ಬೆಂಗಳೂರು: ಸರ್ಕಾರ ವಿರುದ್ಧ ಇಂದು ಹಿಂದೂ ಪರ ಸಂಘಟನೆಗಳು ಕೆಂಡ ಕಾರ್ತಿವೆ. ಆಕ್ರೋಶದ ಕಟ್ಟೆ ಒಡೆದಿದೆ. ನಮ್ಮ ದೇವಾಲಯಕ್ಕೆ ನಮಗೆ ಎಂಟ್ರಿ ಇಲ್ಲ ಅಂದ್ರೆ ನಾವು ಎಲ್ಲಿದ್ದೇವೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹೌದು ಮಸೀದಿಗಳ ಮೇಲೆ ಇರುವ ಅನಧಿಕೃತ ಲೌಡ್ ಸ್ಪೀಕರ್ ತೆರವಿಗೆ ಶ್ರೀರಾಮ ಸೇನೆ ಕರೆ ನೀಡಿತ್ತು. ಆದ್ರೆ ಸರ್ಕಾರ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗದ ವೇಳೆ ಇಂದು ಬೆಳಗ್ಗೆ ಆಜಾನ್ ಕೂಗುವ ವೇಳೆ ದೇವಸ್ಥಾನದಲ್ಲಿ ಮೈಕ್ ಇಟ್ಟು ರಾಮ ತಾರಕ, ಹನುಮಾನ್ ಚಾಲೀಸ್ ಮಂತ್ರ ಪಠಣೆಗೆ ಹಿಂದೂ ಸಂಘಟನೆಗಳು ರೆಡಿಯಾಗಿದ್ರು. ಆದ್ರೆ ಇದಕ್ಕೆ ಪೊಲೀಸರು ಮಾತ್ರ ಅನುವು ಮಾಡಿಕೊಡಲಿಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಝಾನ್ ವಿರುದ್ಧ ಸುಪ್ರಭಾತ ಅಭಿಯಾನ : 'ಕರ್ನಾಟಕ ಸರ್ಕಾರ ಸುದೀರ್ಘ ನಿದ್ರೆಯಲ್ಲಿದೆ'


ಸೋಮವಾರ ಬೆಳಗ್ಗೆ 5 ಗಂಟೆಗೆ ಶಾಂತಿನಗರ ವಿಧಾನಸಭಾ ಕ್ಷೇತ್ರದ ವಿವೇಕನಗರ ಬಳಿ  ಆಂಜನೇಯ ದೇವಸ್ಥಾನದಲ್ಲಿ ಮೈಕ್ ಮುಖಂತಾರ ಹನುಮಾನ್ ಚಾಲೀಸ್ ಮಂತ್ರ ಜಪ ಮಾಡಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದರು. ಈ ವೇಳೆ 10ಕ್ಕೂ ಹೆಚ್ಚು ಶ್ರೀರಾಮ ಸೇನೆ ಕಾರ್ಯಕರ್ತರನ್ನ ಆಶೋಕ ನಗರ ಠಾಣೆಯ ಪೊಲೀಸರು ಬಂದಿಸಿದ್ದಾರೆ. ಈ ವೇಳೆ ಪೊಲೀಸ್ ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ ಉಂಟಾಯಿತು.


ಪೊಲೀಸರ ಬಂಧನ ನಂತ್ರ ಮಾತನಾಡಿದ ಶ್ರೀರಾಮ ಸೇನೆ ಕಾರ್ಯದರ್ಶಿ ಗಂಗಾಧರ್ ಕುಲಕರ್ಣಿ, ಈ ಸರ್ಕಾರಕ್ಕೆ ನಮ್ಮದೊಂದು ದಿಕ್ಕಾರವಿರಲಿ. ಸುಪ್ರೀಂ ಕೋರ್ಟ್ ಆದೇಶವನ್ನ ಪಾಲಿಸಬೇಕು. ಆದ್ರೆ ಕೋರ್ಟಿನ ಆದೇಶ ಪಾಲನೆ ಮಾಡದವರಿಗೆ ಈ ಸರ್ಕಾರ ಸಪೋರ್ಟ್ ಮಾಡ್ತಿದೆ‌.‌ ಡಿ.ಜೆ ಹಳ್ಳಿಯಲ್ಲಿ ಗಲಭೆ ಮಾಡಿದವರ ಬೆನ್ನಿಗೆ ಸರ್ಕಾರ ನಿಂತಿದೆ ಎಂದು ಆರೋಪಿಸಿದರು. ಈ ನಡೆ ನಮ್ಮ ಸಂವಿಧಾನ ವಿರೋಧಿ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರಾಮತಾರಕ ಮಂತ್ರ ಪಠಣ ಮೂಲಕ ಚಾಲನೆ ನೀಡಿದ ಕಾಳಿ ಸ್ವಾಮಿ:


ಇತ್ತ ಮನೆ ಮನೆ ರಾಮ ಜಪಕ್ಕೆ ಕಾಳಿಸ್ವಾಮಿ ಚಾಲನೆ ನೀಡಿದರು. ನಗರದ ಉಳ್ಳಾಲ ಆರ್ ಟಿ ಓ ಬಳಿಯ ಹಿಂದೂ ಭಕ್ತರ ಮನೆಯಲ್ಲಿ ಬೆಳಗ್ಗೆ 5:30ಕ್ಕೆ ರಾಮ ಜಪ ಹಾಡಿದ್ರು. ಇನ್ನೂ ಋಷಿಕುಮಾರ್ ಸ್ವಾಮಿ ಜೊತೆ‌ ವೃದ್ದೆಯೊಬ್ಬರು ಭಾಗಿಯಾಗಿ ಹನುಮಾನ್ ಚಾಲೀಸ್ ಮಂತ್ರವನ್ನ ಭಕ್ತಿಪೂರ್ವಕವಾಗಿ ಪಠಿಸಿದರು.


ಮತ್ತಷ್ಟು ತೀವ್ರಗೊಳ್ಳಲಿದೆ ಲೌಡ್ ಸ್ಪೀಕರ್ ದಂಗಲ್?


ಆಜಾನ್ ವಿರುದ್ಧ ಹಿಂದು ಪರ ಸಂಘಟನೆಗಳ ಸಮರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮತ್ತೆ ಮುಂದಿನ ಉಗ್ರ ಹೋರಾಟಕ್ಕೆ ಶ್ರೀರಾಮಸೇನೆ ಸಜ್ಜಾಗಿದೆ‌. ಹೀಗಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ನೇತೃತ್ವದಲ್ಲಿ ಎರಡು ದಿನಗಳೊಳಗಾಗಿ ಖಾಸಗಿ ಹೋಟೆಲ್ ನಲ್ಲಿ ಮಹ್ವದ ಸಭೆ ‌ನಡೆಯಲಿದೆ.


ಇದನ್ನೂ ಓದಿ: ಉದ್ಘಾಟನೆಗೊಂಡ ಎರಡೇ ತಿಂಗಳಲ್ಲಿ ಧರೆಗುರುಳಿದ ಸ್ಟೇಡಿಯಂ ಗ್ಯಾಲರಿ!


ಸಭೆಯಲ್ಲಿ 20ಕ್ಕೂ ಹೆಚ್ಚು ಹಿಂದುಪರ ಸಂಘಟನೆಗಳ ಮುಖಂಡರ ಭಾಗಿಯಾಗಲಿದ್ದು, ಮುಂದಿನ ಹೋರಾಟದ ಕುರಿತು ಚರ್ಚೆಯಾಗಲಿದೆ. ಒಟ್ಟಾರೆ ರಾಜ್ಯದಲ್ಲಿ ಧರ್ಮ ದಂಗಲ್ ಮುಂದುವರೆದ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಮುಟ್ಟುತ್ತೋ. ಅಥವಾ  ಪ್ರಾರಂಭದ ಹಂತದಲ್ಲೇ ಅಭಿಯಾನವನ್ನ ಸರ್ಕಾರ ಮಟ್ಟ ಹಾಕುತ್ತೋ ಕಾದು ನೋಡಬೇಕಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.