ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯ ಅನೇಕ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದರಲ್ಲಿ ಅನೇಕ ವಿಡಿಯೋಗಳು ಎದೆ ಝಲ್‌ ಎನ್ನುವಂತಿರುತ್ತವೆ. ರಸ್ತೆ ಅಪಘಾತ, ಮೆಟ್ರೋ ನಿಲ್ದಾಣದಲ್ಲಿ ಆಗುವ ಅವಘಗಳು, ಸಾರ್ವಜನಿಕ ಸ್ಥಳಗಳಲ್ಲಿ ಜರಗುವ ಅಪಘಾತಗಳ ವಿಡಿಯೋಗಳು ನೋಡುಗರ ಮೈನವಿರೇಳಿಸುವಂತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ’ ಇದೇ ಬಿಜೆಪಿ ಸರ್ಕಾರದ ಧ್ಯೇಯ ವಾಕ್ಯ!: ಕಾಂಗ್ರೆಸ್


ಬೆಂಗಳೂರಿನಲ್ಲಿ ತಪ್ಪಿದ ದೊಡ್ಡ ಅನಾಹುತ:


ಹೇಳಿಕೇಳಿ ಬೆಂಗಳೂರು ಜನಜಂಗುಳಿಯಿಂದ ಕೂಡಿರುವ ಪ್ರದೇಶ. ಅದರಲ್ಲೂ ಇಲ್ಲಿನ ರೈಲ್ವೇ ನಿಲ್ದಾಣಗಳಲ್ಲಂತೂ ದಿನಕ್ಕೆ ಸಾವಿರಾರು ಜನ ಪ್ರಯಾಣಿಕರಿರುತ್ತಾರೆ. ರೈಲು ಬರುವ ಮುನ್ನ ಹಳಿ ಮೇಲೆ ಬಿದ್ದ ಪ್ರಯಾಣಿಕ ಜಸ್ಟ್ ಮಿಸ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 


ರೈಲ್ವೆ ಹಳಿ ದಾಟಲು ಹೋಗಿ ಪ್ರಯಾಣಿಕ ಕಾಲು ಜಾರಿ ಬಿದ್ದಿದ್ದಾನೆ. ಇನ್ನೇನು ರೈಲು ಬರಬೇಕು ಎನ್ನುವಷ್ಟರಲ್ಲಿ ರೈಲ್ವೇ ಸಿಬ್ಬಂದಿ ಈತನ ರಕ್ಷಣೆಗೆ ಧಾವಿಸಿದ್ದಾರೆ. ಆರ್ ಪಿ ಎಫ್ ಸಿಬ್ಬಂದಿ ಪ್ರಯಾಣೀಕನನ್ನು ರಕ್ಷಿಸಿದ್ದಾರೆ.


ಇದನ್ನೂ ಓದಿ: ಬಾಲಕಿಯನ್ನು ಮದುವೆಯಾಗಲು ಆಧಾರ್ ಕಾರ್ಡ್ ತಿದ್ದಿದ ಮದುಮಗ.. ಈಗ ಪೊಲೀಸರ ಅತಿಥಿ


ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ:


ರೈಲು ಹಳಿ ಮೇಲೆ ಪ್ರಯಾಣಿಕ ಬೀಳುವ ಮತ್ತು ಆತನನ್ನು ಆರ್ ಪಿ ಎಫ್ ಸಿಬ್ಬಂದಿ ರಕ್ಷಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರ್ ಪಿ ಎಫ್ ನ ಪ್ರದೀಪ್ ಹಾಗೂ ASI ರವಿ ಜಿ.ಡಿ ಪ್ರಯಾಣಿಕನ ರಕ್ಷಣೆ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.