ನಾಳೆ ಹೊಸ ವರ್ಷ ಸ್ವಾಗತಿಸಲು ʼಎಂ.ಜಿ. ರೋಡ್ʼಗೆ ಹೋಗ್ತೀರಾ..? ಪೊಲೀಸ್ ಭದ್ರತೆ, ಸುರಕ್ಷತೆ ಕ್ರಮ ತಿಳಿಯಿರಿ
ನಾಳೆಯ ನ್ಯುಇಯರ್ ಸೆಲೆಬ್ರೇಷನ್ ಗೆ ಅದ್ರಲ್ಲೂ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಗೆ ಏನೇಲ್ಲ ಮುಂಜಾಗೃತ ಕ್ರಮ ಬೇಕು ಅವೇಲ್ಲವನ್ನ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಬ್ರಿಗೇಡ್ ರೋಡ್ , ಚರ್ಚ್ ಸ್ಟ್ರೀಟ್ , ಎಂಜಿ.ರಸ್ತೆ ಯನ್ನ ಖಾಕಿ ಭದ್ರತೆ ಜೊತೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲು ಪೊಲೀಸರು ಸಿದ್ದತೆ ಮಾಡಿಕೊಳ್ಳತ್ತಿದ್ದಾರೆ.
ಬೆಂಗಳೂರು : ಹೊಸ ವರ್ಷಕ್ಕೆ ಸಂಭ್ರಮಾಚರಣೆಗೆ ಬೆಂಗಳೂರಿನ ಹಾಟ್ಸ್ಪಾಟ್ ನಲ್ಲಿ ಸಕಲ ಸಿದ್ದತೆಯನ್ನ ಪೊಲೀಸರು ಮಾಡಿಕೊಂಡಿದ್ದಾರೆ. ಸಂಭ್ರಮಾಚರಣೆಗೆ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ನಲ್ಲಿ ಭದ್ರತೆ ಹಾಗೂ ಮಹಿಳಾ ಸುರಕ್ಷತೆಗೆ ಪೊಲೀಸರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆ ಕುರಿತ ಸ್ಟೋರಿ ಇಲ್ಲಿದೆ.
ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಗಳಲ್ಲಿ ಪೊಲೀಸರು ಭರದಿಂದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ನಾಳೆಯ ನ್ಯುಇಯರ್ ಸೆಲೆಬ್ರೇಷನ್ ಗೆ ಅದ್ರಲ್ಲೂ ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಗೆ ಏನೇಲ್ಲ ಮುಂಜಾಗೃತ ಕ್ರಮ ಬೇಕು ಅವೇಲ್ಲವನ್ನ ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂಜಿ.ರಸ್ತೆಯನ್ನ ಖಾಕಿ ಭದ್ರತೆ ಜೊತೆಗೆ ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲು ಪೊಲೀಸರು ಸಿದ್ದತೆ ಮಾಡಿಕೊಳ್ಳತ್ತಿದ್ದಾರೆ.
ಇದನ್ನೂ ಓದಿ: ಟಿಪ್ಪು ಸುಲ್ತಾನನಂತೆ ಸಿದ್ದರಾಮಯ್ಯ ಹಿಂದೂ-ಮುಸ್ಲಿಮರನ್ನು ಬೇರೆ ಮಾಡುತ್ತಿದ್ದಾರೆ
ಈಗಾಗಲೇ ಲಕ್ಷಾಂತರ ಮಂದಿ ಸೇರಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವ ಸ್ಥಳಗಳಲ್ಲಿ ಸುಮಾರ 500 ಕ್ಕೂ ಹೆಚ್ಚು ಹೈ ಹ್ಯಾಂಡ್ ಸಿಸಿಟಿವಿಗಳನ್ನ ಅಳವಡಿಸಿದ್ದಾರೆ. 500 ಸಿಸಿಟಿವಿಯನ್ನ ಮಾನಿಟರಿಂಗ್ ಮಾಡೊದಕ್ಕೆ ಬ್ರಿಗೇಡ್ ರೋಡ್ ನಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಂ ಕೂಡ ತೆರೆದಿದ್ದಾರೆ. ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂ.ಜಿ ರೋಡ್ ನಲ್ಲಿ ಸುಮಾರು 16 ಐಲಾಂಡ್‌ಗಳನ್ನ ಮಾಡಲಾಗಿದೆ. ಐಲಾಂಡ್‌ನಲ್ಲಿ ಮಹಿಳೆಯರು ರೆಸ್ಟ್ ಮಾಡಲಿಕ್ಕೆ ಬೆಡ್, ಫಸ್ಟ್ ಎಡ್ ಬಾಕ್ಸ್, ಕುಡಿಯೋದಕ್ಕೆ ವಾಟರ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ನಾಳೆಯ ನ್ಯುಇಯರ್ ಸೆಲೆಬ್ರೇಷನ್‌ಗೆ ಬ್ರಿಗೇಡ್, ಎಂಜಿ ರೋಡ್‌ಗಳಲ್ಲಿ 3,500 ಸಾವಿರ ಪೊಲೀಸ್ ಸೇರಿದಂತೆ ಕೋರಮಂಗಲ ಹಾಗೂ ಇಂದಿರಾನಗರ ಸೇರಿದಂತೆ ಎಂಟು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದ್ದು, ಕುಡಿದು ಮತ್ತಿನಲ್ಲಿ ವಾಹನಗಳನ್ನ ಸಿಕ್ಕ ಸಿಕ್ಕಲ್ಲಿ ಪಾರ್ಕ್ ಮಾಡಿ ಹೋಗೋರಿಗೆ ಶಾಕ್ ನೀಡಲು ನಾಳೆ ತಾತ್ಕಾಲಿಕವಾಗಿ ಟೋಯಿಂಗ್ ವಾಹನಗಳನ್ನ ಬಳಸಲಾಗುತ್ತಿದೆ. ಒಟ್ಟಾರೆ ನಾಳೆಯ ನ್ಯುಇಯರ್ ಸೆಲೆಬ್ರೇಷನ್ ಸಿಟಿ ಪೊಲೀಸ್ರು ಪುಲ್ ರೆಡಿಯಾಗಿದ್ದು, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪುಲ್ ಅಲರ್ಟ್ ಆಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.