ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಯಾವಾಗ? ಎಂಬ ಪೋಸ್ಟ್ ಶೇರ್ ಮಾಡಿದ್ದ ಪೇದೆ ಅಮಾನತು
ಹುಬ್ಬಳ್ಳಿ: "ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಯಾವಾಗ? ಎಂಬ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದ ಪೊಲಿಸ್ ಪೇದೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸರ್ಕಾರ ರಚನೆಯಾಗಿ 18 ದಿನಗಳು ಕಳೆದರೂ ರೈತರ ಸಾಲಮನ್ನಾ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕುಮಾರಸ್ವಾಮಿಯವರೇ ರಾಜೀನಾಮೆ ಯಾವಾಗ? ಎಂದು ಪ್ರಶ್ನಿಸಿ ಶಿಕಾರಿ ಪುರ ಬಿಜೆಪಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿತ್ತು. ಇದನ್ನು ಹುಬ್ಬಳ್ಳಿಯ ಶಹರ ಪೋಲಿಸ್ ಠಾಣೆ ಪೇದೆ ಅರುಣ್ ಡೊಳ್ಳಿನ್ ಶೇರ್ ಮಾಡಿದ್ದರು.
ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು, ಮುಖ್ಯಮಂತ್ರಿಗಳಿಗೆ ಅವಮಾನವಾಗುವಂತಹ ಪೋಸ್ಟ್ ಅನ್ನು ಶೇರ್ ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎಂ.ಎನ್. ನಾಗರಾಜ್ ಆದೇಶ ಹೊರಡಿಸಿದ್ದಾರೆ.