ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿದ್ದಂತೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಭಾನುವಾರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸುವುದಕ್ಕೆ ಆಗದ ಬೇಸರದಿಂದ ಆರೆಸ್ಸೆಸ್ ನ ವ್ಯಕ್ತಿಯೊಬ್ಬರು, ಪ್ರಧಾನಿ ಮೋದಿ ಅವರು ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ. ನೀವು ಬರೀ ಕೈನಿಂದ ಅದನ್ನು ಸರಿಸುವುದಕ್ಕೆ ಆಗಲ್ಲ ಮತ್ತು ಚಪ್ಪಲಿಯಿಂದ ಹೊಡೆಯಲು ಕೂಡ ಸಾಧ್ಯವಿಲ್ಲ ಎಂದು ಹೇಳಿದ್ದರು". ಇದು ಪ್ರಧಾನಿ ಮೋದಿ ಅವರ ನಡೆಯನ್ನು ವಿರೋಧಿಸಲೂ ಆಗದೆ, ಬೆಂಬಲಿಸಲೂ ಆಗದ ಆರ್ಎಸ್ಎಸ್ ಪರಿಸ್ಥಿತಿ ಎಂದು ಶಶಿ ತರೂರ್ ಹೇಳಿದರು. 


ತಮ್ಮ 'The Paradoxical Prime Minister' ಪುಸ್ತಕದ ಕುರಿತು ಮಾತನಾಡಿದ ಅವರು, 'ಇಂದು ಮೋದಿ ಹಾಗೂ ಹಿಂದುತ್ವ ಸೇರಿ ಆಗಿರುವ ಮೋದಿತ್ವವು ಆರ್ ಎಸ್ ಎಸ್ ಗಿಂತ ಹೆಚ್ಚು ಎತ್ತರದಲ್ಲಿ ಬೆಳೆದಿದೆ. ಇದನ್ನು ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಆರ್ಎಸ್ಎಸ್ ಇದೆ ಎಂದು ಅವರು ಅಭಿಪ್ರಾಯಪಟ್ಟರು.