ಬೆಂಗಳೂರು: ಅನಕ್ಷರಸ್ಥರಾಗಿದ್ದರೂ ಕೂಡ ಇನ್ನೊಬ್ಬರ ಬಾಳಲ್ಲಿ ಅಕ್ಷರದ ಬೆಳಕು ಮೂಡಿಸಲು ಜೀವನವಿಡಿ ಶ್ರಮಿಸಿದ ಹರೇಕಳ ಹಾಜಬ್ಬರಿಗೆ ಈಗ ದೇಶದ ಪ್ರತಿಷ್ಠಿತ ಪದ್ಮಶ್ರೀ ಗೌರವ ಒಲಿದಿದೆ.



COMMERCIAL BREAK
SCROLL TO CONTINUE READING

ದಕ್ಷಿಣ ಕನ್ನಡದ ನೆವಪಾಡುಡು ಗ್ರಾಮದಲ್ಲಿ 20 ವರ್ಷಗಳ ಕಾಲ ಕಿತ್ತಳೆ ಹಣ್ಣನ್ನು ಮಾರಿ ಮಸೀದಿಯೊಂದರಲ್ಲಿ ಹಾಜಬ್ಬ ಶಾಲೆಯನ್ನು ನಿರ್ಮಿಸಿದರು. ಮುಂದೆ ಈ ಇದನ್ನು ಸ್ಥಳೀಯ ಜನರು ಹಾಗೂ ಸರ್ಕಾರದ ನೆರವಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಪರಿವರ್ತಿಸಿದರು. ಈಗ ಈ ಶಾಲೆಯನ್ನು ತಮ್ಮ ಗ್ರಾಮದ ಮಕ್ಕಳಿಗಾಗಿ ಪದವಿ ಪೂರ್ವ ಕಾಲೇಜಾಗಿ ಪರಿವರ್ತಿಸುವ  ಯೋಜನೆಯನ್ನು ಹೊಂದಿದ್ದಾರೆ.


ಅನಕ್ಷರಸ್ಥರಾಗಿದ್ದುಕೊಂಡು ಜೀವನ ವಿಡಿ ಅನುಭವಿಸಿದ ಕಷ್ಟವು ಮುಂದಿನ ಪೀಳಿಗೆ ಸಹಿತ ತಮ್ಮಂತೆ ಕಷ್ಟ ಎದುರಿಸಬಾರದು ಎಂದು ಅವರು ಶಾಲೆಯನ್ನು ನಿರ್ಮಿಸಿದರು. ಈಗ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ ಸರ್ಕಾರ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಗೌರವಕ್ಕೆ ಹೆಸರಿಸಿದೆ.