ಮನೆಯಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದಿದ್ದಾಗ ವ್ಯಕ್ತಿಯೊಬ್ಬ ಕಂಡುಕೊಂಡ ಪರಿಹಾರವೇನು ಗೊತ್ತಾ?
ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯವಾಗಿರುವ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆಗಾಗ ತಮ್ಮ ವಿಭಿನ್ನ ಬಗೆಯ ಪೋಸ್ಟ್ ಗಳಿಂದ ಗಮನ ಸೆಳೆಯುತ್ತಾರೆ.
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯವಾಗಿರುವ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆಗಾಗ ತಮ್ಮ ವಿಭಿನ್ನ ಬಗೆಯ ಪೋಸ್ಟ್ ಗಳಿಂದ ಗಮನ ಸೆಳೆಯುತ್ತಾರೆ.
ಇವರ ಪೋಸ್ಟ್ ನಲ್ಲಿ ಕೇವಲ ರಾಜಕೀಯ ವಿಷಯಗಳಷ್ಟೇ ಅಲ್ಲದೆ ಹಲವು ವಿಚಾರಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರುವ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದರಲ್ಲಿ ಅವರು ಮನೆಯೊಂದರಲ್ಲಿ ಕಾರು ನಿಲ್ಲಿಸಲು ಜಾಗವಿಲ್ಲದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕಂಡುಕೊಂಡಿರುವ ಪರಿಹಾರದ ಕುರಿತಾದ ಪೋಟೋಗಳನ್ನು ಹಂಚಿಕೊಂಡು ಈ ರೀತಿಯಾಗಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ 'ಕಲಿಯುತ್ತಾ ನಲಿಯೋಣ'
ಇಂದು ಬೆಳಿಗ್ಗೆ ಕ್ಷೇತ್ರದಲ್ಲಿ ಜನ ಸಂಪರ್ಕ ಮಾಡುತ್ತಿದ್ದಾಗ ಕಂಡ ದೃಶ್ಯವಿದು. ಮನೆಯಲ್ಲಿ ಕಾರು ನಿಲ್ಲಿಸಲು ಸಾಕಷ್ಟು ಜಾಗವಿಲ್ಲದ...
Posted by Suresh Kumar S on Sunday, 10 January 2021
'ಇಂದು ಬೆಳಿಗ್ಗೆ ಕ್ಷೇತ್ರದಲ್ಲಿ ಜನ ಸಂಪರ್ಕ ಮಾಡುತ್ತಿದ್ದಾಗ ಕಂಡ ದೃಶ್ಯವಿದು. ಮನೆಯಲ್ಲಿ ಕಾರು ನಿಲ್ಲಿಸಲು ಸಾಕಷ್ಟು ಜಾಗವಿಲ್ಲದ ವ್ಯಕ್ತಿಯೊಬ್ಬರು ಕಂಡುಕೊಂಡ ವಿನೂತನ ಪರಿಹಾರ.ಪ್ರತಿದಿನ ಈ ಇಕ್ಕಟ್ಟು ಜಾಗದಲ್ಲಿ ನಿಲ್ಲಿಸುತ್ತಾರೆ.ಕಾರಿನ ಒಳಗೆ ಹೋಗುವುದಕ್ಕೆ ಮತ್ತು ಹೊರ ಬರುವುದಕ್ಕೆ ಹಿಂದಿನ ಡಿಕ್ಕಿ ಬಾಗಿಲೇ ದಾರಿ! " ಎಂದು ಫೋಟೋ ಕಾರಿನ ಫೋಟೋಗಳನ್ನು ಸಚಿವ ಸುರೇಶ ಕುಮಾರ್ (S Suresh Kumar) ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: S.Suresh Kumar: '10 ಸಾವಿರ ಶಿಕ್ಷಕರ' ನೇಮಕಕ್ಕೆ ಶಿಕ್ಷಣ ಇಲಾಖೆ ಪ್ರಸ್ತಾವ..!
ಇದಕ್ಕೆ ರಕ್ಷಿತ್ ಭಾರತೀಯ ಎನ್ನುವವರು 'ಸ್ಕೂಟರ್ ಓಡಿಸ್ತಾ ಇದ್ದ ವ್ಯಕ್ತಿ ಹೆಂಡತಿಯ ಒತ್ತಾಯಕ್ಕೋ ಅಥವಾ ಮಕ್ಕಳ ಒತ್ತಾಯೋಕ್ಕೋ ಕಾರ್ ಖರೀದಿಸಿರಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ಉಪಾಯವಂತು ಕೆಲವರಿಗೆ ಅಚ್ಚರಿ ತರಿಸಿದರೆ ಕೆಲವರನ್ನು ನಗೆಗಡಲಲ್ಲಿ ಇರಿಸಿದೆ.