ಬಾಗಲಕೋಟೆ : ಧಮ್, ತಾಕತ್ ಹಾನಗಲ್ ಚುನಾವಣೆಯಲ್ಲಿ ಗೊತ್ತಾಗಿದೆ. ಎಷ್ಟೇ ದುಡ್ಡ ಖರ್ಚು ಮಾಡಿದ್ರೂ ಗೆಲ್ಲಲಾಗಲಿಲ್ಲ. ಈಗ ಅವರೆಲ್ಲ ನನ್ನ ಟಾರ್ಗೆಟ್ ಮಾಡಿದ್ದಾರೆ. ಕಾರಣ ನನ್ನ ಬಗ್ಗೆ ಭಯ. ಮತ್ತೆ ನಾನೇ ಮುಖ್ಯಮಂತ್ರಿ, ನಮ್ಮ ಸರ್ಕಾರ ಬರುತ್ತೆ ಎನ್ನುವ ಭಯ, ಅದಕ್ಕೆ ನನ್ನ‌ಟಾರ್ಗೆಟ್ ಮಾಡುದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಧಮ್, ತಾಕತ್ ಇದ್ರೆ ಜನಸ್ಪಂದನೆ ತಡೆಯಲಿ ಎನ್ನುವ ಸಿಎಂ‌ ಬೊಮ್ಮಾಯಿ ಅವರ ಸವಾಲ್ ಗೆ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ ಅಂತ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ಹೇಳಲು ಯಡಿಯೂರಪ್ಪ ಯಾರು ಓಟುಗಳು ಇವರ ಜೇಬಿನಲ್ಲಿ ಇದಾವಾ? 2023 ರ ಚುನಾವಣೆಗೆ ಹೋಗೋಣ.. ಆಗ ಯಾರ ದಮ್ ತಾಕತ್ ಏನು ಎನ್ನುವುದು ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದರು. 


ಇದನ್ನೂ ಓದಿ : ಲೋಕಾಯುಕ್ತಕ್ಕೆ ಸೂಕ್ತ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ಸಲಾಂ : ನ್ಯಾ. ಸಂತೋಷ ಹೆಗ್ಡೆ


ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಯಾರೂ ನೆಮ್ಮದಿಯಿಂದ ಇಲ್ಲ. ಪ್ರವಾಹದಲ್ಲಿ ಇಷ್ಟೆಲ್ಲ ಅನಾಹುತ ಆದ್ರೂ ಪರಿಹಾರ ಕೊಟ್ಟಿಲ್ಲ. ನಾನು ನವಲಗುಂದ, ನರಗುಂದ, ಬಾದಾಮಿ ಪ್ರವಾಹ ಸ್ಥಳಕ್ಕೆ ಹೋಗಿದ್ದೆ. ಎಲ್ಲೂ ಸಹ ಪರಿಹಾರ ಕೊಟ್ಟಿಲ್ಲ. ಜೂನ್ ತಿಂಗಳಿಂದ ಪ್ರವಾಹ, ಮಳೆಯಿಂದ ಮನೆ, ಬೆಳೆ ಹಾನಿ, ರಸ್ತೆ ಹಾಳಾಗಿವೆ ಎಲ್ಲೂ ಪರಿಹಾರ ಕೊಟ್ಟಿಲ್ಲ. ಮೂರ್ಖರು ಡ್ಯಾನ್ಸ್ ಮಾಡ್ತಾ ಇದ್ದಾರೆ. ಇದು ಸಂಭ್ರಮ ಪಡುವ ಸಮಯಾನಾ ಎಂದು ಬಿಜೆಪಿ ಮಂತ್ರಿಗಳಿಗೆ ಕಿವಿ ಹಿಂಡಿದರು.


ಈಗ ಭಾರಿಳೆಯಿಂದ ಇಷ್ಟೆಲ್ಲ ತೊಂದ್ರೆ ಆದ್ರೂ ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದಾರಾ ಮಂತ್ರಿಗಳು ಧ್ವಜಾರೋಹಣ ಮಾಡಲು ಅಷ್ಟೆ ಸೀಮಿತ. ಆಗಸ್ಟ್ 15, ಜನೆವರಿ 26, ನವಂಬರ್ 1 ಕ್ಕೆ ಧ್ವಜಾರೋಹಣ ಮಾಡಲು ಬರ್ತಾರೆ. ಇದೇ ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದಾರೆ ಅವರು ಬಂದಿದ್ದಾರಾ?  ಮುರುಗೇಶ್ ನಿರಾಣಿ ಇದೆಲ್ಲ ಬಿಟ್ಟು ಬಡವರ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದರು.


ಅರ್ಕಾವತಿ, ಸೋಲಾರ್ ಹಗರಣ ತನಿಖೆ ಬಹಿರಂಗ ಪಡಿಸುವ ಬಿಜೆಪಿ ಎಚ್ಚರಿಕೆ ಹಿನ್ನಲೆ ಬಗ್ಗೆ ಮಾತನಾಡಿದೆ ಅವರು, 2006 ರಿಂದ ಈ ವರೆಗೂ 16 ವರ್ಷದಲ್ಲಿ ಬಿಜೆಪಿ 11 ವರ್ಷ ಅಧಿಕಾರ ಮಾಡಿದೆ. ನಾವು ಐದು ವರ್ಷ ಇದ್ದೇವು. ಸಿದ್ದರಾಮಯ್ಯ ಸರ್ಕಾರದ ಹಗರಣ ಅಂತಾರೆ. ಅಲ್ಲಪ್ಪ 2006 ರಿಂದ ಎಲ್ಲವನ್ನು ತನಿಖೆ ಮಾಡಿ ಎಂದು ಸವಾಲ್ ಹಾಕಿದರು. 2006 ರಿಂದ 2023 ವರೆಗೂ ತನಿಖೆ ಮಾಡಿ. ನಮ್ಮನ್ನು ಹೆದರಿಸುತ್ತೀರಾ...? ಬ್ಲಾಕ್ ಮೇಲ್ ಮಾಡ್ತಿರಾ? ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ ಎಂದು ಗುಡುಗಿದ್ದಾರೆ. 


ಇನ್ನೂ ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ಸಿಟಿ ರವಿ ಅಲ್ಲ,‌ ಲೂಠಿ ರವಿ. ಚಿಕ್ಕಮಗಳೂರನಲ್ಲಿ ಜನರು ಇವರನ್ನ ಲೂಠಿ ರವಿ ಅಂತ ಕರಿತಾರೆ.ನಾನು ಕರೆಯಲ್ಲ... ಜನರು ಕರೆತಾರೆ ಎಂದು ಹೇಳಿದರು.


ಇದನ್ನೂ ಓದಿ : ನಿಮ್ಮ ಬ್ಲಾಕ್ ಮೇಲ್ ತಂತ್ರಗಳಿಗೆ ನಾನು ಹೆದರಲ್ಲ!: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.