ಗದಗ: ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಆರಂಭವಾಗಿದೆ. ಸಂವಿಧಾನ ಬದಲಾವಣೆ  ಮಾಡುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅವರು  ಗದಗನಲ್ಲಿಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಈ ಚುನಾವಣೆ ಮುಂದಿನ ಜನಾಂಗಕ್ಕೆ ನಡೆಯುತ್ತಿದೆ. ಮೋದಿಯವರು ಮುತ್ಸದ್ದಿ ನಾಯಕರು. ಅವರು ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾರೆ.ಹಿಂದಿನ ರಾಜಕಾರಣಿಗಳು ಯುವಕರು, ಬಡವರ ಬಗ್ಗೆ ಯೋಚನೆ ಮಾಡಲಿಲ್ಲ. ಕೇವಲ ಕೆಲವು ಜನರ ಓಲೈಕೆಗೆ ತುಷ್ಡೀಕರಣ ರಾಜಕಾರಣ ಮಾಡಿ  ತಮ್ಮ ರಾಜಕಾರಣ ಮುಂದೆ ಮಾಡಿಕೊಂಡು ದೇಶವನ್ನು ಹಿಂದೆ ತಳ್ಳಿದ್ದಾರೆ ಎಂದರು.


ಇದನ್ನೂ ಓದಿ: Aishwarya Rajinikanth: ಡಿವೋರ್ಸ್‌ ಬೆನ್ನಲ್ಲೆ ಎರಡನೇ ಮದುವೆಗೆ ರೆಡಿಯಾದ್ರಾ ರಜನಿಕಾಂತ್ ಪುತ್ರಿ? ವರ ಯಾರು ಗೊತ್ತಾ?


ನಮ್ಮ ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವರ ಎಚ್ ಸಿ ಮಹದೇವಪ್ಪ ಸಂವಿಧಾನದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು, ಕಾಂಗ್ರೆಸ್ ನವರು 1975 ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ‌ ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದರು.ಎಷ್ಟೋ ಜನರ ಕಗ್ಗೊಲೆಯಾಯಿತು. ಆರ್ಟಿಕಲ್ 42 ಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ, ಸಂವಿಧಾನಕ್ಕೆ ಮರ್ಯಾದೆ ಕೊಡದವರು ಕಾಂಗ್ರೆಸ್ ನವರು ಈಗ ಸಂವಿಧಾನ ಬದಲಾಯಿಸುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಮೋದಿಯವರು ಪ್ರಧಾನಿಯಾಗಿ ಸಂಸತ್ತು ನನಗೆ ದೇಗುಲ ಇದ್ದಹಾಗೆ ಸಂವಿಧಾನ ಧರ್ಮಗ್ರಂಥ ಇದ್ದ ಹಾಗೆ ಎಂದು ಹೇಳಿದರು. ಯಾವುದೇ ಪಕ್ಷ ಎಷ್ಟೇ ಬಹುಮತ ಪಡೆದರೂ ಸಂವಿಧಾನದ ಮೂಲ ತತ್ವ ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ಕೇಶವಾನಂದ ಭಾರ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ 400 ಕ್ಕೂ ಹೆಚ್ಚು ಸ್ಥಾನ ಪಡೆದಿತ್ತು. ಶಾಭಾನು ಪ್ರಕರಣದಲ್ಲಿ ಗಂಡನಿಂದ ವಿಚ್ಚೇದನ ಹೊಂದಿದ ಅವಳಿಗೆ ಜೀವನಾಂಶ ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ತಪ್ಪಿಸಲು ಅಧಿಕಾರ ದುರುಪಯೋಗ ಪಡೆಸಿಕೊಂಡು ಸಂವಿಧಾನ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು. ಭಾರತದಲ್ಲಿ ಬಡತನ ಈಗಲೂ ಇರಲು ಕಾರಣ ಕಾಂಗ್ರೆಸ್. 1972 ರಲ್ಲಿ ಕಾಂಗ್ರೆಸ್ ಗರೀಬಿ ಹಠಾವೊ ಘೋಷಣೆ ಮಾಡಿದ್ದಾರೆ. ಆದರೂ, ಇನ್ನೂ ಬಡತನ ಇದೆ ಅಂದರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದರು.


ಮೋದಿ ಶಾಶ್ವತ ಯೋಜನೆ ನೀಡಿದ್ದಾರೆ:


ಮೋದಿಯವರು ದೇಶದ ಜನರಿಗೆ ಶಾಸ್ವತ ಯೋಜನೆಗಳನ್ನು ನೀಡುತ್ತಿದ್ದಾರೆ‌ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 4 ಕೋಟಿ ಮನೆ ನೀಡಿದ್ದಾರೆ. ಉಜ್ವಲ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗ್ಯಾಸ್ ಸಂಪರ್ಕ, ಜಲ ಜೀವನ್ ಮಿಷನ್ ಅಡಿಯಲ್ಲಿ 75 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಿ ಹೆಣ್ಣು ಮಕ್ಕಳ ಗೌರವ ಕಾಪಾಡಿದ್ದಾರೆ. ದೇಶದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. 130 ಕೋಟಿಗಿಂತ ಹೆಚ್ಚಿರುವ ಜನಸಂಖ್ಯೆ ಹೊಂದಿರುವ ಈ ದೇಶದ ಪ್ರತಿಯೊಬ್ಬ ಭಾರತೀಯ ತಾನು ಭಾರತೀಯ ಎಂದು ಮುಕ್ತವಾಗಿ ಹೇಳುವಂತೆ ಮಾಡಿದ್ದಾರೆ.


ಇದನ್ನೂ ಓದಿ: Mr & Mrs Mahi : ಮಿ ಮತ್ತು ಮಿಸೆಸ್ ಮಾಹಿ ರಿಲೀಸ್ ಗೆ ಡೇಟ್ ಫಿಕ್ಸ್


ಮೋದಿಯವರು ಭಯೋತ್ಪಾದನಾ ಮುಕ್ತ ಮಾಡಿದ್ದಾರೆ. ಭಯೋತ್ಪಾದಕರ ಕೇಂದ್ರಗಳಿಗೆ ತೆರಳಿ ಧ್ವಂಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕರಿಗೆ ಈಗ ಭಯ ಹುಟ್ಟಿದೆ. ನರೇಂದ್ರ ಮೋದಿಯವರ ಅಂತಹ ಪ್ರಬಲ ನಾಯಕರು.ಕಾಂಗ್ರೆಸ್ ನಲ್ಲಿ ಪ್ರಧಾನಿಯಾಗಲು ಸಮರ್ಥ ನಾಯಕರಿಲ್ಲ. ಖರ್ಗೆ ಮಾಡಲು ರಾಜ್ಯ ಕಾಂಗ್ರೆಸ್ ‌ನಾಯಕರಿಗೆ ಮನಸಿಲ್ಲ.ರಾಹುಲ್ ಗಾಂಧಿ ತಯಾರಿಲ್ಲ. ಮದುವೆ ಆಗಲು ಮದುಮಗ ಸಿದ್ದನಿಲ್ಲ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ನವರು ಮತ್ತೆ ಗ್ಯಾರೆಂಟಿ ಬಗ್ಗೆ ಹೇಳುತ್ತಿದ್ದಾರೆ.ಜನರ ಮನೆಗೆ ನೀರು, ಕರೆಂಟ್, ರಸ್ತೆ, ರೈತರ ಹೊಲಕ್ಕೆ ವಿದ್ಯುತ್ ಇಲ್ಲದಿದ್ದರೆ ಎಷ್ಟು ದುಡ್ಡು ಕೊಟ್ಟರೂ ಏನು ಪ್ರಯೋಜನ, ಮೋದಿಯವರು ದುಡಿಮೆಯ ಬಗ್ಗೆ ಮಾತನಾಡುತ್ತಾರೆ. ತಾವೂ ದುಡಿಯುತ್ತಾರೆ. ಎಲ್ಲರನ್ನೂ ದುಡಿಯುವಂತೆ ಪ್ರೇರೆಪಿಸುತ್ಗಿದ್ದಾರೆ ಎಂದು ಹೇಳಿದರು.


ಔದ್ಯೋಗಿಕ ಕೇಂದ್ರವಾಗಿ ಗದಗ ಅಭಿವೃದ್ದಿ:


ನಾನು ಸಿಎಂ ಆಗಿದ್ದಾಗ ಗದಗ ಯಲವಿಗಿ ರೈಲ್ವೆ ಯೋಜನೆಗೆ 600 ಕೋಟಿ ಮೀಸಲಿಟ್ಟಿದ್ದೆ.ಸಿದ್ದರಾಮಯ್ಯ ಬಜೆಟ್ ನಲ್ಲಿ ಕೈಬಿಟ್ಟಿದ್ದಾರೆ.ಗದಗ ನಗರವನ್ನು ಔದ್ಯೋಗಿಕ ಕೇಂದ್ತವನ್ನಾಗಿ ಮಾಡುವ ಕನಸಿದೆ. ಟೆಕ್ಸ್ ಟೈಲ್ ಹಾಗೂ ಫುಡ್ ಪ್ರೊಸೆಸ್ಸಿಂಗ್ ಉದ್ಯಮಕ್ಕೆ ಹೆಚ್ಚಿ‌ ನ ಅವಕಾಶ ಇದೆ. ಸಿಂಗಟಾಲೂರು ಯೋಜನೆ ಮೂಲಕ ರೈತರ ಹೊಲಗಳಿಗೆ ನೀರು ಹರಿಸಿ ನೀರಾವರಿ ಮಾಡಲಾಗುವುದು.ಕೊವಿಡ್ ನಲ್ಲಿ ಎಲ್ಲ ಜನರ ಜೀವ ಉಳಿಸಿ, ಅನ್ನ ಕೊಟ್ಟು, ನೀರು ಕೊಟ್ಡಿರುವ ನಾಯಕ ಮೋದಿ ಅವರಿಗೆ ಮತ ಹಾಕುವ ಮೂಲಕ ಋಣ ತೀರಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಸಿ.ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎಸ್ ವಿ ಸಂಕನೂರು, ಶಾಸಕ ಡಾ. ಚಂದ್ರು ಲವಾಣಿ ಹಾಗೂ ಮತ್ತಿತರ ನಾಯಕರು ಹಾಜರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.