ಬೆಂಗಳೂರು: ಡಿವೈಎಸ್ಪಿ ಗಣಪತಿ ಸಾವಿಗೆ ಸಂಬಂಧಿಸಿದಂತೆ  ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ನಡೆಸಲು ತೀರ್ಮಾನಿಸಿದ್ದ ಪ್ರತಿಭಟನೆಯನ್ನು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಪಿಯೂಷ್ ಗೋಯಲ್ ಏಕಾಏಕಿ ಬೇಡ ಎಂದು ತೀರ್ಮಾನ ಕೈಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಗುರುವಾರ ನಡೆದ ಬಿಜೆಪಿ ಕೋರ ಕಮಿಟಿ ಸಭೆಯಲ್ಲಿ ಗೋಯಲ್ ಬಿಜೆಪಿ ಮುಖಂಡರಿಗೆ ಈ ರೀತಿ ಸೂಚನೆ ನೀಡಿದ್ದಾರೆ. ಸದ್ಯ ಜಿಲ್ಲಾ ಕೇಂದ್ರಗಳಲ್ಲಿ ಸುದ್ದಿಗೋಷ್ಟಿ ನಡೆಸುವ ಮೂಲಕ ಪ್ರತಿಭಟನೆಯ ವಾತಾವರಣ ನಿರ್ಮಾಣ ಮಾಡೋಣ ಎಂದು ಸೂಚಿಸಿದ್ದಾರೆ.


ಶುಕ್ರವಾರ ಒಂದು ದಿನ ಪ್ರತಿಭಟನೆ ಮಾಡಿ ಕೈಬಿಟ್ಟರೆ ಅದು ಪರಿಣಾಮಕಾರಿ ಆಗುವುದಿಲ್ಲ. ರಾಜೀನಾಮೆ ನೀಡುವರೆಗೂ ನಿರಂತರವಾಗಿ ಪ್ರತಿಭಟನೆ ಕೈಗೊಳ್ಳೊಣ. ಶುಕ್ರವಾರ ಈ ಕುರಿತು ಸುದೀರ್ಘ ಚರ್ಚೆ ಮಾಡಿ ಹೋರಾಟದ ರೂಪುರೇಷೆ ತಯಾರಿಸೋಣ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.


ಸಚಿವ ಜಾರ್ಜ್ ರಾಜೀನಾಮೆಗೆ ಇಂದು ಪ್ರತಿಭಟನೆಗೆ ನಿರ್ಧರಿಸಿದ್ದ ಬಿಜೆಪಿ... ಪಿಯೂಷ್ ಗೋಯಲ್ ತೀರ್ಮಾನದಿಂದಾಗಿ ಇಂದಿನ ಪ್ರತಿಭಟನೆಯಿಂದ ಹಿಂದೆ ಸರಿದಿದೆ.