ಟ್ರೋಲ್ ಪೇಜ್ ಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿನಯ್ ಗುರೂಜಿ
‘ಆಪರೇಷನ್ ಕಮಲದ ಮೂಲಕ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಜುಲೈ 26, ಬಸವರಾಜ್ ಬೊಮ್ಮಾಯಿಯವರು RSSನಿಂದ ನೇಮಕಗೊಂಡದ್ದು ಜುಲೈ 28ರಂದು. ದಿನಾಂಕ ಬದಲಿಸಿ ಸಂಭ್ರಮಾಚರಣೆ ಮಾಡಿದ ಮಾತ್ರಕ್ಕೆ ಇಬ್ಬರ ಅವಧಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಬದಲಾವಣೆ ಆಗುತ್ತದಾ?’ ಎಂದು ಪ್ರಶ್ನಸಿದ್ದಾರೆ.
BJP : ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮಠಾಧೀಶರಿಂದ ಹೈಕಮಾಂಡ್ ಗೆ ಪತ್ರ
ಬಸವರಾಜ್ ಬೊಮ್ಮಾಯಿಯವರೂ ಮಾಡಿಲ್ಲ. ಈ ವಚನ ಭ್ರಷ್ಟತೆಯನ್ನು ಸಂಭ್ರಮಿಸಲು ಬಿಜೆಪಿ ಸರ್ಕಾರಕ್ಕೆ ಯಾಕಿಷ್ಟು ಉಮೇದು?’ ಎಂದು ಟೀಕಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.