PM Modi Oath Ceremony: ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇಂದು ಸತತ 3ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾನುವಾರ ಸಂಜೆ 7.30ಕ್ಕೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೋದಿಯವರ ಜೊತೆಯಲ್ಲಿ ಸಂಪುಟ ಸಚಿವರಾಗಿ ಕೆಲವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.  


COMMERCIAL BREAK
SCROLL TO CONTINUE READING

ರಾಜ್ಯದ ಐವರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ.‌ ಪ್ರಹ್ಲಾದ್ ಜೋಶಿ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಗೋವಿಂದ್ ಕಾರಜೋಳ ಅವರು ಮೋದಿ ಸಂಪುಟ ಸೇರುವ ನಿರೀಕ್ಷೆ ಇದೆ. ಕಳೆದ ಬಾರಿ ಪ್ರಹ್ಲಾದ್ ಜೋಶಿ ಸಚಿವರಾಗಿದ್ದರು. ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ಸಹ ಕೇಂದ್ರ ಸಚಿವರಾಗಿದ್ದರು. ಈ ಬಾರಿ ಇಬ್ಬರಿಗೂ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇವರೊಂದಿಗೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಿಂದ ಜಯಗಳಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ್ ಕಾರಜೋಳರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. 


ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂಬೈ ಮೂಲದ ಶಿಕ್ಷಣ ಸಂಸ್ಥೆಯಿಂದ ದೋಖಾ!


ಸಂಜೆ ವೇಳೆಗೆ ಪ್ರಮಾಣವಚನ ಸ್ವೀಕಾರ ನಡೆಯಲಿದ್ದು, ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ಹಿಂದಿನ ೨ ಅವಧಿಯಲ್ಲಿ ಸಂಪೂರ್ಣ ಬಹುಮತ ಹೊಂದಿದ್ದ ಬಿಜೆಪಿ ಸಂಪುಟ ಖಾತೆ ಹಂಚಿಕೆ ವೇಳೆ ಸಾರ್ವಭೌಮತ್ವ ಹೊಂದಿತ್ತು. ಹೀಗಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನಗಳನ್ನು ತನ್ನ ಸಂಸದರಿಗೆ ನೀಡಿ, ರಾಜ್ಯ ಖಾತೆಗಳನ್ನು ಮಿತ್ರ ಪಕ್ಷಗಳಿಗೆ ನೀಡಿತ್ತು. ಈ ಬಾರಿ ಮಿತ್ರಪಕ್ಷಗಳ ಬೆಂಬಲವಿಲ್ಲದೆ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಈ ಹಿನ್ನೆಲೆ ಮಿತ್ರಪಕ್ಷದ ಸಂಸದರಿಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಗಳನ್ನು ನೀಡುವ ಸಾಧ್ಯತೆಗಳಿವೆ. ಮಿತ್ರಪಕ್ಷಗಳು ತಮ್ಮ ಸದಸ್ಯರ ಬಲಾಬಲದ ಪ್ರಕಾರ ಕೆಲವು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.


ಲೋಕಸಭೆಯಲ್ಲಿ NDA ಬಲಾಬಲ


ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ 32 ಸ್ಥಾನಗಳ ಕೊರತೆ ಅನುಭವಿಸಿದೆ. ಈ ಹಿನ್ನೆಲೆ ಮಿತ್ರಪಕ್ಷಗಳ ಬೆಂಬಲ ಪಡೆದಕೊಂಡಿದೆ. NDA ಮೈತ್ರಿಕೂಟಕ್ಕೆ ಬೆಂಬಲ ನೀಡಿರುವ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) 12, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ 16, ಏಕನಾಥ್ ಶಿಂಧೆ ಬಣದ ಶಿವಸೇನೆ 7, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ 5ರಲ್ಲಿ ಗೆಲುವು ಸಾಧಿಸಿದೆ. ಇದರ ಜೊತೆಗೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರರು NDAಗೆ ಬೆಂಬಲ ನೀಡಿದ್ದು, 300ರ ಗಡಿ ದಾಟಿದೆ.


ಇದನ್ನೂ ಓದಿ: ಕರ್ನಾಟಕದ ಕಾಂಗ್ರೆಸ್‌ ನಾಯಕರ ವಿರುದ್ಧ ಗರಂ ಆದ ರಾಹುಲ್‌ ಗಾಂಧಿ!


ಮಾಣಚನ ಸ್ವೀಕರಿಸುವ ಸಂಭಾವ್ಯರ ಪಟ್ಟಿ 


ಮೊದಲ ಹಂತದಲ್ಲಿ ಪ್ರಮಾಣಚನ ಸ್ವೀಕರಿಸುವ ಸಂಭಾವ್ಯರ ಪಟ್ಟಿಯಲ್ಲಿ ಜೆಡಿಎಸ್‌ನಿಂದ ಎಚ್‌.ಡಿ.ಕುಮಾರಸ್ವಾಮಿ, ಅಪ್ನಾದಳದಿಂದ ಅನುಪ್ರಿಯಾ ಪಟೇಲ್, ಜೆಡಿ(ಯು)ನಿಂದ ರಾಮನಾಥ್ ಠಾಕೂರ್, ಲಲನ್ ಸಿಂಗ್, NCPಯಿಂದ ಪ್ರಫುಲ್ ಪಟೇಲ್, ಸುನೀಲ್ ದತ್ತಾತ್ರೇಯ ತತ್ಕರೆ, ಟಿಡಿಪಿಯಿಂದ ರಾಮ್‌ಮೋಹನ್ ನಾಯ್ಡು, ಪೆಮ್ಮಸಾನಿ ಚಂದ್ರಶೇಖರ್, ವೆಮಿರ್‌ರೆಡ್ಡಿ ಪ್ರಭಾಕರ್ ರೆಡ್ಡಿ, ಆರ್‌ಎಲ್‌ಡಿಯಿಂದ ಜಯಂತ್ ರೆಡ್ಡಿ ಮತ್ತು ಲೋಕ ಜನಶಕ್ತಿ ಪಕ್ಷದಿಂದ ಚಿರಾಗ್ ಪಾಸ್ವಾನ್ ಇದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.