ನವದೆಹಲಿ: ಅಖಂಡ ಕರ್ನಾಟಕವನ್ನು ಒಡೆಯುವ ಕೆಲಸ ಮಾಡುವವರನ್ನು ರಾಜ್ಯದ ಜನತೆ ಖಂಡಿತ ಕ್ಷಮಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನನ್ನ ಜೀವಿತಾವಧಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಸಾಧ್ಯವಿಲ್ಲ -ದೇವೇಗೌಡ


ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಹೋರಾಟ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಹೆಚ್.ಡಿ.ದೇವೇಗೌಡರು, ಕರ್ನಾಟಕ ಏಕೀಕರಕ್ಕೆ ಸಾಕಷ್ಟು ಮಂದಿ ಹೋರಾಡಿದ್ದಾರೆ. ಆದರೆ ಏಕೀಕರಣಕ್ಕಾಗಿ ಹೋರಾಡಿದವರು ಇಂದು ಕಣ್ಮರೆಯಾಗಿದ್ದಾರೆ. ಆದರೆ ಕೆಲವು ರಾಜಕಾರಣಿಗಳು ಅಸಂಬದ್ಧ ವ್ಯಾಖ್ಯಾನ ಮಾಡಿ ರಾಜ್ಯ ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ನಡೆಯನ್ನು, ಇದಕ್ಕೆ ಬೆಂಬಲಿಸುವ ರಾಜಕಾರಣಿಗಳನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು. 


ಉತ್ತರ ಕರ್ನಾಟಕದ ಅಭಿವೃದ್ಧಿ ನನ್ನ ಜವಾಬ್ದಾರಿ: ಸಿಎಂ ಕುಮಾರಸ್ವಾಮಿ


ನನ್ನ ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ತಾರತಮ್ಯ ನೀತಿ ಅನುಸರಿಸಲು ದೇವೇಗೌಡರು ಕುಮ್ಮಕ್ಕು ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ದೇವೇಗೌಡರು, ನನ್ನ ಬಗ್ಗೆ ಮಾತನಾಡುವವರಿಗೆ ಮೊದಲು ಜವಾಬ್ದಾರಿ ಇರಬೇಕು. ಅಂದು ರಾಜ್ಯದ ನೀರಾವರಿ ಮಂತ್ರಿಯಾಗಿ ಕೃಷ್ಣಾ ನೀರಾವರಿ ಯೋಜನೆಗೆ ಹೋರಾಟ ಮಾಡಿದ್ದೇನೆ. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕರಿಲಾಗಿದೆ. ಇವತ್ತೇನಾದರೂ ಆ ಭಾಗದ 40 ಲಕ್ಷ ಎಕರೆ ಭೂಮಿ ನೀರಾವರಿಗೆ ಸೇರಿದ್ದಾರೆ ಅದು ಅಂದು ನಾವು ಮಾಡಿದ ಹೋರಾಟದಿಂದ. ನಾನು ಮಾಡಿದ ಕೆಲಸವನ್ನು ಆತ್ಮಸ್ಥೈರ್ಯದಿಂದ ಹೇಳುತ್ತೇನೆ. ನನ್ನ ಕೆಲಸ, ಹೋರಾಟಗಳ ಬಗ್ಗೆ ವಿರೋಧಿಗಳು ತಿಳಿದುಕೊಳ್ಳಲಿ ಎಂದು ದೇವೇಗೌಡರು ಟಾಂಗ್ ನೀಡಿದರು.


ರಾಜ್ಯ ಒಡೆಯುವುದು ದೇವೇಗೌಡರ ಪ್ಲಾನ್: ಯಡಿಯೂರಪ್ಪ ಆರೋಪ


ಆರೋಪ ಮಾಡೋದೆ ಬಿಜೆಪಿಯ ಉದ್ದೇಶ
ಮುಂದುವರೆದು ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾಗಿ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಎಂಬುದಿಲ್ಲ. ವಿಧಾನಸಭೆ "ಅಪ್ಪ ಮಕ್ಕಳನ್ನು ಮುಗಿಸುವುದೇ ನಮ್ಮ ಕೆಲಸ" ಎಂದು ಹೇಳುತ್ತಾರೆ. ನಮ್ಮ ಕೆಲಸ, ಹೋರಾಟಗಳನ್ನು ತಿಳಿಯದೆ ಆರೋಪ ಮಾಡುವುದೇ ಬಿಜೆಪಿ ಉದ್ದೇಶ. ಹಾಗಾಗಿ ಯಡಿಯೂರಪ್ಪ ಅವರು ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ದೇವೇಗೌಡರು ವಾಗ್ದಾಳಿ ನಡೆಸಿದರು. 


ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವ ನಾನೇ ವಹಿಸುತ್ತೇನೆ: ಶ್ರೀರಾಮುಲು


ಉತ್ತರ ಕರ್ನಾಟಕದಲ್ಲಿ 3 ದಿನಗಳ ಪ್ರವಾ
ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನಾನು ಮತ್ತು ನನ್ನ ಮಗ ಇರುವವರೆಗೂ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ಅಲ್ಲಿನ ಜನರ ಜೊತೆ ಚರ್ಚಿಸಲು ಮೂರು ದಿನಗಳ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಹೆಚ್.ಡಿ.ದೇವೇಗೌಡರು ಹೇಳಿದರು.


ಪ್ರತ್ಯೇಕ ಉತ್ತರ ಕರ್ನಾಟಕ ಬಂದ್​ಗೆ ಸಿಗದ ಸ್ಪಂದನೆ


ಈಗಾಗಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಆಗಸ್ಟ್ 2ರಂದು 13 ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡಿತ್ತು. ಆದರೆ ಬಂದ್'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.