ಸಾವಿರಾರು ದೂರು ಬಂದ್ರು ತಲೆಕೆಡಿಸಿಕೊಳ್ಳದ ಬಿಎಂಟಿಎಫ್: ಸಾರ್ವಜನಿಕರಿಂದ ಅಸಮಾಧಾನ
ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಎಡಿಜಿಪಿ, ಎಸ್‌ಪಿ, ಡಿವೈಎಸ್‌ಪಿ ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆದಿರುತ್ತದೆ. ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆರ್‌ಟಿಐನಲ್ಲಿ ಪಡೆದ ದಾಖಲೆಗಳು ಇದಕ್ಕೆ ಪುಷ್ಠಿ ನೀಡುವಂತಿದೆ.
ಬೆಂಗಳೂರು: ಬಿಎಂಟಿಎಫ್ ಅಂತ ಒಂದು ಪೊಲೀಸ್ ವಿಂಗ್ ಇದೆ. ಅದೆಲ್ಲಿದೆ? ಅದೇನು ಮಾಡುತ್ತೆ? ಅನ್ನೋದೆಲ್ಲಾ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ. ಅಷ್ಟರ ಮಟ್ಟಿಗಿದೆ ಆ ಬಿಎಂಟಿಎಫ್ ಸಂಸ್ಥೆಯ ಕಾರ್ಯವೈಖರಿ ಇದೆ. ಸುಮ್ಮನೆ ಕಾಲಹರಣ ಮಾಡುವ ಬಿಎಂಟಿಎಫ್ ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಬಿಎಂಟಿಎಫ್ ಅಂದ್ರೆ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್. ಸರ್ಕಾರದ ಈ ಇಲಾಖೆ ಸರ್ಕಾರಿ ಸ್ವತ್ತು, ಬಿಬಿಎಂಪಿ ಆಸ್ತಿಗಳನ್ನು ಭೂಗಳ್ಳರಿಂದ, ಮಾಫಿಯಾಗಳಿಂದ ರಕ್ಷಣೆ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಅಧೀನದಲ್ಲೇ ಇರುವಂತೆ ನೋಡಿಕೊಳ್ಳುತ್ತದೆ. ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಎಡಿಜಿಪಿ, ಎಸ್‌ಪಿ, ಡಿವೈಎಸ್‌ಪಿ ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆದಿರುತ್ತದೆ. ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸಿದ್ರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆರ್‌ಟಿಐನಲ್ಲಿ ಪಡೆದ ದಾಖಲೆಗಳು ಇದಕ್ಕೆ ಪುಷ್ಠಿ ನೀಡುವಂತಿದೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರೋ ಬಿಎಂಟಿಎಫ್ ವಿರುದ್ಧ ಅಸಮಾಧಾನ:
ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ ಬಿಎಂಟಿಎಫ್ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಸಾವಿರಾರು ದೂರುಗಳು ಬಂದ್ರೂ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯವಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ತಿ ಕಾಪಾಡಬೇಕಾದ ಇಲಾಖೆ ಇದಾಗಿದ್ದು, ಆಸ್ತಿ ರಕ್ಷಣೆ ಮಾಡುವ ಬದಲು ಭ್ರಷ್ಟರ ರಕ್ಷಣೆ ಮಾಡ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಈ ಅನುಮಾನ ಯಾಕಂದ್ರೆ ಕಳೆದ ಹಲವು ವರ್ಷಗಳಿಂದ ಯಾವೊಂದು ಪ್ರಕರಣದಲ್ಲೂ ಕಾರ್ಯಪ್ರವೃತ್ತವಾಗಿಲ್ಲ. ಇದೀಗ ಆರ್‌ಟಿಐನಲ್ಲಿ ಪಡೆದ ದಾಖಲೆಯಲ್ಲಿ ಬಿಎಂಟಿಎಫ್ ಕಾರ್ಯವೈಖರಿ ಬಗ್ಗೆ ಮಾಹಿತಿ ಬಟಾಬಯಲಾಗಿದೆ.
ಕಳೆದ ಐದು ವರ್ಷದಲ್ಲಿ ಬಿಎಂಟಿಎಫ್ ಮಾಡಿದ್ದೇನು.!?
ವರ್ಷ | ದೂರುಗಳು | B ರಿಪೋರ್ಟ್ |
2018-19 | 280 | 06 |
20119-20 | 474 | 05 |
2020-21 | 366 | 01 |
2022-23 | 177 | |
ಒಟ್ಟು | 1689 | 13 |
ಬಿಎಂಟಿಎಫ್ ಕಾರ್ಯವೇನು..?
ಸರ್ಕಾರಿ ಸ್ವತ್ತನ್ನ ರಕ್ಷಣೆ ಮಾಡುವುದು
ಸರ್ಕಾರಿ ಆಸ್ತಿಗಳನ್ನ ರಕ್ಷಣೆ ಮಾಡುವುದು
ಒತ್ತುವರಿ ಆಗಿರೋ ಸ್ವತ್ತನ್ನ ತೆರವು ಮಾಡುವುದು
ಬಫರ್ ಝೋನ್‌ನಲ್ಲಿ ಒತ್ತುವರಿ ಇದ್ರೆ ತೆರವು ಮಾಡಬೇಕು
ಬಿಎಂಟಿಎಫ್ ಮೇಲಿರುವ ಆರೋಪಗಳೇನು.?
ವೆಬ್‌ಸೈಟ್‌ನಲ್ಲಿ ಯಾವುದೇ ಮಾಹಿತಿ ಹಾಕುತ್ತಿಲ್ಲ
ಪಾರದರ್ಶಕ ಆಡಳಿತ ನಡೆಸ್ತಿಲ್ಲ
ಭೂಗಳ್ಳರನ್ನ ರಕ್ಷಣೆ ಮಾಡುವ ಕೆಲಸ ಆಗುತ್ತಿದೆ
ರಸ್ತೆ ಒತ್ತುವರಿ ಆಗಿದೆ ಅಂತ ದೂರು ಕೊಟ್ರೂ ಕ್ರಮ ಆಗಿಲ್ಲ
ದೂರುದಾರರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ರಕ್ಷಣೆ
ಮಾಡೋ ಕೆಲಸ ಮಾಡಿ ಅಂದ್ರೆ ಮತ್ತೊಂದು ಜವಾಬ್ದಾರಿ ನೀಡಿ ಅಂತ ಸರ್ಕಾರಕ್ಕೆ ಪತ್ರ:
ಸರ್ಕಾರಿ ಸ್ವತ್ತನ್ನ ರಕ್ಷಣೆ ಮಾಡದೇ ಕಾಲಹರಣ ಮಾಡ್ತಿದೆ ಅನ್ನೋ ಆರೋಪ ತಮ್ಮ ಮೇಲೆ ಇದ್ದರೂ ಮತ್ತಷ್ಟು ಅಧಿಕಾರ ವ್ಯಾಪ್ತಿ ಕೊಡಿ ಅಂತ ನಗರಾಭಿವೃದ್ಧಿ ಇಲಾಖೆಗೆ ಬಿಎಂಟಿಎಫ್ ಎಡಿಜಿಪಿ ಪತ್ರ ಬರೆದಿದ್ದಾರೆ. ಈಗಿರುವ ಕಾರ್ಯದ ಜತೆಗೆ ಅಕ್ರಮ ಕಟ್ಟಡಗಳ ತೆರವು ಜವಾಬ್ದಾರಿ ನೀಡುವಂತೆ ಪತ್ರ ಬರೆಯಲಾಗಿದೆ. ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡ್ತಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.