ಬೆನ್ನಿಗೆ ಚೂರಿ ಹಾಕಿದ ಶಾಸಕರಿಗೆ ನಡುಕ ಆರಂಭವಾಗಿದೆ: ದಿನೇಶ್ ಗುಂಡೂರಾವ್
ಅವರ ಹಣೆಬರಹ ಏನೇ ಆಗಲಿ. ಆದರೆ, ಒಂದಂತೂ ಸತ್ಯ. ನಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಶಾಸಕರಿಗೆ ನಮ್ಮ ಪಕ್ಷದಲ್ಲಿ ಇನ್ನೆಂದೂ ಜಾಗವಿಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು: ರಾಜ್ಯದ ಪ್ರಸ್ತುತ ವಿದ್ಯಮಾನಗಳಿಂದ ಪಕ್ಷದ ಬೆನ್ನಿಗೆ ಚೂರಿ ಹಾಕಿರುವ ಶಾಸಕರಿಗೆ ಈಗಾಗಲೇ ನಡುಕ ಆರಂಭವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಅವರ ಹಣೆಬರಹ ಏನೇ ಆಗಲಿ. ಆದರೆ, ಒಂದಂತೂ ಸತ್ಯ. ನಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಕುಳಿತಿರುವ ಶಾಸಕರಿಗೆ ನಮ್ಮ ಪಕ್ಷದಲ್ಲಿ ಇನ್ನೆಂದೂ ಜಾಗವಿಲ್ಲ ಎಂದು ಹೇಳಿದ್ದಾರೆ.
ಅತೃಪ್ತರ ಪಾಲಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ಮುಚ್ಚಿದೆ ಎಂದಿರುವ ದಿನೇಶ್, ಅವರೇನು ನಿರ್ಧಾರ ತೆಗೆದುಕೊಳ್ಳುತ್ತಾರೋ, ಅದರಿಂದ ಯಾವ ರೀತಿಯ ಪರಿಣಾಮ ಎದುರಿಸುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ಅತೃಪ್ತರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವುದಿಲ್ಲ. ಇದು ಅವರೆಲ್ಲರಿಗೂ ಪಾಠವಾಗಬೇಕು ಎಂದಿದ್ದಾರೆ.