ಧಾರವಾಡ:  ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಪ್ರತಿಯೊಬ್ಬರಲ್ಲಿಯೂ ಸುರಕ್ಷತೆ ಭಾವ ಮೂಡಿಸಲು ಮತ್ತು ಪೊಲೀಸ್, ಪ್ರಮುಖ ಕಾನೂನುಗಳ ಬಗ್ಗೆ ಯುವ ಸಮುದಾಯ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಮಹಾನಗರದ ಒಂದು ಶಾಲೆ ಅಥವಾ ಕಾಲೇಜಿನಲ್ಲಿ ಪೊಲೀಸ್ ದಿನ ಆಚರಿಸಲು ನಿರ್ಧರಿಸಲಾಗಿದೆ. ಈ ವಿಶೇಷ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ, ಯಶಸ್ವಿಗೊಳಿಸಬೇಕೆಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ತಿಳಿಸಿದರು.


COMMERCIAL BREAK
SCROLL TO CONTINUE READING

ಅವರು, ಇಂದು ಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತಾಲಯವು ವಿದ್ಯಾರ್ಥಿ ಸಮೂಹ, ಯುವ ಸಮುದಾಯದಲ್ಲಿ ಪೊಲೀಸ್ ವ್ಯವಸ್ಥೆ, ಸಂಚಾರಿ ನಿಯಮ, ಪ್ರಮುಖ ಕಾನೂನುಗಳ ಅರಿವು ಮೂಡಿಸಲು ಆರಂಭಿಸಿರುವ ವಿನೂತನ ಸರಣಿ ಪೋಲಿಸ್ ದಿನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.


ಸಮಾಜ ಸೌಹರ್ದತೆ ಮತ್ತು ಶಂತಿಯುತವಾಗಿರಬೇಕು. ಪ್ರತಿಯೊಬ್ಬರಲ್ಲೂ ಸುರಕ್ಷತೆ ಭಾವ ಮೂಡಬೇಕು. ಇದು ಬರೀ ಪೊಲೀಸ್ ರ ಜವಾಬ್ದಾರಿ ಮಾತ್ರವಲ್ಲ; ಪ್ರತಿ ನಾಗರಿಕರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.


ಪೊಲೀಸ್ ರ ಬಗ್ಗೆ ಭಯ, ಅಪನಂಬಿಕೆ ಬೇಡ.


ಪೊಲೀಸ್ ರು ಸಮವಸ್ತ್ರ ಧರಿಸಿರುವ ಸಾರ್ವಜನಿಕರು, ಮತ್ತು ಸಾರ್ವಜನಿಕರು ಸಮವಸ್ತ್ರ ಧರಿಸಿದ ಪೊಲೀಸ್ ರು. ಎಲ್ಲರೂ ಸಾಮಾಜಿಕ ಬದ್ಧತೆ ಮತ್ತು ರಾಷ್ಟಪ್ರೇಮದಿಂದ ಕೆಲಸ ಮಾಡಬೇಕು. ಉತ್ತಮ ನಾಗರಿಕರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಅಪರಾಧಮುಕ್ತ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಆಯುಕ್ತರಾದ ರೇಣುಕಾ ಸುಕುಮಾರ್ ಹೇಳಿದರು.


ಇದನ್ನೂ ಓದಿ: ವಿದ್ಯುತ್‌ ಕಂಬಗಳ ಮೇಲಿನ ಅನಧಿಕೃತ ಕೇಬಲ್‌ ಗಳ ತೆರವಿಗೆ ಒಂದು ವಾರದ ಗಡುವು ನೀಡಿದ ಬೆಸ್ಕಾಂ


ಸಂಚಾರ ನಿಯಮಗಳನ್ನು ತಪ್ಪದೆ ಎಲ್ಲರೂ ಪಾಲಿಸಬೇಕು. ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ವಾಹನದ ಅಗತ್ಯ ದಾಖಲೆಗಳನ್ನು ಚಾಲ್ತಿಯಲ್ಲಿರುವಂತೆ ಹೊಂದಿರಬೇಕು. ಮದ್ಯಪಾನ ಮಾಡಿ, ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೆ ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುವದರೊಂದಿಗೆ ಸಹ ಪ್ರಯಾಣಿಕರ, ಇತರರ ಜೀವಕ್ಕೂ ಅಪಾಯವಾಗುತ್ತದೆ. ಸುರಕ್ಷಿತ ಚಾಲನೆಗಾಗಿ ರೂಪಿಸಿರುವ ಸಂಚಾರಿ ನಿಯಮಗಳನ್ನು ಗೌರವಿಸಿ, ತಮ್ಮನಿಯಂತ್ರಣದಲ್ಲಿ ವಾಹನಗಳನ್ನು ಚಲಾಯಸಬೇಕು. ವಿದ್ಯಾರ್ಥಿಗಳು ಈ ಕುರಿತು ತಮ್ಮ ಪಾಲಕರಿಗೆ, ಕುಟುಂಬ ಸದಸ್ಯರಿಗೆ ಮತ್ತು ಪರಿಚಿತರಲ್ಲಿ ಅರಿವು ಮೂಡಿಸುವ ಮೂಲಕ ದೇಶ ಸೇವೆ ಮಾಡಬೇಕೆಂದು ಅವರು ತಿಳಿಸಿದರು.


ಯಾವುದೇ ಕಾನೂನು ರಚನೆಯ ಆಶಯ, ಸಮಾಜದ ಸುರಕ್ಷತೆಯಾಗಿದೆ. ನಿಯಮ, ಕಾನೂನುಗಳು ಕಠಿಣವೆನಿಸಿದರೂ ಪಾಲಿಸುವುದು ನಮ್ಮ ಕರ್ತವ್ಯ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಯುವ ಸಮೂಹ ಪ್ರಮುಖ ಸಂವಹನ ಮಾಧ್ಯಮವಾಗಿದೆ. ಸಂಚಾರಿ ನಿಯಮ, ಪೊಲೀಸ್, ಕಾನೂನುಗಳನ್ನು ಯುವಕರು ತಾವೂ ಗೌರವಿಸಿ, ಪಾಲಿಸಬೇಕು ಮತ್ತು ಇತರರಿಗೂ ಗೌರವಿಸಿ, ಪಾಲಿಸುವಂತೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.


ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಜೀವನದ ಅತ್ಯಗತ್ಯ ಭಾಗಗಳಾಗಿವೆ. ಅವುಗಳನ್ನು ಬಳಸದ ದಿನವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಎಚ್ಚರವಿರಲಿ. ವಿಜ್ಞಾನ, ತಂತ್ರಜ್ಞಾನ ಸಮಾಜದ ಏಳಿಗೆಗೆ ಮತ್ತು ಅಭಿವೃದ್ಧಿ ಬೇಕು. ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು, ಉತ್ತಮ ವ್ಯಕ್ತಿತ್ವ ಬೆಳೆಸಲು ಸಾಮಾಜಿಕ ಜಾಲತಾಣಗಳ ಬಳಕೆ ಆಗಬೇಕು. ಆದರೆ ಅನೇಕರು ಅರಿವಿನ ಕೊರತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಮೋಸ, ವಂಚನೆಗೆ ಒಳಗಾಗುತ್ತಿದ್ದಾರೆ. ಬಳಕೆಯಲ್ಲಿ ಜಾಗೃತಿ ಇರಬೇಕು. ತೊಂದರೆ ಉಂಟಾದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ, ಅದನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು.


ಯುವಸಮೂಹ ಮತ್ತು ಸಾರ್ವಜನಿಕರಲ್ಲಿ ಸೈಬರ್ ಕ್ರೈಂ, ಪೋಕ್ಸೋ, ಮಾದಕ ವಸ್ತುಗಳ ನಿಷೇಧ ಕಾಯ್ದೆ, ಸಂಚಾರಿ ನಿಯಮಗಳು, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಮುಂತಾದ ದಿನನಿತ್ಯದ ಬಳಕೆಯಲ್ಲಿ ಅನ್ವಯಿಸುವ ಕಾನೂನುಗಳ ಅರಿವು ಮೂಡಿಸಲು ಪೊಲೀಸ್ ದಿನ ಆಯೋಜಿಸಲಾಗುತ್ತಿದೆ. ಜಾಗೃತ ಯುವ ಜನತೆಯನ್ನು ರೂಪಿಸುವುದು, ಅಪರಾಧ ಮುಕ್ತ ಸಮಾಜ ನಿರ್ಮಿಸುವುದು ಮತ್ತು ಪ್ರತಿಯೊಬ್ಬರಲ್ಲಿ ಪೊಲೀಸರು ನಮ್ಮ ರಕ್ಷಕರು ಎಂಬ ವಿಶ್ವಾಸ ಮೂಡಿಸುವುದು ಪೊಲೀಸ್ ದಿನದ ಆಶಯವಾಗಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಆಯುಕ್ತೆ ರೇಣುಕಾ ಸುಕುಮಾರ ಅವರು ತಿಳಿಸಿದರು.


ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿದರೆ ಜನಾಂದೋಲನವಾಗಲಿದೆ: ಬಸವರಾಜ ಬೊಮ್ಮಾಯಿ


ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ ಅವರು ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕವಸ್ತುಗಳಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಮನೆ, ಶಾಲಾ ಹಂತದಲ್ಲಿ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿ ಸರಿಯಾದ ಅರಿವು ಮೂಡಿಸಬೇಕು. ಇದು ಪಾಲಕರ ಕರ್ತವ್ಯ. ಎಲ್ಲರೂ ಸೇರಿ ಸಮಾಜ ರಕ್ಷಿಸುವ ಅಗತ್ಯವಿದೆ ಎಂದರು.


ಪೊಲೀಸ್ ಇಲಾಖೆ ಹೊಸದಾಗಿ ಆರಂಭಿಸಿರುವ ಪೊಲೀಸ್ ದಿನ ಕಾರ್ಯಕ್ರಮ ಸನ್ನಡತೆಯ ಸಮಾಜ ನಿರ್ಮಾನಕ್ಕಾಗಿ ಒಂದು ಜನಾಂದೋಲನವಾಗಿ ರೂಪುಗೊಳ್ಳಬೇಕು. ಇದಕ್ಕೆ ಅವಳಿನಗರದ ಎಲ್ಲ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಪಾಲಕರ ಸಂಘಗಳು ಸಹಕಾರ ನೀಡಬೇಕೆಂದು ಅವರು ತಿಳಿಸಿದರು.


ವೇದಿಕೆಯಲ್ಲಿ ಧಾರವಡದ ಸಹಾಯಕ ಪೊಲೀಸ್ ಆಯುಕ್ತ ವಿಜಯಕುಮಾರ್ ಟಿ., ಜೆಎಸ್ ಎಸ್ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯಾಯ , ಜೆಎಸ್ಎಸ್ ಪಿಯು ಕಾಲೇಜ ಪ್ರಾಚಾರ್ಯ ವೈ.ಎಸ್.ರಾಯಬಾಗಿ, ಸಂಚಾರಿ ಪಿಐ ಮಲ್ಲನಗೌಡ ನಾಯ್ಕರ,ಇದ್ದರು.


ಪೊಲೀಸ್ ಇನ್ಸ್ಪೆಕ್ಟರ್ ಶಂಕರಗೌಡ ಬಸನಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.


ಉಪನಗರ ಠಾಣೆ ಪಿಐ ಎನ್.ಸಿ.ಕಾಡದೇವರಮಠ ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ, ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್.ಹೂಗಾರ, ವಿದ್ಯಾಗಿರಿ ಠಾಣೆ ಕ್ರೈಂ ಪಿಎಸ್ಐ ಪ್ರಮೋದ, ಪಿಎಸ್ಐ ಮಲ್ಲಿಗವಾಡ, ಉಪನಗರ ಪೊಲೀಸ್ ಠಾಣೆ ಪಿಎಸ್ಐ ಎಲ್.ಕೆ.ಕೊಡಬಾಳ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿಗಳು, ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.