ಬೆಂಗಳೂರು : ಸನಾತನ ಧರ್ಮದ ಕುರಿತು ಅಸಂಬದ್ಧ ಹೇಳಿಕೆ ನೀಡಿರುವ ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಕರ್ನಾಟಕದಲ್ಲಿ ಅದನ್ನು ಸಮರ್ಥಿಸಿ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ, ಮಹದೇವಪ್ಪ ಹಾಗೂ ಪರಮೇಶ್ವರ್ ಅವರ ಹೇಳಿಕೆಗಳು ಆಘಾತಕಾರಿ ಹಾಗೂ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿವೆ ಎಂದು ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಅಸಂಬದ್ಧ ಖಂಡಿಸಿದ ಅವರು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಕರ್ನಾಟಕದ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಪರಮೇಶ್ವರ ಅವರು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಮನಬಂದಂತೆ ಹೇಳಿಕೆ ನಿಡುತ್ತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: "ಕೋಮುವಾದಿ ಶಕ್ತಿಗಳ ವಿರುದ್ಧ ಸೆಡ್ಡುಹೊಡೆದು ನಾವು ಬಿತ್ತಿದ್ದ ಪ್ರೀತಿಯ ಬೀಜ ವ್ಯರ್ಥವಾಗಲಿಲ್ಲ"


ಕರ್ನಾಟಕದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ನೀಡಿದ ಆಶ್ವಾಸನೆಗಳಿಗೆ ಕಂಡಿಶನ್ ಮೇಲೆ ಕಂಡಿಶನ್ ಹಾಕುತ್ತಾ ಕಾಲಹರಣ ಮಾಡುವುದರಲ್ಲೆ ಕಾಲ ಕಳೆಯುತ್ತಿದ್ದಾರೆ. ಒಂದೆಡೆ ಮಳೆಯಿಲ್ಲದೆ ಬರಗಾಲದ ಪರಿಸ್ಥಿತಿ ಎದುರಾಗಿದೆ ಮತ್ತೊಂದೆಡೆ ದಿನೆ ದಿನೆ ಲೋಡ್ ಶೆಡ್ಡಿಂಗ್ ಹೆಚ್ಚಾಗುತ್ತಿದೆ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದು ಶೋಭೆ ತರುವುದಿಲ್ಲ ತಕ್ಷಣವೆ ಮುಖ್ಯಮಂತ್ರಿಗಳು ಇವರ ರಾಜಿನಾಮೆ ಪಡೆದುಕೊಳ್ಳಬೇಕು ಎಂದಿದ್ದಾರೆ.


ಸನಾತನ ಧರ್ಮಕ್ಕೆ ಅನಾದಿ ಕಾಲದಿಂದಲೂ ತನ್ನದೆ ಆದ ಪರಂಪರೆ ಇದೆ ಎಲುಬಿಲ್ಲದ ನಾಲಿಗೆ ಇದೆಯೆಂದು ಬಾಯಿಗೆ ಬಂದಂತೆ ಹೇಳಿಕೆ ನೀಡಿದರೆ ಜನ ಎಲ್ಲದಕ್ಕು ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತಾರೆಂಬುದು ಮರೆಯಬಾರದು ತಕ್ಷಣವೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ದೇವಾಲಯಗಳ ಸ್ವಚ್ಛತೆಗೆ ಮುಜರಾಯಿ ಇಲಾಖೆ ಖಡಕ್ ನಿರ್ಧಾರ..!!


ಕರುಣಾನಿಧಿ ಅವರು ಕೂಡ ರಾಮಸೇತು ವಿರೋಧ ಸೇರಿದಂತೆ ಸನಾತನ ಧರ್ಮದ ವಿರುದ್ದವು ಹೇಳಿಕೆ ನೀಡುತ್ತಿದ್ದರು ಅದನ್ನೆ ಮುಂದುವರೆಸುತಿದ್ದಿರಾ ಸ್ಟಾಲಿನ್ ಅವರೆ ? ತಂದೆ ಮಕ್ಕಳು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂದು ತೋರಿಸಿಕೊಟ್ಟಿದ್ದಾರೆ ತಕ್ಷಣವೇ ದೇಶದ ಜನರಲ್ಲಿ ಕ್ಷಮೆ ಯಾಸಿಸಬೇಕು ಇಲ್ಲದಿದ್ದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.