ನವದೆಹಲಿ: ಇಂದು ಕರ್ನಾಟಕದಿಂದ ಸುಪ್ರಿಂಕೊರ್ಟ್ನಲ್ಲಿ ವಿಶೇಷವಾದ ಅರ್ಜಿಯೊಂದು ಸಲ್ಲಿಕೆಯಾಗಿದೆ.ವಿಶೇಷವೆಂದರೆ ಈ ಅರ್ಜಿಯನ್ನು ಸಲ್ಲಿಸಿದವರು ಕರ್ನಾಟಕದ ಪ್ರಭಾವಿ ರಾಜಕಾರಣಿಗಳ ಮಗಳು,ಇವರು ಈಗ ತಮಗೆ ಒಪ್ಪಿಗೆ ಇಲ್ಲದೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಅರ್ಜಿಯು ಕಳಬುರ್ಗಿಯಿಂದ ಸಲ್ಲಿಕೆಯಾಗಿದ್ದು, ಆದರೆ ಸುಪ್ರಿಂ ಕೋರ್ಟ್ ರಾಜಕಾರಣಿ ಮತ್ತು ಅವರ ಮಗಳ ಹೆಸರನ್ನು ಗೌಪ್ಯವಾಗಿಟ್ಟಿದೆ ಎಂದು ಹೇಳಲಾಗಿದೆ.ಸುಪ್ರಿಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ  ಅವರು ಒತ್ತಾಯ ಪೂರಕ ಮದುವೆಗಳಿಗೆ  ಕಾನೂನಾತ್ಮಕ ರಕ್ಷಣೆ ನೀಡಬೇಕು ಎಂದು ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.ಅರ್ಜಿಯ ವಿಚಾರಣೆಗೆ  ನ್ಯಾಯಾಲಯವು ಒಪ್ಪಗೆ ಸೂಚಿಸಿದ್ದು, ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿ ಸದಸ್ಯ ಪೀಠವು ಅರ್ಜಿಯ ವಿಚಾರಣೆಯನ್ನು , ಮೇ ಐದಕ್ಕೆ ನಡೆಸಲಿದೆ. 


ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿದರು,ವಾದ ಆಲಿಸಿದ ಪೀಠವು ರಾಜ್ಯ ಮತ್ತು ಕೇಂದ್ರ ಸರ್ಕಾರವು ಯುವತಿಯ ರಕ್ಷಣೆಗೆ ನಿಲ್ಲಬೇಕು ಎಂದು ಸೂಚಿಸಿದೆ.ಅಲ್ಲದೆ ಸದ್ಯವಿರುವ ಮದುವೆ ಸಂಭಂದವನ್ನು ರದ್ದುಪಡಿಸಬೇಕೆಂದರೆ ಕಲ್ಬುರ್ಗಿಯಲ್ಲಿರುವ  ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು ಎಂದು ಅದು ಸಲಹೆ ನೀಡಿದೆ