ಬೆಂಗಳೂರು : ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಪಾಲಿಕೆ ಮತ್ತೆ ಮೋದಿ ಓಡಾಡೋ ಜಾಗದಲ್ಲಿ ಡಾಂಬರೀಕರಣ, ಸುಣ್ಣ ಬಣ್ಣ ಬಳಿಯೋಕೆ ನಿಂತಿದೆ. ಆದರೆ ಕಳೆದ ಬಾರಿ ಮೋದಿಗಾಗಿ ಹಾಕಿದ ಡಾಂಬಾರು ಒಂದೇ ದಿನದಲ್ಲಿ ಕಿತ್ತು ಬಂದು ಕೋಲಾಹಲ ಸೃಷ್ಟಿಯಾಗಿತ್ತು. ಈ ಬಾರಿ ಹಾಗೆ ಆಗದಂತೆ ಎಚ್ಚರಿಕೆ ವಹಿಸಲು ಬಿಬಿಎಂಪಿ ಮುಂದಾಗಿದೆ.


COMMERCIAL BREAK
SCROLL TO CONTINUE READING

ನವೆಂಬರ್ 11ಕ್ಕೆ ವಿವಿಧ ಕಾರ್ಯಕ್ರಮಗಳ ಹಿನ್ನೆಲೆ ಪ್ರಧಾನಿ ಮೋದಿ ನಗರಕ್ಕೆ ಆಗಮಿಸುತ್ತಿದ್ದಾರೆ. ಮೋದಿ ಓಡಾಡೋ ರಸ್ತೆಗೆ ಡಾಂಬಾರು ಹಾಕಿ ನಗರದ ರಸ್ತೆಗಳನ್ನು ಪಳ ಪಳ ಹೊಳೆಸೋಕೆ ಮುಂದಾಗಿದೆ. ಆದರೆ ಕಳೆದ ಬಾರಿ ನಗರಕ್ಕೆ ಮೋದಿ ಬಂದಾಗ ಹೀಗೆಯೇ ಬಿಬಿಎಂಪಿ ಡಾಂಬರೀಕರಣ ಮಾಡಿತ್ತು. ಆದರೆ ಮೋದಿ ಬಂದು ಹೋದ ಮರುದಿನವೇ ಡಾಂಬಾರು ಕಿತ್ತು ಬಂದು ಬಿಬಿಎಂಪಿ ಭಾರಿ ಮುಖಭಂಗ ಎದುರಿಸಿತ್ತು. ಈ ಬಾರಿ ಹಾಗೆ ಆಗದೆ ಹಾಗೆ ನೋಡಿಕೊಳ್ಳಲು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಇಂಜಿನಿಯರ್ ಗಳಿಗೆ ತಾಕೀತು ಮಾಡಿದ್ದಾರೆ‌.ಕಳೆದ ಬಾರಿಯಂತೆ ಏನಾದ್ರು ಯಡವಟ್ಟಾದರೆ ಆಯಾ ಭಾಗದ ಇಂಜಿನಿಯರ್ ಗಳ ತಲೆದಂಡ ಆಗೋದು ಗ್ಯಾರಂಟಿ ಎನ್ನಲಾಗಿದೆ.


ಇದನ್ನೂ ಓದಿ : “ಬಿಜೆಪಿಯವರಿಗೆ ನಂಬಿಕೆ ಇರುವುದು ಮನುಸ್ಮೃತಿ ಮೇಲೆ”


 ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಇಂಜಿನಿಯರ್ ಗಳಿಗೆ ಚೀಫ್ ಕಮಿಷನರ್ ವಾರ್ನಿಂಗ್ ಕೊಡಲಾಗಿದ್ದು, ಕಳೆದ ಬಾರಿ ಪ್ರಧಾನ ಮಂತ್ರಿ ನಗರಕ್ಕೆ ಬಂದಾಗ ತರಾತುರಿಯಲ್ಲಿ ಕಳಪೆ ಕಾಮಾಗಾರಿ ನಡೆಸಿ ಮುಖಭಂಗ ಎದುರಿಸಿತ್ತು.‌ ಒಮ್ಮೆ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ನಿಂದನೆಗೆ ಗುರಿಯಾಗಿದ್ದೆವೆ ಮತ್ತೊಂದು ಆಗದಂತೆ ಜಾಗೃತಿ ವಹಿಸಲು ಸೂಚಿಸಲಾಗಿದೆ. ಈ ಬಾರಿ ಮುಲಾಜಿಲ್ಲದೆ ಮನೆಗೆ ಕಳುಹಿಸುವ ವಾರ್ನಿಂಗ್ ಕೊಟ್ಟಿರುವ ತುಷಾರ್ ಗಿರಿನಾಥ್, ಮೈಮರೆಯಬೇಡಿ ಎಂದಿದ್ದಾರೆ.


ಇದನ್ನೂ ಓದಿ : ಪ್ರತಿ ತಿಂಗಳು ಮೋದಿ ಬರಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ ಚಳವಳಿ, ಪೊಲೀಸರಿಂದ ಬಂಧನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.