ಬೆಂಗಳೂರು : ಈಶ್ವರಪ್ಪ ಹೆಣ ಇಟ್ಕೊಂಡು ಮೆರವಣಿಗೆ ಮಾಡ್ತಾನೆ. ಆಳಂದಲ್ಲಿ ಖೂಬಾ 144 ಸೆಕ್ಷನ್ ಉಲ್ಲಂಘನೆ ಮಾಡ್ತಾರೆ. ಅವರ ಮೇಲೆ ಯಾವ ಕೇಸ್ ಹಾಕಿಲ್ಲ. ನಮ್ಮ ಮೇಲೆ ಮಾತ್ರ ನಾಲ್ಕೈದು ಕೇಸ್ ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್  ಮೇಲೆ 9 ಕೇಸ್ ಹಾಕಿದ್ದಾರೆ. ಅವರ ಸರ್ಕಾರದ ನಿಯಮವನ್ನ ಅವರೇ ಉಲ್ಲಂಘಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ : ಕೋವಿಡ್ ಅನಾವಶ್ಯಕ ನಿರ್ಬಂಧ, ಆತಂಕ ಬೇಡ : ಪ್ರಧಾನಿ ಮೋದಿ‌ ಸೂಚನೆ


ಪದಾಧಿಕಾರಿಗಳ ಸಭೆ ಕುರಿತು ಮಾತನಾಡಿಯಾ ಅವರು, ಪದಾಧಿಕಾರಿಗಳ ಸಭೆಯನ್ನ ನಡೆಸಿದ್ದೇವೆ. 24/7 ರೀತಿ ಕೆಲಸ ಮಾಡುವಂತೆ ಹೇಳಿದ್ದೇವೆ. ಸರ್ಕಾರದಲ್ಲಿ ವ್ಯಾಪಕ‌ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 


ಕಂಟ್ರಾಕ್ಟರ್ ಅಸೋಸಿಯೇಶನ್ ಲಂಚದ ಬಗ್ಗೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಪ್ರಧಾನಿ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಚೌಕಿದಾರ್ ಅಂತ ಹೇಳ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಬಂತು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ್ರು. ಬಹಳ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ರು. ಬರೀ ಸುಳ್ಳುಗಳನ್ನೆ ಹೇಳಿ ಮರೆಮಾಚುತ್ತಿದ್ದಾರೆ. ನಮ್ಮ‌ಅವಧಿಯಲ್ಲಿ ಯಾವ ಸಾಧನೆ ಮಾಡಿದ್ದೆವು. ಈಗ ಅವರ ಸರ್ಕಾರದಲ್ಲಿ ಏನು ಸಾದನೆ ಮಾಡಿದ್ದಾರೆ ಇಡಲಿ. ಇದು ದೌರ್ಭಾಗ್ಯದ ಸರ್ಕಾರ ಎಂದರು. 


ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ದಿವ್ಯಾ ಹಾಗರಗಿ ಬಿಜೆಪಿ ನಾಯಕಿ. ಇಲ್ಲಿಯವರೆಗೆ ಆಕೆಯನ್ನ ಅರೆಸ್ಟ್ ಮಾಡಿಲ್ಲ. 15 ದಿನಗಳಾದ್ರೂ ಅವರನ್ನ ಬಂಧಿಸಿಲ್ಲ. ಅವರು ಜಾಮೀನು‌ತೆಗೆದುಕೊಳ್ಳಲಿ ಎಂದು ಕಾಯ್ತಿದೆ. ಭ್ರಷ್ಟರನ್ನ ರಕ್ಷಿಸುವ ಕೆಲಸ ಸರ್ಕಾರ ಮಾಡ್ತಿದೆ. ಕೋಮುಸಾಮರಸ್ಯವನ್ನ ಹಾಳುಮಾಡ್ತಿದ್ದಾರೆ ಎಂದು ಗುಡುಗಿದ್ದಾರೆ. ]


ಇದನ್ನೂ ಓದಿ : "ಕೊರೊನಾ ಸಂಬಂಧ ಸುದೀರ್ಘ ವರದಿ ಪಡೆದ ನರೇಂದ್ರ ಮೋದಿ"


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.