Siddaramaiah : `ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ`
ಪೆ.3 ರಿಂದ ಬಸವಕಲ್ಯಾಣದಿಂದ ಪ್ರತಿ ವಿಧಾನಸಭ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತೆವೆ. ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಯಾದಗಿರಿ : ಪೆ.3 ರಿಂದ ಬಸವಕಲ್ಯಾಣದಿಂದ ಪ್ರತಿ ವಿಧಾನಸಭ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಮಾಡುತ್ತೆವೆ. ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮೈಸೂರು ಭಾಗದಲ್ಲಿ ಯಾತ್ರೆ ಮಾಡುತ್ತಾರೆ. ಯಾತ್ರೆ ಮಾಡಿ ಜನರಿಗೆ ಬಿಜೆಪಿ ಸರ್ಕಾರದ ಕರ್ಮಕಾಂಡ ತಿಳಿಸುತ್ತೆವೆ. ನಮ್ಮ ಪಕ್ಷದಿಂದ ಚಾರ್ಜ್ ಶೀಟ್ ಜನರ ಮುಂದೆ ಇಡ್ತಾಯಿದ್ದೆವೆ. ಪಾಪದ ಪುರಾಣ ಅಂತ ಚಾರ್ಜ್ ಶೀಟ್ ಗೆ ಹೆಸರು ಈಡ್ತಾಯಿದ್ದೇವೆ. ಜನರಿಗೆ ಈ ಚಾರ್ಜ್ ಶೀಟ್ ತಲುಪಿಸುವ ಕೆಲಸ ಮಾಡುತ್ತೆವೆ. ನಾವು ಮಾಡಿದ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಲು ಮೋದಿಗೆ ಕರೆದುಕೊಂಡು ಬಂದಿದ್ರು. ತಾಂಡಗಳಲ್ಲಿ ವಾಸ ಮಾಡುವ ಜನರಿಗೆ ಯಾವುದೇ ದಾಖಲಾತಿಗಳು ಇರಲಿಲ್ಲ. ನಾವು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಕಂದಾಯ ಗ್ರಾಮ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆವು.
ಇದನ್ನೂ ಓದಿ : ನ್ಯಾಯ ವಿಜ್ಞಾನ ಕೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ : ಅಮಿತ್ ಶಾ
ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರಂಭಸಿದ್ರು. ನರಸಿಂಹಯ್ಯ ನೇತೃತ್ವದಲ್ಲಿ ನಾವು ತಾಂತ್ರಿಕ ಸಮಿತಿ ನೇಮಕ ಮಾಡಿದ್ದೆವು. ಆಗ ಕಂದಾಯ ಗ್ರಾಮ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ವಿ. ಕಾಗೋಡು ತಿಪ್ಪಮ್ಮ ಕಂದಾಯ ಸಚಿವರಾಗಿದ್ರು. ವಾಸಿಸುವವನೆ ಮನೆಯ ಒಡೆಯ ಎಂದು ನಾವು ಹೊಸ ಸೆಕ್ಷನ್ ಸೇರಿಸುವ ಕೆಲಸ ಮಾಡಿದ್ವಿ. ಅಡುಗೆ ಮಾಡಿದವರು ನಾವು ಊಟಕ್ಕೆ ಮೋದಿಗೆ ಕರೆದುಕೊಂಡು ಬಂದ್ರು. ನಾರಾಯಣಪುರ ಸ್ಕಾಡಾ ಗೇಟ್ ಗಳು ನಾವು ಪ್ರಾರಂಭಸಿದ್ದೇವೆ. 2014 ರಲ್ಲಿ ನಾವು ಮಾಡಿದ್ದು. 3500 ಸಾವಿರ ಕೋಟಿ ನಾವು ಇದ್ದಕ್ಕೆ ಖರ್ಚು ಮಾಡಿದ್ದೇವೆ. ಇವರ ಬಂಡವಾಳವೇ ನರೇಂದ್ರ ಮೋದಿ. ಈಗಿನ ಸಚಿವರು ಅಲಿಬಾಬಾ 40 ಚೋರ್ ಇದ್ದ ಹಾಗೆ. ಇವರ ಮುಖಕ್ಕೆ ಓಟ ಬರಲ್ಲ ಅಂತ ಮೋದಿಗೆ ಕರೆದುಕೊಂಡು ಬರ್ತಾಯಿದ್ದಾರೆ. ಮೋದಿ, ಅಮಿತ್ ಶಾ, ನಡ್ಡಾಗೆ ಕರೆದುಕೊಂಡು ಬರ್ತಾಯಿದ್ದಾರೆ. ಯಾಕೆಂದ್ರೆ ಇವರ ಮುಖ ಅಳಸಿ ಹೋಗಿದೆ. ಇವರಿಗೆ ಜನ ಕೋಲು ತೆಗೆದುಕೊಂಡು ಹೊಡೆಯುತ್ತಾರೆ ಎಂದು ಗುಡುಗಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರನ್ನ ಕರೆದುಕೊಂಡು ಕಾರ್ಯಕ್ರಮ ಮಾಡ್ತಾರೆ. ಇವರ ಕಾರ್ಯಕ್ರಮಕ್ಕೆ ಜನ ಬರ್ತಾಯಿಲ್ಲ. ಪ್ರಜಾಧ್ವನಿ ಯಾತ್ರೆಗೆ 20ನೇ ಜಿಲ್ಲೆ ಯಾದಗಿರಿಯಾಗಿದೆ ಎಂದು ಈ ಬಾರಿ ಕಾಂಗ್ರೆಸ್, ಈ ಕಾಂಗ್ರೆಸ್ ಎಂದು ಘೋಷಣೆ ಕೂಗಿದರು. ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ನಾನು ಸಿಎಂ ಇದ್ದಾಗ ಗ್ರಾ.ಪಂಗಳಿಗೆ 200-300 ಮನೆಗಳನ್ನ ಕೊಟ್ಟಿದೆ. ಇವರ ಮನೆ ಹಾಳ್ ಆಗ ಕಟ್ಟಿರುವ ಮನೆಗಳಿಗೆ ಬಿಲ್ ಕೊಡ್ತಾಯಿಲ್ಲ ಇವರು. ನಾನು ಸಿಎಂ ಇದ್ದಾಗ ವರ್ಷಕ್ಕೆ 3 ಲಕ್ಷ ಮನೆಗಳನ್ನ ಕಟ್ಟಿಸಿದ್ದೇವೆ. ಐದು ವರ್ಷಕ್ಕೆ 15 ಲಕ್ಷ ಮನೆಗಳನ್ನ ಕಟ್ಟಿದ್ದೇವೆ. ಈ ಬಾರಿ 4 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು. ಹತ್ತಿಗೆ ಬೆಲೆ ಇಲ್ಲ ತೊಗರಿ ಬೆಳೆ ಹಾಳಾಗಿ ಹೋಗಿದೆ. ತೊಗರಿ ಬೆಳೆ ಹಾಳಾಗಿದೆ ಅವರಿಗೆ ಪರಿಹಾರ ಕೊಡಬೇಕು. ನಮ್ಮದು ರೈತರ ಸರ್ಕಾರ ಡಬಲ್ ಇಂಜಿನ್ ಸರ್ಕಾರ ಅಂತಾರೆ. ರೈತರ ದುಪ್ಪಟ್ಟು ಮಾಡ್ತಾನೆ ಅಂತ ಮೋದಿ ಹೇಳಿದ್ರು ಆಯ್ತಾ..? ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ. ಡಿಎಪಿ ಬೆಲೆ ಏರಿಕೆ ಆಗಿದೆ. ಮೋದಿ ಹೇಳ್ತಾರೆ ಅಚ್ಚೆ ದಿನ್ ಆಯೇಂಗೆ ಅಂತಾ ಹೇಳಿದ್ರು. ಮೋದಿ ಇನ್ನೊಂದು ಸುಳ್ಳು ಹೇಳಿದ್ರು. ನಾ ಕಾವುಂಗಾ ನಾ ಕಾಹನ ದುಂಗಾ ಮೈ ಚೌಕಿದಾರ್ ಅಂತ ಹೇಳಿದ್ರು. ಅದಕ್ಕೆ ಸಿದ್ದರಾಮಯ್ಯ ಮೋದಿ ಜೀ ಕಿಂವ್ ಜೋಟ್ ಬೋಲ್ತೆ ಎಂದು ಮೋದಿ ಮಿಮಿಕ್ರಿ ಮಾಡಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡ್ತಿವಿ ಅಂತ ಹೇಳಿದ್ರು. ಆಗಾದ್ರೆ ಇಲ್ಲಿ ವರೆಗೆ 18 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆದ್ರೆ ಈಗ ಪಕೋಡಾ ಮಾರಾಟ ಮಾಡಿ ಅಂತಾರೆ. ಕೇಂದ್ರದಲ್ಲಿ ಮೋದಿ ಸುಳ್ಳು ಹೇಳಿದ್ರೆ ಇಲ್ಲಿ ಇವರು ಸುಳ್ಳು ಹೇಳ್ತಾಯಿದ್ದಾರೆ. ನಾವು ಕೊಟ್ಟಿದ್ದ 165 ಭರವಸೆಗಳನ್ನ ಈಡೇರಿಸಿದ್ದೆವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೆವೆ. ಈಗ ಕೊಟ್ಟ ಮಾತು ನೂರಕ್ಕೆ ನೂರು ನಡೆಸಿಕೊಡ್ತೆವೆ. 200 ಯೂನಿಟ್ ವಿದ್ಯುತ್ ಫ್ರೀ ಆಗಿ ಕೊಡ್ತೆವೆ. ಮನೆಯ ಯಜಮಾನಿಗೆ 2000 ಸಾವಿರ ರೂ. ಕೊಡ್ತೆವೆ. ನಾನು ಸಿಎಂ ಇದ್ದಾಗ 7 ಕೆ.ಜಿ ಅಕ್ಕಿ ಫ್ರೀ ಆಗಿ ಕೊಡ್ತಾಯಿದ್ದೆವೆ. ಮುಂದೆ ನಾವು 10 ಕೆ.ಜಿ ಅಕ್ಕಿ ಕೊಡ್ತೆವೆ ಎಂದು ಆಶ್ವಾಸನೆ ನೀಡಿದ್ದಾರೆ.
ಅಲ್ಲದೆ, ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ. ಜೆಡಿಎಸ್ ನವರಿಗೆ ಯಾವುದೇ ತತ್ವ ಸಿದ್ದಾಂತ ಇಲ್ಲ. ಗೆದ್ದು ಎತ್ತಿನ ಬಾಲ ಹೀಡಿಯುವವರು ಕಾಂಗ್ರೇಸ್ ನವರು. ಜಾತ್ಯಾತೀತ ಸಿದ್ದಾಂತಕ್ಕೆ ಬದ್ದತೆ ಇಲ್ಲ, ಬಿಜೆಪಿ ಅನೈತಿಕ ಸರ್ಕಾರ ರಚನೆ ಮಾಡಲು ಕುಮಾರಸ್ವಾಮಿ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಕಾಶೆಂಪೂರ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.