ಬೆಂಗಳೂರು: ಮುಂದಿನ ದಿನಗಳಲ್ಲಿ ಕೇವಲ ದೀಪಾವಳಿ ಮಾತ್ರವಲ್ಲ ಪ್ರತಿ ತಿಂಗಳೂ ಕೂಡ ಸಿಹಿ ಸುದ್ದಿಯನ್ನು ಕರ್ನಾಟಕದ ಜನತೆಗೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.


COMMERCIAL BREAK
SCROLL TO CONTINUE READING

ರೈತರ ಸಾಲ ಮನ್ನಾ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ" ಇವರೆಗೂ ರೈತರ ಸಾಲ ಮನ್ನಾ ಮಾಹಿತಿ ಕಲೆ ಹಾಕಲಾಗುತ್ತಿದೆ ಏಕೆಂದರೆ ಪೂರ್ಣ ಮಾಹಿತಿ ಇಲ್ಲದೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸಾಲ ಮನ್ನಾ ವಿಚಾರದಿಂದ ಹಿಂದೆ ಸರಿಯುವ ಮಾತೆ ಇಲ್ಲ ಈಗಾಗಲೇ ಇದಕ್ಕೆ ಎಂದೇ ಬಜೆಟ್ ನಲ್ಲಿ ಹಣವನ್ನು ಮಿಸಲಿಡಲಾಗಿದೆ ಎಂದು ಅವರು ತಿಳಿಸಿದರು.


ಸಧ್ಯ ನಡೆಯುತ್ತಿರುವ ಉಪಚುನಾವಣೆ ಮುಗಿದ ನಂತರ ರೈತರಿಗೆ ಸಾಲದ ಋಣಮುಕ್ತ ಪತ್ರವನ್ನು ವಿತರಿಸಲಾಗುವುದು.ಆ ಮೂಲಕ ಕೇವಲ ದೀಪಾವಳಿ ಮಾತ್ರವಲ್ಲ ಪ್ರತಿ ತಿಂಗಳೂ ಕೂಡ ರೈತರಿಗೆ ಸಿಹಿ ಸುದ್ದಿಯನ್ನು ತಾವು ಕೊಡುತ್ತೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.


ಇದೇ ವೇಳೆ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಪಕ್ಷವನ್ನು ತೊರೆದು ಕಾಂಗ್ರೆಸ್-ಜೆಡಿಎಸ್ ನ ಆಭ್ಯರ್ಥಿಯನ್ನು ಬೆಂಬಲಿಸಿರುವ ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ವಾಪಸ್ಸಾಗಿದ್ದು ಬಹುಶಃ ದೈವ ಪ್ರೇರಣೆ ಇರಬಹುದು. ಇದಕ್ಕೆ ಹಣಕೊಟ್ಟು ಖರೀದಿಸುವ ಅಗತ್ಯ ನನಗಿಲ್ಲ ಎಂದು ಅವರು ಉತ್ತರಿಸಿದರು.