ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಜ್ಯದಲ್ಲಿ ಖಾಕಿ ಕಟ್ಟೆಚ್ಚರ..! ಗಲ್ಲಿಗಲ್ಲಿಯಲ್ಲೂ ಪೊಲೀಸ್ ಗಸ್ತು
ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ಉದ್ಘಾಟನೆ ಆಗ್ತಿದ್ದು. ರಾಜ್ಯಾದ್ಯಂತ ರಾಮನಾಮ ಜಪ ಜೋರಾಗಲಿದೆ. ಗಲ್ಲಿ ಗಲ್ಲಿಯಲ್ಲೂ ಶ್ರೀರಾಮನ ಕಟೌಟ್, ಬ್ಯಾನರ್‌ಗಳು ತಲೆ ಎತ್ತಲಿವೆ. ಅಹಿತಕರ ಘಟನೆ ನಡೆಯೋ ಸಾಧ್ಯತೆ ಇದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಬೆಂಗಳೂರು : ನಾಳೆ ರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಗಲ್ಲಿ ಗಲ್ಲಿಯಲ್ಲೂ ಪೊಲೀಸರು ಗಸ್ತು ತಿರುಗಲಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ಉದ್ಘಾಟನೆ ಆಗ್ತಿದ್ದು. ರಾಜ್ಯಾದ್ಯಂತ ರಾಮನಾಮ ಜಪ ಜೋರಾಗಲಿದೆ. ಗಲ್ಲಿ ಗಲ್ಲಿಯಲ್ಲೂ ಶ್ರೀರಾಮನ ಕಟೌಟ್, ಬ್ಯಾನರ್‌ಗಳು ತಲೆ ಎತ್ತಲಿವೆ. ಇದೇ ವೇಳೆ ಕಿಡಿಗೇಡಿಗಳಿಂದ ನಗರದಲ್ಲಿ ಅಹಿತಕರ ಘಟನೆ ನಡೆಯೋ ಸಾಧ್ಯತೆ ಇದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಕಣ್ಗಾವಲಿಟ್ಟಿದ್ದಾರೆ.
ಇದನ್ನೂ ಓದಿ:“ರಾಮಮಂದಿರ ಉದ್ಘಾಟನೆಯನ್ನು ಮೋದಿ ಅವರೇ ಮಾಡುತ್ತಿದ್ದಾರೆ”
ಹೌದು. ನಗರದಾದ್ಯಂತ ಈಗಾಗಲೇ ಶ್ರೀರಾಮನ ಮೂರ್ತಿ ಮತ್ತು ಕಟೌಟ್‌ಗಳು ತಲೆ ಎತ್ತಿವೆ. ಅಲ್ಲದೆ, ಈಗಾಗಲೇ ಪೊಲೀಸರು ಯಾವುದೇ ರ್ಯಾಲಿ ನಡೆಸದಂತೆ ವಾರ್ನ್ ಮಾಡಿದ್ದಾರೆ. ಕೇವಲ ದೇವಸ್ಥಾನ ಸೇರಿದಂತೆ ತಮ್ಮ ತಮ್ಮ ಸ್ಥಳಗಳಲ್ಲಿ ಪೂಜೆಗೆ ಮಾತ್ರ ಅವಕಾಶ ನೀಡಿದ್ದಾರೆ.
ಇನ್ನೂ ರಾಜ್ಯದ ಹಲವೆಡೆ ಶ್ರೀರಾಮನ ಫ್ಲೆಕ್ಸ್ ಗಳನ್ನು ಹರಿದು ಹಾಕಿರೊ ಘಟನೆಗಳು ಬೆಳಕಿಗೆ ಬರ್ತಿದ್ದು, ಅಂತಹ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಬೃಹತ್ ಕಟೌಟ್‌ಗಳು ಇರುವ ಕಡೆ ಸಿಬ್ಬಂದಿ ನಿಯೋಜಿಸಲು ಮುಂದಾಗಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ಅಷ್ಟೇ ಅಲ್ಲ ಗರುಡ ಪಡೆ ಕೂಡ ಗಸ್ತು ತಿರುಗಲಿದೆ.
ಇದನ್ನೂ ಓದಿ:ಮೈಕ್ರೋ ಆರ್ಟಿಸ್ಟ್ ಕೈಯಲ್ಲಿ ಅರಳಿದ ಅಯೋಧ್ಯಾ ರಾಮಮಂದಿರ
ಇನ್ನೂ ಬೆಂಗಳೂರಿನ ಪ್ರತಿ ಠಾಣೆಯ ಠಾಣಾಧಿಕಾರಿ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಮುಖ ಸರ್ವಧರ್ಮ ಮುಖಂಡರನ್ನು ಕರೆಸಿ ಶಾಂತಿ ಸಭೆ ಕೂಡ ನಡೆಸಿದ್ದಾರೆ. ರಾಮಮಂದಿರ ಉದ್ಘಾಟನೆ ವೇಳೆ ಕಾನೂನು ಕೈಗೆತ್ತಿಕೊಳ್ಳುವಂತಹ ಕೆಲಸ ಮಾಡಬಾರದು. ತಮ್ಮ ತಮ್ಮ ಸಮುದಾಯದವರಿಗೆ ಕಿವಿ ಮಾತು ಹೇಳುವಂತೆ ತಿಳಿ ಹೇಳಿದ್ದಾರೆ.
ಅಲ್ಲದೇ ಎಲ್ಲೆಲ್ಲಿ ಶ್ರೀರಾಮ ಮಂದಿರ ಆಂಜನೇಯ ದೇವಸ್ಥಾನಗಳು ಇರಲಿದ್ಯೋ ಅಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಆಗಲಿದ್ದಾರೆ. ಈಗಾಗಲೇ ಯಾವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕೂಡ ರಜೆ ತೆಗೆದುಕೊಳ್ಳದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.