ಇದು ರಾಷ್ಟ್ರೀಯ ಆಧಾರಿತ ಚುನಾವಣೆ ಜಾತಿ ಆಧಾರಿತವಲ್ಲ :ಸಚಿವ ಪ್ರಹ್ಲಾದ ಜೋಶಿ
ದೇಶಕ್ಕೆ ಯಾರ ನೇತೃತ್ವದ ಸರ್ಕಾರ ಬೇಕು ಎನ್ನುವುದನ್ನು ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ:ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ರಾಷ್ಟ್ರೀಯ ಸವಾಲು ಆಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ವ್ಯಾಖ್ಯಾನಿಸಿದರು. ಇದು ರಾಷ್ಟ್ರೀಯ ವಿಷಯ, ರಾಷ್ಟ್ರೀಯ ಆಧಾರಿತ, ಕ್ಷೇತ್ರದ ಅಭಿವೃದ್ಧಿ ಆಧಾರಿತದ ಮೇಲೆ ನಡೆಯುವ ಚುನಾವಣೆ ಆಗಿದೆ ಎಂದು ಹೇಳಿದರು. ಯಾವುದೇ ಜಾತಿಯ ಆಧಾರಿತ ಚುನಾವಣೆ ಇದಲ್ಲ ಎನ್ನುವುದನ್ನು ಜೋಶಿ ಸ್ಪಷ್ಟಪಡಿಸಿದರು.
ದೇಶಕ್ಕೆ ನರೇಂದ್ರ ಮೋದಿ ನೇತೃತ್ವ ಬೇಕೋ ಅಥವಾ ರಾಹುಲ್ ಗಾಂಧಿ-ಇಂಡಿಯಾ ಮೈತ್ರಿಕೂಟದ ಮತ್ತು ಇತರರ ನೇತೃತ್ವ ಬೇಕೋ? ಎಂಬ ವಿಷಯ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ.ಯಾರ ಸರ್ಕಾರ ಬೇಕು ಎನ್ನುವುದನ್ನು ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ : ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಸೌಮ್ಯರೆಡ್ಡಿಗೆ ಅನ್ಯಾಯವಾಗಿದೆ. ಕೋರ್ಟ್ ನಲ್ಲಿ ನ್ಯಾಯ ಸಿಗತ್ತೆ: ಸಿಎಂ ಸಿದ್ದರಾಮಯ್ಯ
ದಿಂಗಾಲೇಶ್ವರರು ಏನೇ ಹೇಳಿದರು ಆಶೀರ್ವಾದ:
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಬಗ್ಗೆ ಅವರೇನೇ ಹೇಳಿದರೂ ಅದನ್ನು ಆಶೀರ್ವಾದವೆಂದೇ ಭಾವಿಸುತ್ತೇನೆ ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಒಳ ಒಪ್ಪಂದ ಬಗ್ಗೆ ವಕ್ತಾರರು ಹೇಳ್ತಾರೆ:
ರಾಷ್ಟ್ರೀಯ ಪಕ್ಷಗಳ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಪ್ರಶ್ನೆಗೆ, ಉತ್ತರಿಸಿದ ಜೋಶಿ, ಅದರ ಬಗ್ಗೆ ಎರಡೂ ಪಕ್ಷೇಗಳ ವಕ್ತಾರರು ನೋಡಿಕೊಳ್ಳುತ್ತಾರೆ. ನಾನೇನು ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.
ಇದನ್ನೂ ಓದಿ : ಮೋದಿ ಬಡವರಿಗೆ ಶಾಸ್ವತ ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ: ಬಸವರಾಜ ಬೊಮ್ಮಾಯಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.