ಧಾರವಾಡ: ಧಾರವಾಡದ ಸಂಗೋಳ್ಳಿ ರಾಯಣ್ಣ ನಗರದ ನಿವಾಸಿ ಕುಮಾರ ಭಜಂತ್ರಿ ಅನ್ನುವವರು ಸಿವಿಲ್ ಕಾಂಟ್ರ್ಯಾಕ್ಟರ್ ಆಗಿದ್ದು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ತಮ್ಮ ಉದ್ಯೋಗವನ್ನು ಮಾಡುತ್ತಿದ್ದರು.ಎದುರುದಾರರು ಕೊಲ್ಲಾಪುರದಲ್ಲಿ ಸುಶೀಲಾನಂದ ಇಕ್ವೀಪ್‍ಮೆಂಟ್‍ಅನ್ನುವ ಕಂಪನಿ ನಡೆಸುತ್ತಿದ್ದರು. ಎದುರುದಾರರು ಕಾಂಕ್ರೀಟ್ ಮಿಕ್ಸ್ಚರ್ ಮಶೀನನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪರಪ್ಪನ ಅಗ್ರಹಾರ ಬಳಿ ರಸ್ತೆ ಸಂಪೂರ್ಣ ಬಂದ್


ದೂರುದಾರ ತಮ್ಮ ವೃತ್ತಿಗೆ ಅನುಕೂಲವಾಗಲೇಂದು ಎದುರುದಾರರಿಂದ ಕಾಂಕ್ರೀಟ್ ಮಿಕ್ಸ್ಚರ್‍ಮಶೀನನ್ನು ರೂ.98,500/- ಕೊಟ್ಟು ಖರೀದಿಸಿದ್ದರು. ಆದರೆ ಎದುರುದಾರರು ಒಪ್ಪಂದ ಮಾಡಿಕೊಂಡ ಹೈಗ್ರೇಡ್ ಮತ್ತು ಒಳ್ಳೆಯ ಗುಣಮಟ್ಟದ ಕಾಂಕ್ರೀಟ್ ಮಿಕ್ಸ್ಚರ್‍ಮಶೀನನ್ನು ಕೊಡುವ ಬದಲು ರೂ.35,400/- ಬೆಲೆಯ ಕಡಿಮೆ ಗುಣಮಟ್ಟದ ಕಾಂಕ್ರೀಟ್ ಮಿಕ್ಸ್ಚರ್‍ಮಶೀನನ್ನು ದೂರುದಾರರಿಗೆ ಸರಬರಾಜು ಮಾಡಿದ್ದರು. ಅದು ಸರಿಯಾಗಿ ಕೆಲಸ ಮಾಡದ ಕಾರಣ ದೂರುದಾರರು ಎದುರುದಾರರಿಗೆ ಅದನ್ನು ಮರಳಿ ಪಡೆದು ತಾವು ಆರ್ಡರ್ ಮಾಡಿದ ಕಾಂಕ್ರೀಟ್ ಮಿಕ್ಸ್ಚರ್‍ಮಶೀನನ್ನು ಕೊಡುವಂತೆ ಸಾಕಷ್ಟು ಸಲ ಕೇಳಿದರೂ ಎದೂರುದಾರರು ಅದಕ್ಕೆ ಸ್ಪಂದಿಸಿರಲಿಲ್ಲ. ತನಗೆ ಒಳ್ಳೆಯ ಗುಣಮಟ್ಟದ ಕಾಂಕ್ರೀಟ್ ಮಿಕ್ಸ್ಚರ್ ಮಶೀನ ಕೊಡದೇ ಅಥವಾ ತಾನು ಕೊಟ್ಟ ರೂ.98,500/- ಹಿಂದಿರುಗಿಸದೇ ತನಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಸುಶೀಲಾನಂದ ಇಕ್ವೀಪ್‍ಮೆಂಟ್‍ರವರ ಮೇಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.30/09/2023 ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ಕಾರ್ಯಕರ್ತರ ಕೋಪಕ್ಕೆ BMTC ಬಸ್‌ ಗ್ಲಾಸ್‌ ಪೀಸ್‌ ಪೀಸ್‌


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದಸ್ಯರು, ದೂರುದಾರರು ದಾಖಲಿಸಿದ ಸಾಕ್ಷಾಧಾರಗಳನ್ನು ಆಯೋಗ ಪರಿಶೀಲಿಸಿದಾಗ ದೂರುದಾರರ ರೂ.98,500/- ಹಣ ಪಾವತಿಸಿ ಹೆವಿ ಲೋಡಿಂಗ್ ಕಾಂಕ್ರೀಟ್ ಮಿಕ್ಸ್ಚರ್‍ಮಶೀನ್ ಖರೀದಿಸಿದ್ದು ಕಂಡು ಬರುತ್ತದೆ. ಆದರೆ ಎದುರುದಾರರು ಹೆವಿ ಲೋಡಿಂಗ್ ಕಾಂಕ್ರೀಟ್ ಮಿಕ್ಸ್ಚರ್‍ಮಶೀನ್ ಬದಲಿಗೆ ಲೋ ಗ್ರೇಡ್ ಕಾಂಕ್ರೀಟ್ ಮಿಕ್ಸ್ಚರ್‍ಮಶೀನ್ ಕೊಟ್ಟಿರುವುದು ವ್ಯಾಪಾರದ ಅನುಚಿತ ವರ್ತನೆ ಹಾಗೂ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ. ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ತಾವು ಕೊಟ್ಟಂತಹ ಲೋ ಗ್ರೇಡ್ ಕಾಂಕ್ರೀಟ್ ಮಿಕ್ಸ್ಚರ್‍ಮಶೀನ್‍ನ್ನು ಮರಳಿ ಪಡೆದು ದೂರುದಾರರು ಪಾವತಿಸಿದ ರೂ.98,500/- ಹಣವನ್ನು ಮರಳಿ ಕೊಡುವಂತೆ ಆಯೋಗ ಆದೇಶಿಸಿದೆ. ಎದುರುದಾರರ ಅನುಚಿತ ವ್ಯಾಪಾರ ಪದ್ಧತಿಯಿಂದ ದೂರುದಾರರಿಗೆ ಅನಾನುಕೂಲ, ವೃತ್ತಿ ನಷ್ಟ ಹಾಗೂ ಮಾನಸಿಕ ತೊಂದರೆ ಆಗಿದೆ ಅಂತ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಅದಕ್ಕಾಗಿ ದೂರುದಾರರಿಗೆ ರೂ.25,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಸುಶೀಲಾನಂದ ಇಕ್ವೀಪ್‍ಮೆಂಟ್‍ನ ಮಾಲೀಕ ಅನುಪ್ ಪಾಟೀಲ್‍ರವರಿಗೆ ಆದೇಶಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.