ಬೆಂಗಳೂರು: ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ಟೆಕಿಯಾನ್ ಬೆಂಗಳೂರಿನಲ್ಲಿ ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದೆ. ಈ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮವು ಟೆಕಿಯಾನ್ ಸಂಸ್ಥೆಯ ಮುಂದುವರೆಸುತ್ತಿರುವ ಬದ್ಧತೆಯ ಭಾಗವಾಗಿದೆ.  
ಕನಕಪುರ ರಸ್ತೆಯಲ್ಲಿರುವ ಈ ಕೇಂದ್ರವು ಅನಾಥ, ಗಾಯಗೊಂಡ, ರಕ್ಷಿಸಲ್ಪಟ್ಟ ಮತ್ತು ದಿಕ್ಕುದೆಸೆಯಿಲ್ಲದ ಬೆಕ್ಕುಗಳಿಗೆ ಸಮಗ್ರ ಆರೈಕೆ ನೀಡುತ್ತದೆ. ಈ ಸೇವೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಆಶ್ರಯ ಮತ್ತು ದತ್ತು ಪಡೆಯುವ ಕ್ರಿಯೆಗಳು ಸೇರಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟ ರಸ್ತೆ ಬದಿ ಕಾದಾಡಿದ ಕರಡಿಗಳು- ವೀಡಿಯೋ ವೈರಲ್


ಕೇಂದ್ರದ ಸೇವಾ ಸೌಲಭ್ಯಗಳ ಕುರಿತು ಟೆಕಿಯಾನ್‌ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಣಾ ರಾಬಿಲಾರ್ಡ್ ಮಾತನಾಡುತ್ತಾ " ಬೆಂಗಳೂರಿನ ದುರ್ಬಲ ಬೆಕ್ಕುಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಪ್ರಾಣಾ ಅನಿಮಲ್ ಫೌಂಡೇಶನ್‌ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಮತ್ತು ಈ ಕೇಂದ್ರವು ಅಗತ್ಯ ಆರೈಕೆ ಮಾತ್ರವಲ್ಲದೆ ಪ್ರಾಣಿ ಕಲ್ಯಾಣ ಮತ್ತು ಸಾಕುಪ್ರಾಣಿಗಳ ಜವಾಬ್ದಾರಿಯುತ ಮಾಲೀಕತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ" ಎಂದು ಹೇಳಿದರು.


2024 ರಲ್ಲಿ ತುರ್ತು ಸಂದರ್ಭಗಳಲ್ಲಿ 24/7 ಪ್ರಾಣಿಗಳ ಆಂಬ್ಯುಲೆನ್ಸ್ ಸೇವೆಯ ಯಶಸ್ವಿ ಪ್ರಾರಂಭದೊಂದಿಗೆ ಈ ಸಹಯೋಗವು ಕಳೆದ ವರ್ಷದಲ್ಲಿ ಟೆಕಿಯಾನ್ ಮತ್ತು ಪ್ರಾಣಾ ನಡುವಿನ ಮೂರನೇ ಜಂಟಿ ಕಾರ್ಯಕ್ರಮವಾಗಿದೆ.


“ಈ ಕೇಂದ್ರ ತೆರೆಯುತ್ತಿರುವುದು ನನ್ನ ಕನಸನ್ನು ನನಸು ಮಾಡಿದಂತಾಗಿದೆ. ಭಾರತದಲ್ಲಿ ಇದು ಬೆಕ್ಕುಗಳಿಗೆ ಮೊದಲ ಆರೈಕೆ ಕೇಂದ್ರವಾಗಿದೆ. ಅನಾಥ ಬೆಕ್ಕುಗಳ ರಕ್ಷಣೆ ಮಾಡುವ ಸ್ವಯಂ ಸೇವಕರಿಗೆ ಸಹಾಯವಾಗಲು ಮತ್ತು ದತ್ತು ಪಡೆಯುವವರೆಗೂ ಇರಿಸಿಕೊಳ್ಳಲು ಸ್ಥಳಾವಕಾಶಕ್ಕೆ ಸಹಾಯ ಹಸ್ತ ನೀಡಿದ ಟೆಕಿಯಾನ್ ನಮ್ಮ ಧನ್ಯವಾದಗಳು. ನಾವು ಈಗ ವಿಶೇಷ ಆರೈಕೆ ಒದಗಿಸಬಹುದು ಮತ್ತು ಬೆಕ್ಕುಗಳಿಗೆ ಪ್ರೀತಿಯ ಮನೆಗಳನ್ನು ನೀಡಬಹುದು, ನಾವು ಇನ್ನೂ ಬಹಳ ದೂರ ಸಾಗಬೇಕಾಗಿದೆ, ಪ್ರಾಣಿಗಳಿಗೆ ಸಹಾಯ ಮಾಡುವ ನಮ್ಮ ಧ್ಯೇಯವನ್ನು ಬೆಂಬಲಿಸುವ ಟೆಕಿಯಾನ್ ನೊಂದಿಗೆ ಮುಂದಿನ ಅನೇಕ ಸಹಯೋಗಗಳಿಗಾಗಿ ಉತ್ಸುಕರಾಗಿದ್ದೇವೆ" ಎಂದು ನಟಿ  ಹಾಗೂ ಪ್ರಾಣಾ ಅನಿಮಲ್ ಫೌಂಡೇಶನ್‌ನ ಸಂಸ್ಥಾಪಕಿ ಸಂಯುಕ್ತಾ ಹೊರ್ನಾಡ್ ಹೇಳಿದರು.


ಇದನ್ನೂ ಓದಿ: ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ.. ಪ್ರಖ್ಯಾತ ನಟಿಯೊಂದಿಗೆ ಸಲ್ಮಾನ್‌ ಖಾನ್‌ ಮದುವೆ ಫಿಕ್ಸ್!‌ ಬಾಯಿಜಾನ್‌ ಕೈ ಹಿಡಿಯೋ ಚೆಲುವೆ ಇವರೇ!?   


ಈ ಕೇಂದ್ರದಲ್ಲಿ ಅಪಘಾತದಿಂದ ಅಥವಾ ಗಾಯಗೊಂಡ ಬೆಕ್ಕುಗಳಿಗೆ ಆರೈಕೆ ಸೌಲಭ್ಯಗಳಿವೆ, ಬೆಕ್ಕುಗಳ ಶಾಶ್ವತ ಜೀವನಕ್ಕಾಗಿ ನಿಯಮಿತವಾಗಿ ದತ್ತು ಸ್ವೀಕಾರ ಕ್ರಿಯೆ ನಡೆಸಲಾಗುತ್ತದೆ. ಕ್ರಿಯಾತ್ಮಕತೆಯ ಭಾಗವಾಗಿ ಕೇಂದ್ರವು ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಇತರ ಸ್ಥಳೀಯ ಕಲಾ ಕಾಲೇಜುಗಳ ವಿದ್ಯಾರ್ಥಿಗಳು ಚಿತ್ರಿಸಿದ ಬೆಕ್ಕುಗಳ ವಿಷಯದ ಭಿತ್ತಿಚಿತ್ರಗಳನ್ನು ಒಳಗೊಂಡಿದೆ. ಪ್ರಾಣಿಗಳ ಬಗ್ಗೆ ಸಹಾನುಭೂತಿ ಮತ್ತು ಗೌರವವನ್ನು ಉತ್ತೇಜಿಸಲು ಪ್ರಾಣಾ ಫೌಂಡೇಶನ್ ಶಾಲಾ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ