ಬೆಂಗಳೂರು: ಬೆಂಗಳೂರಿನಲ್ಲಿ ಕರ್ನಾಟಕ ಅಭಿವೃದ್ದಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ, ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಒಮ್ಮೆಲೆ ದೊಡ್ಡದಕ್ಕೆ ಗುರಿಯಿಡುವುದಕ್ಕಿಂತ ಸಣ್ಣ ಸಣ್ಣ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ.


COMMERCIAL BREAK
SCROLL TO CONTINUE READING

ಸಣ್ಣ ಸಣ್ಣ ಪ್ರಯತ್ನಗಳಿಂದ ಹೆಚ್ಚಿನದನ್ನು ಸಾಧಿಸುವುದು ಸಾಧ್ಯ. ಒಮ್ಮೆಲೆ ದೊಡ್ಡದನ್ನು ಸಾಧಿಸಬೇಕು ಎನ್ನುವ ಹುಮ್ಮಸ್ಸಿಗಿಂತ ನಿರಂತರ ಪ್ರಯತ್ನ ಮಾಡುವುದರಿಂದ ಮಹಿಳೆಯರು ದೊಡ್ಡ ಸಾಧನೆಯನ್ನು ಮಾಡಬಹುದು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತೆ  ಸಾಲುಮರದ ತಿಮ್ಮಕ್ಕ ಮಹಿಳೆಯರ ಸಾಧನೆಯ ಬಗ್ಗೆ ಶ್ಲಾಘಿಸಿದರು.  


ಇದನ್ನೂ ಓದಿ: Video: ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ


ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾ ಅನೂರಾಧ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಯಶಸ್ಸು ಪಡೆಯುವದಕ್ಕೆ ವಾಮಮಾರ್ಗಗಳನ್ನು ಹಿಡಿಯುವುದು ಸರಿಯಲ್ಲ. ಹೆಣ್ಣುಮಕ್ಕಳು ತಮಗೆ ವಹಿಸಿದ ಎಲ್ಲಾ ಕೆಲಸವನ್ನು ಚೆನ್ನಾಗಿಯೇ ನಿರ್ವಹಿಸುತ್ತಾರೆ.


ಅದು ಮನೆಯ ನಿರ್ವಹಣೆ ಇರಲಿ ಹೊರಗಿನ ಕೆಲಸಗಳೇ ಇರಲಿ. ಮಹಿಳೆಗೆ ಶಕ್ತಿ ಎನ್ನುವುದು ಬಹಳಷ್ಟಿದೆ. ಸ್ವಾಮಿ ವಿವೇಕಾನಂದರು ಒಂದು ಹೋರಾಟಕ್ಕೆ ಮಹಿಳೆ ಕೈಜೊಡಿಸಿದರೆ ಯಶಸ್ಸು ಸಾಧ್ಯ ಎಂದರು. ಎಂಥಹ ಸಂದರ್ಭದಲ್ಲಿ ನಮ್ಮತನವನ್ನ ಕಳೆದುಕೊಳ್ಳದೇ  ಸಾಧಸುವ ಮನಸ್ಥಿತಿ ಹೊಂದುವುದು ಸಹ ಪ್ರಸುತ್ತ ಯುಗದಲ್ಲಿ ಒಳ್ಳೆದೆಂದು ಅಭಿಪ್ರಾಯ ಪಟ್ಟರು. 


ಇದನ್ನೂ ಓದಿ: ʼರಾಹುಲ್‌ ಗಾಂಧಿ ಅನರ್ಹʼ.. ಪ್ರಜಾಪ್ರಭುತ್ವದಲ್ಲಿ ಇದೊಂದು ʼಕರಾಳ ದಿನʼhttps://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.