ಬೆಂಗಳೂರು : ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಟ್ವಿಟ್ ಮಾಡುವ ಮೂಲಕ ಮಂಗಳೂರಿನ ಜನತೆಗೆ ಧನ್ಯವಾದ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ನಿನ್ನೆ ಮಂಗಳೂರಿಗೆ ಪಿಎಂ ಮೋದಿಯವರು ಭೇಟಿ ನೀಡಿ ಬರೋಬ್ಬರಿ 3800 ಕೋಟಿ ರೂ. ಯೋಜನೆಗೆ‌ ಚಾಲನೆ ನೀಡಿದರು. 


ಇದನ್ನೂ ಓದಿ : ರಾಜ್ಯ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಕೊಟ್ಟ ಸೂಚನೆ ಏನು..?


ಮಂಗಳೂರಿನ ಬಂಗ್ರಕೂಳೂರಿನಲ್ಲಿ ಬಿಜೆಪಿ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಸಮಾವೇಶ ಸ್ಥಳದಲ್ಲಿ ಕೇಸರಿ ಶಾಲು ಬೀಸುತ್ತಾ ಮೋದಿ ಪರ ಘೋಷಣೆ ಕೂಗಿ, ಕೇಸರಿ ರುಮಾಲು ಧರಿಸಿ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ಡಾನ್ಸ್ ಮಾಡಿದರು. ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಜನಸ್ತೋಮ ಹರಿದುಬಂದಿತ್ತು.


ಮಂಗಳೂರಿಗೆ ಪಿಎಂ ಮೋದಿ ಬಂದು ವಾಪಾಸ್ ಹೋಗುವವರೆಗೆ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿತ್ತು. ಡಿಜಿಪಿ ಮತ್ತು ಎಡಿಜಿಪಿ, ಮಂಗಳೂರು ‌ಕಮಿಷನರ್ ನೇತೃತ್ವದಲ್ಲಿ ಭದ್ರತೆ ನೀಡಲಾಗಿತ್ತು. 100 ಉನ್ನತ ಪೊಲೀಸ್ ಅಧಿಕಾರಿಗಳು, ಸುಮಾರು 2,000 ಸಾವಿರ ಸಿವಿಲ್ ಪೊಲೀಸರು ಸೇರಿದಂತೆ, ಕೆಎಸ್​ಆರ್​ಪಿ, ಸಿಎಆರ್, ಎಎನ್​ಎಫ್, ಆರ್​ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್​ಡಿ ಹಾಗೂ ಗರುಡ ಪಡೆಯ ಸುಮಾರು ಮೂರು ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.


ಇದನ್ನೂ ಓದಿ : ʼಬಿಜೆಪಿಗೆ ಕಾರ್ಯಕರ್ತರೆಂದರೆ ಹರಕೆಯ ಕುರಿಗಳುʼ : ಕಮಲಪಾಳಯದ ವಿರುದ್ಧ ʼಕೈʼ ಕಿಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.