ಬೆಳಗಾವಿ : ಚಳಿಗಾಲ ಅಧಿವೇಶನದ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಜಾನುವಾರಿನ ಗಂಟು ರೋಗ ವಿಚಾರವಾಗಿ ಪಶು ಸಂಗೋಪನೆ ಇಲಾಖೆ ಕಾರ್ಯನಿರ್ವಾಹಣೆ ಬಗ್ಗೆ ಪ್ರಶ್ನೆ ಮಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಶು ಸಂಗೋಪನ ಸಚಿವರನ್ನ ಇಕ್ಕಟಿಕೆ ಸಿಲುಕಿಸಿದರು.


COMMERCIAL BREAK
SCROLL TO CONTINUE READING

ಕಳೆದ ಆರು ತಿಂಗಳಿಂದ ದೇಶದಲ್ಲಿ ಜಾನುವಾರಿನ ಚರ್ಮ ರೋಗ ಸಮಸ್ಯೆ ಬಗ್ಗೆ ದಾಖಲೆ ಸಮೇತ ಮಾತಾನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗೋವುಗಳಿಗೆ ಖಾಯಿಲಿ ಹೆಚ್ಚಾಗಿದೆ. ಆರು ತಿಂಗಳುಗಳಿಂದ ಲಸಿಕೆ ಹಾಕುವ ಕೆಲಸ ಮಾಡ್ತಾ ಇದ್ದಾರೆ. ಗಂಟು ರೋಗಕ್ಕೆ ಈಗ ಲಸಿಕೆ ಸರಿಯಾಗಿ ಸಿಗ್ತಾ ಇಲ್ಲ. 21305 ಸಾವಿರ ಪ್ರಾಣಿಗಳು ಸತ್ತಿವೆ,ಒಂದು ತಿಂಗಳ ಇಚೇಗೆ ಹತ್ತು ಸಾವಿರ ಸತ್ತಿದೆ. ಪಶುಸಂಗೋಪನೆ ಇಲಾಖೆ ಸತ್ತು ಹೋಗಿದ್ಯಾ? ಏನು ಕೆಲಸ ಮಾಡ್ತಿದೆ? ಹಸು ಪೂಜೆ ಮಾಡಿ ಫೋಟೊ ತೆಗೆಸಿಕೊಂಡರೆ ಹಸು ಸಂರಕ್ಷಣೆ ಆಗಿಬಿಡ್ತದಾ? ಎಂದು ಅವರದ್ದೇ ದಾಟಿಯಲ್ಲಿ ಪಶು ಸಂಗೋಪನೆ ಸಚಿವರನ್ನ ತರಾಟೆಗೆ ತೆಗೆದುಕೊಂಡರು.


ಇದನ್ನೂ ಓದಿ : CM Bommai on COVID-19 Precautions: ಸರ್ಕಾರದ ಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ: ಸಿಎಂ ಬೊಮ್ಮಾಯಿ


1200 ಪೋಸ್ಟ್ ಖಾಲಿ ಬಿದ್ದಿದ್ದಾವೆ,ಪ್ರಚಾರಕ್ಕೆ ಅಷ್ಟೇ ನಿಮ್ಮ ಗೋರಕ್ಷಣೆ. ಇದೇನಾ ಗೋರಕ್ಷಣೆ? ಹಸು ಎಮ್ಮೆ ಸತ್ತರೆ ಎಷ್ಟು ಪರಿಹಾರ ನೀಡ್ತಿರಿ, ಐದು ಸಾವಿರ ನೀಡ್ತಿರಿ. ಹಸು ಎಮ್ಮೆ ಬೆಲೆ ಇಂದು ಬೆಲೆ ಎಷ್ಟಿದೆ ಗೊತ್ತಾ? ರೋಗ ಬಂದು ಇಂದು ಹಾಲಿನ ಉತ್ಪಾದನೆ ಕಡಿಮೆ ಆಗಿದೆ. 14 ಲಕ್ಷ ಲೀಟರ್ ಕಡಿಮೆ ಆಗಿದೆ. ಹಾಲಿನ ರೇಟು 37 ರೂಪಾಯಿ ಇದೆ, 37*14 ಲಕ್ಷ ಲೀಟರ್ 6 ಕೋಟಿ 66 ಲಕ್ಷ ಹಣ ಪ್ರತಿ ದಿನ ಲಾಸ್ ಆಗ್ತಿದೆ. ರಾಜಕೀಯಕ್ಕಾಗಿ ಗೋರಕ್ಷಣೆ ಅಂತೀರಿ ಎಲ್ಲಪ್ಪ ಗೋರಕ್ಷಣೆ? ಎಂದು ಮಾತಿನಲ್ಲಿ ತಿವಿದರು.


ಇದಕ್ಕೆ ದ್ವನಿಗೂಡಿಸಿದ ಇತರೆ ಶಾಸಕರು, ಕೂಡಲೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಲು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಚೌಹಾನ್, ಸೋಮವಾರ ಉತ್ತರ ನೀಡುವುದಾಗಿ ಸಮಯವಕಾಶ ಕೋರಿದರು. ನಂತರ ಸ್ಪೀಕರ್ ಕಾಗೇರಿ ಕೂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇವೆಲ್ಲಾ ಸಮಸ್ಯೆಗೆ ಪರಿಹಾರ ನೀಡಿ. ಸರ್ಕಾರದ ಹಿರಿಯ ಸಚಿವರ ಸಲಹೆ ಪಡೆಯಿರಿ, ಮನುಷ್ಯರು ಅವರ ಭಾವನೆ ವ್ಯಕ್ತಪಡಿಸಬಹುದು ಆದರೆ ಇವು ಮೂಕ ಪ್ರಾಣಿಗಳು ಕೋವಿಡ್ ಮಾದರಿಯಲ್ಲಿ ತ್ವರಿತ ಪರಿಹಾರ ನೀಡಿ ಎಂದು ಸೂಚನೆ ನೀಡಿದರು.


ಇದನ್ನೂ ಓದಿ : ಬ್ಲಾಕ್ ಮೇಲ್ ತಂತ್ರ ಯಶಸ್ವಿ; ಈಶ್ವರಪ್ಪ-ಜಾರಕಿಹೊಳಿ ಸದನಕ್ಕೆ ಹಾಜರು: ಸಚಿವ ಸ್ಥಾನ ಪ್ರತಿಷ್ಠೆ ಅಷ್ಟೇ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.