ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಮತ್ತು ಉದ್ಯಾನವನಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರಿಕರನ್ನು “ಕೆರೆ ಮಿತ್ರ” ಹಾಗೂ “ಹಸಿರು ಮಿತ್ರ” ರಾಗಿ ಪಾಲಿಕೆಯ ವೆಬ್‌ ಸೈಟ್‌’ನಲ್ಲಿ ನೊಂದಾಯಿಸಿಕೊಳ್ಳುವ ಅವಧಿಯನ್ನು 12-02-2024ರವರೆಗೆ ವಿಸ್ತರಿಸಲಾಗಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನ ನಿವಾಸಿಗಳು ಅವರು ವಾಸವಿರುವ ವಾರ್ಡ್ ಅಥವಾ ಸಮೀಪದಲ್ಲಿರುವ ಕೆರೆ ಅಥವಾ ಉದ್ಯಾನವನಕ್ಕೆ ಆಸಕ್ತಿ ಇದ್ದಲ್ಲಿ ಕೆರೆ ನಿರ್ವಹಣೆ ಬಗ್ಗೆ ಪ್ರತಿನಿತ್ಯ ಪರಿಶೀಲಿಸಿ, ಅಂತರ್ಜಾಲದಲ್ಲಿ ವಿವರಗಳನ್ನು ದಾಖಲಿಸುವ ಮೂಲಕ ಸಾರ್ವಜನಿಕರ ಅವಶ್ಯಕತೆ ಹಾಗೂ ಕೆರೆ/ಉದ್ಯಾನವನಗಳ ಆಗು-ಹೋಗುಗಳನ್ನು ಇನ್ನು ಉತ್ತಮವಾಗಿ ನಿಗಾವಹಿಸಲು ಅನುವು ಮಾಡಿಕೊಳ್ಳುವ ಉದ್ದೇಶವಾಗಿದೆ.


ಇದನ್ನೂ ಓದಿ: ಬಿಳಿ ಸೀರೆಯುಟ್ಟು ಮಲ್ಲಿಗೆ ಹೂವಿನ ನಶೆ ಏರಿಸುವ ಈ ನಟಿ ಯಾರು ಗುರುತಿಸಿ!!


https://www.bbmp.gov.in ವೆಬ್‌ ಸೈಟ್‌’ಗೆ ಭೇಟಿ ನೀಡಿ ಕೆರೆ ಮಿತ್ರ ಹಾಗೂ ಹಸಿರು ಮಿತ್ರ ಆಗಿ ನೊಂದಾಯಿಸಿಕೊಳ್ಳಬಹುದಾಗಿದ್ದು, ದಿನಾಂಕ 31-01-2024ರ ಬದಲಾಗಿ ದಿನಾಂಕ 12-02-2024ರ ಸಂಜೆ 5ರ ಒಳಗಡೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.


ಸದರಿ ಸದಾವಕಾಶವನ್ನು ನಾಗರಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು ಸದುಪಯೋಗಪಡಿಸಿಕೊಳ್ಳಲು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.


ಕೆರೆ ಮಿತ್ರ ಹಾಗೂ ಹಸಿರು ಮಿತ್ರರಾಗಲು ನೇರವಾಗಿ ಕೆಳಗಿನ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು:


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಮತ್ತು ಉದ್ಯಾನವನಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಆಸಕ್ತಿವುಳ್ಳ ಬೆಂಗಳೂರಿನ ನಾಗರಿಕರು “ಕೆರೆ ಮಿತ್ರ”ರಾಗಿ https://keremithra.bbmpgov.in/registration ಹಾಗೂ “ಹಸಿರು ಮಿತ್ರ”ರಾಗಿ https://hasirumithra.bbmpgov.in/registration ಲಿಂಕ್ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ.


ಹೆಚ್ಚಿನ ಸಂಪರ್ಕಕ್ಕಾಗಿ:


ವಿಜಯ್ ಕುಮಾರ್ ಹರಿದಾಸ್, ಮುಖ್ಯ ಅಭಿಯಂತರರು, ಕೆರೆಗಳ ವಿಭಾಗ, ಬಿಬಿಎಂಪಿ.


ಮೊ.ಸಂ: 94806 83059


ಇದನ್ನೂ ಓದಿ: ಪ್ರತಿದಿನ ಬಾರ್ಲಿ ನೀರು ಕುಡಿದರೆ ಏನಾಗುತ್ತೆ? ಸಿಗುವ ಆರೋಗ್ಯ ಪ್ರಯೋಜನಗಳೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.