ಕಾರವಾರ : ಒಂಟಿ ಸಲಗವೊಂದು ಪಟ್ಟಣಕ್ಕೆ ಆಗಮಿಸಿದ ಆತಂಕ ಸೃಷ್ಟಿಮಾಡಿರುವ ಘಟನೆ ಉತ್ತರಕನ್ನಡದ ಹಳಿಯಾಳದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. 


COMMERCIAL BREAK
SCROLL TO CONTINUE READING

ಬೆಳಿಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಪಟ್ಟಣಕ್ಕೆ ಬಂದ ಆನೆ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡಿ ಆತಂಕ ಸೃಷ್ಟಿಸಿತ್ತು. ಇದನ್ನು ಕಂಡ ಜನತೆ ಕೂಡಲೇ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಳಿಯಾಳ ಪಟ್ಟಣದ ಆಶ್ರಯ ಕಾಲೋನಿ ಬಳಿ ಆನೆ ಬೀಡು ಬಿಟ್ಟಿದ್ದ ಆನೆಯನ್ನು ಕಾಡಿಗೆ ಓಡಿಸಲು ಹರಸಾಹಸ ಮಾಡಬೇಕಾಯಿತು. 


ಅರಣ್ಯ ಇಲಾಖೆ ಅಧಿಕಾರಿ ರಮೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಆನೆಯನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಾನೆ ಮತ್ತೆ ಕಾಡು ಸೇರಿದ ಹಿನ್ನೆಲೆಯಲ್ಲಿ ಪಟ್ಟಣದ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.