ಬೆಂಗಳೂರು: ಮೈಸೂರಿನ ಖ್ಯಾತ ಛಾಯಾಗ್ರಾಹಕ ನೇತ್ರರಾಜು (62 ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಮೂರು ದಶಕಗಳ ಪತ್ರಿಕಾ ಛಾಯಾಗ್ರಹಣದಲ್ಲಿ ವಿಶಿಷ್ಟ ಹೆಗ್ಗುರತನ್ನು ಹೊಂದಿದ್ದ ನೆತ್ರರಾಜು ಅವರು ಕೇವಲ ಪತ್ರಿಕಾ ಛಾಯಾಗ್ರಾಹಣವಲ್ಲದೆ ಪರಿಸರ ಚಿತ್ರಗಳನ್ನು ಅಷ್ಟೇ ಸೊಗಸಾಗಿ ಸೆರೆಹಿಡಿಯುತ್ತಿದ್ದರು. ಜನ ಜೀವನ,ರಾಜಕೀಯ, ಸಾಹಿತ್ಯ, ಸಾಂಸ್ಕೃತಿ ಹಲವು ಬಗೆಯ ಆಯಾಮಗಳ ಮೂಲಕ ಛಾಯಾಗ್ರಹಣದಿಂದಾಗಿ ನಾಡಿನ ಗಮನ ಸೆಳೆದಿದ್ದರು.ಟೈಮ್ಸ್ ಆಫ್ ಇಂಡಿಯಾ,ಆಂದೋಲನದಂತಹ ಪತ್ರಿಕೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು.


ಇದನ್ನೂ ಓದಿ : Madhya Pradesh Govt : 'ಕೊರೋನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ 1 ಲಕ್ಷ ರೂ. ಪರಿಹಾರ'


ಅವರ ಈ ಕಾರ್ಯವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದವು. ಅಷ್ಟೇ ಅಲ್ಲದೆ 2014 ರಲ್ಲಿ ಅವರಿಗೆ ಕರ್ನಾಟಕದ ಮಾಧ್ಯಮ ಅಕಾಡೆಮಿ ಪ್ರಶಸ್ತಿಯೂ ಕೂಡ ಲಭಿಸಿತ್ತು.ಈಗ ಅವರ ನಿಧನಕ್ಕೆ ಸಿಎಂ ಯಡಿಯೂರಪ್ಪ, ಹಾಗೂ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.