ಪಿ.ಎಂ.ಕಿಸಾನ್ ಯೋಜನೆ: ಇ.ಕೆ.ವೈ.ಸಿ. ಮಾಡಲು ಜೂನ್ 30 ಕೊನೆ ದಿನ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 01-04-2023ರಿಂದ ಬಾಕಿ ಇರುವ 14ನೇ ಕಂತಿನ ಸಹಾಯಧನ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದೂವರೆಗೆ ಇ-ಕೆ.ವೈ.ಸಿ. ಮಾಡಿಸದ ರೈತರು ಯೋಜನೆಯ ಆರ್ಥಿಕ ಸೌಲಭ್ಯ ಪಡೆಯಲು ಕೂಡಲೆ ಇ.ಕೆ.ವೈ.ಸಿ. ಮಾಡಿಸಲು ಕೋರಿದೆ. ಇ.ಕೆ.ವೈ.ಸಿ. ಮಾಡಿಸಲು ಇದೇ ಜೂನ್ 30 ಕೊನೆ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 01-04-2023ರಿಂದ ಬಾಕಿ ಇರುವ 14ನೇ ಕಂತಿನ ಸಹಾಯಧನ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಇದೂವರೆಗೆ ಇ-ಕೆ.ವೈ.ಸಿ. ಮಾಡಿಸದ ರೈತರು ಯೋಜನೆಯ ಆರ್ಥಿಕ ಸೌಲಭ್ಯ ಪಡೆಯಲು ಕೂಡಲೆ ಇ.ಕೆ.ವೈ.ಸಿ. ಮಾಡಿಸಲು ಕೋರಿದೆ. ಇ.ಕೆ.ವೈ.ಸಿ. ಮಾಡಿಸಲು ಇದೇ ಜೂನ್ 30 ಕೊನೆ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕತೆಗೆ ನಕಾರ ಹೇಳುವುದು ಕ್ರೌರ್ಯ, ಆದರೆ ಅಪರಾಧವಲ್ಲ, ಕರ್ನಾಟಕ ಹೈಕೋರ್ಟ್ ಆದೇಶ
ಒಂದು ವೇಳೆ ಇ.ಕೆ.ವೈ.ಸಿ. ಮಾಡಿಸದಿದ್ದಲ್ಲಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ ಸಿಗುವ 6,000 ರೂ. ಸಹಾಯಧನ ಸಿಗುವುದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 75,562 ರೈತರು ಪಿ.ಎಮ್. ಕಿಸಾನ್ ಯೋಜನೆಯಡಿ ಇ-ಕೆ.ವೈ.ಸಿ ಮಾಡಿಸಲು ಬಾಕಿ ಉಳಿದಿದ್ದು, ಕೂಡಲೆ ಇ.ಕೆ.ವೈ.ಸಿ. ಮಾಡಿಸುವಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಧಮ್ಮಿದ್ದರೆ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ: ಬಸವರಾಜ ಬೊಮ್ಮಾಯಿ
ರೈತ ಫಲಾನುಭವಿಗಳು ತಮ್ಮ ಆಧಾರ ಸಂಖ್ಯೆ ಹಾಗೂ ಆಧಾರ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊAದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಓನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಓ.ಟಿ.ಪಿ ಮೂಲಕ ಇ-ಕೆ.ವೈ.ಸಿ. ಮಾಡಿಸಬಹುದು.
ಇದಲ್ಲದೆ ಹತ್ತಿರದ ಅಂಚೆ ಕಛೇರಿಗೆ ಭೇಟಿ ಮಾಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಅಥವಾ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿ.ಎಂ.-ಕಿಸಾನ್ ಮೋಬೈಲ್ ತಂತ್ರಾAಶವನ್ನು ಮೋಬೈಲ್‌ನ ಪ್ಲೇಸ್ಟೋರ್‌ನಿಂದ ಡೌನಲೋಡ್ ಮಾಡಿಕೊಂಡು ಸ್ವತ ಫಲಾನುಭವಿಗಳ ತಮ್ಮ ಮುಖ ಚಹರೆ ತೋರಿಸುವ ಮೂಲಕ ಇ-ಕೆ.ವೈ.ಸಿ. ಮಾಡಿಕೊಳ್ಳಬಹುದು. ಇನ್ನು ಅಕ್ಕಪಕ್ಕದ ರೈತರಿಗೆ ಇ.ಕೆ.ವೈ.ಸಿ. ಮಾಡಿಸಿಕೊಳ್ಳಲು ರೈತ ಬಾಂಧವರು ತಿಳಿಸಬೇಕು ಎಂದು ಅವರು ಕೋರಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.